
ಬೆಂಗಳೂರು (ಏ.22): ವಿವಿಐಪಿಗಳ ಕಾರುಗಳಿಂದ ಕೆಂಪುದೀಪಗಳನ್ನು ತೆಗೆದು ಹಾಕುವ ಬಗ್ಗೆ ಮಾಧ್ಯಮದ ಮಂದಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ಕೇಳಿದಾಗ, ಅಧಿಕಾರ ಬೇಕೆಂದರೆ ಸಾಯಲಿ ಬಿಡಿ ಎಂದು ಮೋದಿಯವರ ಬಗ್ಗೆ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.
ನಡೆದಿದ್ದೇನು?
ವಿವಿಐಪಿಗಳ ಕಾರುಗಳಿಂದ ಕೆಂಪುದೀಪಗಳನ್ನು ತೆಗೆದು ಹಾಕಬೇಕೆಂದು ಕೇಂದ್ರ ಸಚಿವ ಸಂಪುಟ ಆದೇಶ ಹೊರಡಿಸಿತ್ತು. ಇದರ ಬಗ್ಗೆ ಮಾಧ್ಯಮದ ಮಂದಿ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ಕೇಳಿದಾಗ, ನಾನು ಈ ಕ್ರಮವನ್ನು ಸ್ವಾಗತಿಸುತ್ತೇನೆ. ಮೊದಲು ಮೋದಿಯವರು ತಮ್ಮ ಸೆಕ್ಯುರಿಟಿ ಕಾರ್ಡನ್ ನನ್ನು ತೆಗೆದು ಹಾಕಲಿ ಎಂದರು. ಆಗ ವರದಿಗಾರರು, ಇದು ಅವರ ಜೀವ ಬೆದರಿಕೆ ಇದೆಯಲ್ಲ ಅಂದಾಗ, ಅಧಿಕಾರ ಬೇಕೆಂದರೆ ಸಾಯಲಿ ಬಿಡಿ ಎಂದರು. ಆಮೇಲೆ ನಾನು ಹೇಳಿದ್ದು ಮೋದಿಯವರಿಗಲ್ಲ. ಯಾರಿಗೆ ಅಧಿಕಾರ ಬೇಕೋ ಅವರು ಸಾಯೋದಕ್ಕೂ ಹೆದರಬಾರದು ಎಂದು ಹೇಳಿದ್ದು. ಮೋದಿಯವರು ಸೆಕ್ಯುರಿಟಿ ಕವರನ್ನೂ ಕೂಡಾ ತೆಗೆದು ಹಾಕಬೇಕು ಎಂದು ತೇಪೆ ಹಚ್ಚಿದರು.
ನನಗೆ ರಕ್ಷಣೆ ಬೇಕೆಂದು ನಾನ್ಯಾವತ್ತೂ ಕೇಳಿಲ್ಲ. ನನ್ನ ಸ್ವಂತ ಕಾರಿನಲ್ಲಿ ಪ್ರಯಾಣಿಸಲು ನನಗೆ ಭಯವಿಲ್ಲ. ಯಾರಿಗಾದರೂ ನನ್ನನ್ನು ಸಾಯಿಸಬೇಕೆಂದಿದ್ದರೆ ನಾನು ಭಯಪಡುವುದಿಲ್ಲ. ಹಾಗೆ ಮಾಡಲಿ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಬಸವರಾಜ ರಾಯರೆಡ್ಡಿಯವರ ಈ ಹೇಳಿಕೆಯಿಂದ ಕೆರಳಿದ ಬಿಜೆಪಿ ವರನ್ನು ಸಂಪುಟದಿಂದ ತೆಗೆದು ಹಾಕಬೇಕೆಂದು ಒತ್ತಾಯಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.