ವಸಡಿನಲ್ಲಿ ರಕ್ತಸ್ರಾವ ಯಾಕಾಗುತ್ತದೆ?

Published : Apr 30, 2018, 06:12 PM IST
ವಸಡಿನಲ್ಲಿ ರಕ್ತಸ್ರಾವ ಯಾಕಾಗುತ್ತದೆ?

ಸಾರಾಂಶ

ವ ಸಡು ನಮ್ಮ ಹಲ್ಲಿನ ಸುತ್ತ ಇರುವ ದಂತಾದಾರ ಎಲುಬುಗಳ ಮೇಲ್ಪದರವನ್ನು ಮುಚ್ಚಿರುತ್ತದೆ. ಗಟ್ಟಿಯಾದ ಹಲ್ಲುಗಳ ದೃಢತೆಗೆ ಗುಲಾಬಿ ಬಣ್ಣದ ವಸಡಿನ ಸಹಕಾರ ಅತೀ ಅಗತ್ಯ.

ವಸಡು ನಮ್ಮ ಹಲ್ಲಿನ ಸುತ್ತ ಇರುವ ದಂತಾದಾರ ಎಲುಬುಗಳ  ಮೇಲ್ಪದರವನ್ನು ಮುಚ್ಚಿರುತ್ತದೆ. ಗಟ್ಟಿಯಾದ ಹಲ್ಲುಗಳ ದೃಢತೆಗೆ ಗುಲಾಬಿ ಬಣ್ಣದ ವಸಡಿನ ಸಹಕಾರ ಅತೀ ಅಗತ್ಯ. ಆರೋಗ್ಯವಂಥ ವಸಡು ನಸುಗುಲಾಬಿ ಬಣ್ಣ ಹೊಂದಿದ್ದು, ಮುಟ್ಟಿದಾಗ ಅಥವಾ ಹಲ್ಲುಜ್ಜುವಾಗ ರಕ್ತಸ್ರಾವವಾಗುವುದಿಲ್ಲ. ವಸಡಿನ ಬಣ್ಣ  ಕೆಂಪಗಾಗಿ, ವಸಡಿನಲ್ಲಿ ಹಲ್ಲುಜ್ಜುವಾಗ ರಕ್ತ ಒಸರಲು ಆರಂಭವಾದಲ್ಲಿ, ಅದು ವಸಡಿನ ಅನಾರೋಗ್ಯದ ಮುಖ್ಯ ಲಕ್ಷಣ.
 

ಕಾರಣ ಏನು?
1.  ವಸಡಿನ ಉರಿಯೂತ, ಪೆರಿಯೋಡೊಂಟೈಟಿಸ್ ಎಂಬ ಹಲ್ಲಿನ  ಸುತ್ತಲಿನ ಅಂಗಾಗಗಳ ಖಾಯಿಲೆ ಅತಿ ಮುಖ್ಯ ಕಾರಣ.

2. ಪಯೋರಿಯಾ ಎಂಬ ವಸಡು ಸಂಬಂಧಿ ರೋಗ. ಇದರಲ್ಲಿ ವಸಡಿನಲ್ಲಿ ರಕ್ತಸ್ರಾವದ ಜೊತೆಗೆ ಹಲ್ಲುಗಳು ತನ್ನಿಂತಾನೇ ಅಲುಗಾಡುವ ಸಾಧ್ಯತೆಯೂ ಇದೆ.3.  ವಿಟಮಿನ್ ಸಿ ಮತ್ತು ಕೆ ಯ ಕೊರತೆ.
4.  ಲುಕೇಮಿಯಾ ಅಥವಾ ರಕ್ತ ಕ್ಯಾನ್ಸರ್.
5. ಫ್ಲೇಟ್‌ಲೆಟ್‌ಗಳ ಸಂಖ್ಯೆ ೫೦ಸಾವಿರಕ್ಕಿಂತಲೂ ಕಡಿಮೆ ಇರುವುದು.
6.  ಇದಲ್ಲದೇ ಬಿರುಸಾದ ಬ್ರಶ್‌ನಿಂದ ಜೋರಾಗಿ ಹಲ್ಲುಜ್ಜಿದಾಗ ವಸಡಿಗೆ ಗಾಯವಾಗಿ ರಕ್ತಸ್ರಾವವಾಗಬಹುದು. ಗರ್ಭಿಣಿಯರಲ್ಲಿ ರಸದೂತಗಳ ವೈಪರೀತ್ಯದಿಂದಾಗಿ ವಸಡುಗಳು ಊದಿಕೊಂಡು ರಕ್ತ ಒಸರುವುದು ಸರ್ವೆ ಸಾಮಾನ್ಯ. 
 

ಚಿಕಿತ್ಸೆ ಹೇಗೆ?
1.  ಹಲ್ಲುಗಳ ಸುತ್ತ, ದಂತಕಿಟ್ಟದಲ್ಲಿ ಒಸಡುಗಳ ಬಳಿ ಬೆಳೆದ ದಂತ ಕಿಟ್ಟಗಳನ್ನು  ಮತ್ತು ದಂತ ಪಾಚಿಗಳನ್ನು ಶುಚಿಗೊಳಿಸಿದಲ್ಲಿ ವಸಡಿನ ಆರೋಗ್ಯ ಹಾಳಾಗುವುದಿಲ್ಲ. ಇಲ್ಲವಾದಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು, ವಸಡಿನ ಆರೋಗ್ಯ
ವನ್ನು ಕುಂದಿಸಿ ರಕ್ತಸ್ರಾವವಾಗಲು ಕಾರಣವಾಗುತ್ತದೆ. ವಸಡಿನಲ್ಲಿ ರಕ್ತಸ್ರಾವ ವಾಗಲು ಅತೀ ಮುಖ್ಯ ಕಾರಣ, ಬಾಯಿ ಸ್ವಚ್ಛವಿಲ್ಲದಿರುವುದು. ದಂತ ವೈದ್ಯರು ಬಾಯಿ ಶುಚಿಗೊಳಿಸಿದ ಬಳಿಕವೂ ರಕ್ತಸ್ರಾವ ಮುಂದುವರಿದಲ್ಲಿ ಹೆಚ್ಚಿನ ರಕ್ತ ಪರೀಕ್ಷೆ ಮತ್ತು ಇತರ ವೈದ್ಯರ ಸಲಹೆ ಅತೀ ಅಗತ್ಯ.
2.  ಹಲ್ಲುಜ್ಜುವ ವಿಧಾನ ಮತ್ತು ಸೂಕ್ತವಾದ ಬ್ರಶ್‌ಗಳ ಬಳಕೆ ಅತೀ  ಅವಶ್ಯಕ. ಮೆದುವಾದ ಬ್ರಶ್‌ನಿಂದ ನಿಧಾನವಾಗಿ ಮೇಲೆ ಕೆಳಗೆ ಸರಿಯಾದ ಕ್ರಮದಿಂದ 2ರಿಂದ 3 ನಿಮಿಷ ಹಲ್ಲುಜ್ಜಬೇಕು.
3.  ದಾಳಿಂಬೆ, ಪೇರಳೆ, ಕಿತ್ತಳೆ, ಟೊಮೆಟೊ, ಪಪ್ಪಾಯ, ಹಸಿರು ತರಕಾರಿ, ಅನಾನಸುಗಳಲ್ಲಿ ವಿಟಮಿನ್ ಸಿ ಹೆಚ್ಚಿರುತ್ತದೆ. ವಿಟಮಿನ್ ಕೆ ಹೆಚ್ಚು ಇರುವ ಹಸಿರು ತರಕಾರಿ, ಕ್ಯಾಬೇಜ್, ಈರುಳ್ಳಿ, ಬ್ರೊಕೋಲಿ ಸ್ಟ್ರಾಬೆರಿ ಹಣ್ಣು ಮುಂತಾದವುಗಳನ್ನು ಹೆಚ್ಚು ಸೇವಿಸಿ.
4.  ಎಲ್ಲಕ್ಕಿಂತ ಮುಖ್ಯವಾಗಿ ಈ ಸಮಸ್ಯೆ ಕಾಣಿಸಿಕೊಂಡಾಗ ವೈದ್ಯರನ್ನು ಸಂಪರ್ಕಿಸಿ. ಅವರು ಸರಿಯಾದ ಕಾರಣ ತಿಳಿದು ಚಿಕಿತ್ಸೆ ನೀಡುತ್ತಾರೆ.

ಈ ಕ್ರಮ ಅನುಸರಿಸಿ
* ಸರಿಯಾದ ಕ್ರಮದಲ್ಲಿ ಹಲ್ಲುಜ್ಜಿ.
* ದಂತದಾರ ಉಪಯೋಗಿಸಿ ಹಲ್ಲುಗಳ ನಡುವೆ ಆಹಾರ ಕಣಗಳು ಸಿಕ್ಕಿ ಹಾಕದಂತೆ ನೋಡಿಕೊಳ್ಳಿ.
* ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಬಾಯಿಯನ್ನು ಮುಕ್ಕಳಿಸಿ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!