ಕೆಪಿಸಿಸಿ ಅಧ್ಯಕ್ಷ ಪಟ್ಟ ಯಾರಿಗೆ? ಪರಮೇಶ್ವರ್‌'ಗೆ ವರದಾನವಾಗುತ್ತಾ ಜಾತಿ ಸಮೀಕ್ಷೆ?

By Suvarna Web DeskFirst Published May 15, 2017, 3:15 AM IST
Highlights

ರಾಜ್ಯ ಕಾಂಗ್ರೆಸ್'ನಲ್ಲಿಗ ಕೆಪಿಸಿಸಿ ಪಟ್ಟ ಯಾರು ಅಲಂಕರಿಸುತ್ತಾರೆ. ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅನೇಕ ಹೆಸರುಗಳು ಕೇಳಿಬರುತ್ತಿದ್ದು, ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ. ಆದರೆ ತನ್ನನ್ನೇ ಮುಂದುವರೆಸಿ ಎನ್ನುತ್ತಿರುವ ಹಾಲಿ ಹಾಲಿ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರಿಗೆ ಒಂದು ಬಲ ಸಿಕ್ಕಿದೆ. ಆ ಬಲ ಯಾವುದು ಅಂತೀರಾ? ಈ ಸ್ಟೋರಿ ಓದಿ

ಬೆಂಗಳೂರು(ಮೇ.15): ರಾಜ್ಯ ಕಾಂಗ್ರೆಸ್'ನಲ್ಲಿಗ ಕೆಪಿಸಿಸಿ ಪಟ್ಟ ಯಾರು ಅಲಂಕರಿಸುತ್ತಾರೆ. ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅನೇಕ ಹೆಸರುಗಳು ಕೇಳಿಬರುತ್ತಿದ್ದು, ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ. ಆದರೆ ತನ್ನನ್ನೇ ಮುಂದುವರೆಸಿ ಎನ್ನುತ್ತಿರುವ ಹಾಲಿ ಹಾಲಿ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರಿಗೆ ಒಂದು ಬಲ ಸಿಕ್ಕಿದೆ. ಆ ಬಲ ಯಾವುದು ಅಂತೀರಾ? ಈ ಸ್ಟೋರಿ ಓದಿ

ಸದ್ಯ ರಾಜ್ಯ ಕಾಂಗ್ರೆಸ್,ನಲ್ಲಿ ಕೆಪಿಸಿಸಿ ಅಧ್ಯಕ್ಷ ಗಾದಿ ಯಾರಿಗೆ ಸಿಗುತ್ತದೆ, ಹೈಕಮಾಂಡ್ ಯಾರಿಗೆ ಆ ಮಹತ್ತರ ಜವಬ್ದಾರಿ ನೀಡ್ತಾರೆ ಎನ್ನುವ ಪ್ರಶ್ನೆಗೆ ನಿಖರ ಉತ್ತರ ಯಾರ ಬಳಿಯೂ ಇಲ್ಲ. ಎಂ.ಬಿ ಪಾಟೀಲ್ ಆಗುತ್ತಾರಂತೆ, ಡಿ,ಕೆ ಶಿವಕುಮಾರ್ ಹೆಸರು ಫೈನಲಂತೆ, ಎಸ್ ಆರ್ ಪಾಟೀಲ್ ಆಯ್ಕೆಗೆ ಸಿಎಂ ಸಿದ್ದರಾಮ್ಯನವರೇ ಲಾಭಿಯಂತೆ ಹೀಗೆ ಅಂತೆ ಕಂತೆಗಳೆ ಸುಳಿದಾಡುತ್ತಿದೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಜಾತಿ ಸಮೀಕ್ಷೆ ಲೀಕ್ ಆಗಿದ್ದು , ಇದು ಜಿ ಪರಮೇಶ್ವರ್ ಅಥವಾ ಮಲ್ಲಿಕಾರ್ಜುನ ಖರ್ಗೆಯವರಿಗೆ ಪರೋಕ್ಷವಾಗಿ ಸಹಾಯ ಆಗಬಹುದಾ ಎನ್ನುವ ಮಾತುಗಳು ಕೇಳಿ ಬರ್ತಿದೆ. ಅದಕ್ಕೆ ಸಾಕ್ಷಿ ರೂಪದಲ್ಲಿ ಸಿಗೋದು ಅಧಿಕೃತವಾಗಿ ಬಿಡುಗಡೆಯಾಗದ ಜಾತಿ ಸಮೀಕ್ಷೆ. ಸಮೀಕ್ಷೆಗಳ ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ ಇತರೆಲ್ಲರಿಗಿಂತ ದಲಿತರ ಸಂಖ್ಯೆಯೆ ಹೆಚ್ಚಿದೆಯಂತೆ. ಈ ಸಮೀಕ್ಷೆಯ ವರದಿ ಲೀಕ್ ಆಗಿರೋದು ರಾಜಕೀಯದ ಒಂದು ಭಾಗ ಅಂತ ವಿಮರ್ಶೆಗಳು ನಡೆಯುತ್ತಿವೆ.

ಆರಂಭದಿಂದಲೂ ಕೆಪಿಸಿಸಿ ಅಧ್ಯಕ್ಷ ಸೀಟ್,ನಲ್ಲಿ ತನ್ನನ್ನೇ ಮುಂದುವರಿಸಿ, ಚುನಾವಣಾ ಸಮಯದಲ್ಲಿ ದಲಿತರನ್ನು ಬದಲಾಯಿಸೋದು ಸರಿಯಲ್ಲ ಎನ್ನುವ ಅಭಿಪ್ರಾಯವ ವ್ಯಕ್ತವಾಗಿತ್ತು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈಗ ಈ ಸಮೀಕ್ಷಾ ವರದಿಯನ್ನ ಹೈಕಮಾಂಡ್ ಗಮನಕ್ಕೆ ಒಂದು ವೇಳೆ ಪರಮೇಶ್ವರ್ ಅವರು ತಂದ್ರೆ ಹೈಕಮಾಂಡ್ ಒಪ್ಪತ್ತದೋ ಬಿಡುತ್ತದೋ ಆದರೆ ಒಮ್ಮೆ ಕಣ್ಣು ಹಾಯಿಸಬಹುದು.

ಒಂದು ವೇಳೆ ಜಿ ಪರಮೇಶ್ವರ್ ಅವರಿಗೆ ನೀವು ಗೃಹ ಖಾತೆಯೊಂದನ್ನೇ ನಿಭಾಯಿಸಿ ಎಂದು ಹೈಕಮಾಂಡ್ ಸೂಚಿಸಿದರೆ, ಆಗ ಇದೇ ಜಾತಿ ಸಮೀಕ್ಷಾ ವರದಿಯ ಹಿನ್ನಲೆಯಲ್ಲಿ ಇನ್ನೊಬ್ಬ ಕಾಂಗ್ರೆಸ್ ಹಿರಿಯ ಮುಖಂಡ ದಲಿತ ನಾಯಕ ಮಲ್ಲಿಖಾರ್ಜುನ ಖರ್ಗೆಯವರನ್ನು ಕೆಪಿಸಿಸಿ ಹುದ್ದೆಗೆ ಏರಿಸಿ ಎಂದು ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಬಹುದು.

ಇವೆಲ್ಲಾ ಕೇವಲ ಸಾಧ್ಯ-ಸಾಧ್ಯತೆಗಳು ಅಷ್ಟೇ ಹೀಗೆ ಆಗುತ್ತದೆ, ಹೈಕಮಾಂಡ್ ಜಾತಿ ಸಮೀಕ್ಷೆಯನ್ನ ಪರಿಗಣಿಸುತ್ತದೆ ಎಂದು ಹೇಳುವುದು ಕಷ್ಟ. ಆದರೆ ಈ ಜಾತಿ ಸಮೀಕ್ಷೆ ಸದ್ಯ ಕೆಪಿಸಿಸಿ ವಿಚಾರದಲ್ಲಿ ಒಂದು ಟಾಕ್ ಆಗಿದೆ ಅಷ್ಟೇ.

 

click me!