
ಚೆನ್ನೈ(ಡಿ.05): ತಮಿಳುನಾಡು ಸಿಎಂ ಜೆ. ಜಯಲಲಿತಾ ತೀವ್ರ ಹೃದಯಾಘಾತದಿಂದ ಚೆನ್ನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅಮ್ಮಾ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು ಜಯಲಲಿತಾ ಉತ್ತರಾಧಿಕಾರಿಯಾಗಿ ಜಯಾಗೆ ನಿಷ್ಠವಾಗಿರುವ ಓ ಪನ್ನೀರ ಸೆಲ್ವಂಗೆ ಪಟ್ಟ ನೀಡಲು ಸಿದ್ಧತೆ ನಡೆಯುತ್ತಿದೆ. ಇಂದು ಅಪೋಲೋದಲ್ಲಿ ನಡೆದ ತುರ್ತು ಸಭೆಯಲ್ಲಿ ಪಕ್ಷದ 136 ಶಾಸಕರು ಸಹಿ ಮಾಡಿ ಪನ್ನೀರ ಸೆಲ್ವಂ ಸಿಎಂ ಆಗಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ತಮಿಳುನಾಡು ಸಿಎಂ ಜಯಲಲಿತಾ ಅನುಪಸ್ಥಿತಿಯಲ್ಲಿ ಸಿಎಂ ಹುದ್ದೆ ನಿಭಾಯಿಸಿದವರು ಓ ಪನ್ನೀರ್ ಸೆಲ್ವಂ.. ಯಾವತ್ತು ಅಮ್ಮನ ಮಾತಿಗೆ ಮರು ಉತ್ತರ ನೀಡಿದವರಲ್ಲ. ಅಮ್ಮನ ಬಲಗೈ ಬಂಟ. ಇದೀಗ ಜಯಲಲಿತಾ ಉತ್ತರಾಧಿಕಾರಿಯಾಗಿಯೂ ಪನ್ನೀರ್ ಸೆಲ್ವಂ ಆಯ್ಕೆ ಮಾಡಲು ಸಿದ್ಧತೆ ನಡೆದಿದೆ.. ಅಪೋಲೋ ಆಸ್ಪತ್ರೆಯಲ್ಲೇ ಇಂದು ಸಂಜೆ 6 ಗಂಟೆ ಸುಮಾರಿಗೆ ನಡೆದ ಶಾಸಕರ ತುರ್ತು ಸಭೆಯಲ್ಲಿ ಪನ್ನೀರ ಸೆಲ್ವಂಗೆ 124 ಶಾಸಕರು ಬೆಂಬಲ ನೀಡಿದ್ದಾರೆ.
ಸ್ವಾಮಿನಿಷ್ಠೆಗೆ 2 ಬಾರಿ ಒಲಿದಿತ್ತು ಸಿಎಂ ಪಟ್ಟ: ಚಹಾ ಮಾರಿಕೊಂಡು ಜೀವನ ನಡೆಸುತ್ದಿದ್ದ ಪನ್ನೀರ ಸೆಲ್ವಂ ಅವರನ್ನು ಚೆನ್ನೈಗೆ ಕರೆದುಕೊಂಡು ಬಂದು ಜಯಾ ಅಧಿಕಾರ ನೀಡಿದ್ದರು.. ಅಂದಿನಿಂದಲೂ ಅಮ್ಮನ ಅಣತಿಯಂತೆ ನಡೆದುಕೊಂಡವರು ಪನ್ನೀರ್ ಸೆಲ್ವಂ. ಇವರ ಸ್ವಾಮಿನಿಷ್ಠೆಗೆ 2001ರಲ್ಲಿ ತಾನ್ಸಿ ಭೂ ಹಗರಣದಲ್ಲಿ ಜಯಲಲಿತಾ ಜೈಲು ಸೇರಿದಾಗ ಸಿಎಂ ಪಟ್ಟ ಒಲಿದು ಬಂದಿತ್ತು.. ಆದರೂ ಪನ್ನೀರ್ ಸೆಲ್ವಂ ಜಯಲಲಿತಾ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ. ಅಮ್ಮನ ಫೋಟೋ ಚೇರ್ ಮೇಲೆ ಇಟ್ಟು ರಾಜ್ಯಭಾರ ನಡೆಸಿದ್ದರು. ಜಯಲಲಿತಾ ದೋಷಮುಕ್ತರಾದಾಗ ಸಂತೋಷದಿಂದ ಸಿಎಂ ಸ್ಥಾನದಿಂದ ಕೆಳಗಿಳಿದರು.
ಪನ್ನೀರ್ ಸೆಲ್ವಂ ತಮಿಳುನಾಡಿನ ಪರಿಯಕುಲಂನವರು.. ಸದ್ಯಕ್ಕೆ ಥೆಣಿ ಜಿಲ್ಲೆಯ ಬಾಡಿನಾಯಕ್ಕನೂರ್ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ. 1996 - 2001ರಲ್ಲಿ ಪರಿಯಕುಲಂ ಪುರಸಭೆಯ ಅಧ್ಯಕ್ಷ ಸ್ಥಾನ ನಿರ್ವಹಿಸಿದ್ದಾರೆ. 2001-2002 ಮೊದಲ ಬಾರಿ ತಮಿಳುನಾಡು ಸಿಎಂ ಆಗಿ ಅಧಿಕಾರ ನಿರ್ವಹಿಸಿದ್ರು. 2006 ವಿರೋಧ ಪಕ್ಷದ ನಾಯಕನಾಗಿಯೂ ಸೇವೆ ಸಲ್ಲಿಸಿದ್ದಾರೆ. ಮತ್ತೆ 2014 - 2015ರಲ್ಲಿ ಎರಡನೇ ಬಾರಿ ಸಿಎಂ ಆಗಿ ಆಯ್ಕೆಯಾದರು. ಹಣಕಾಸು, ಲೋಕಪಯೋಗಿ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವವೂ ಪನ್ನೀರ್ ಸೆಲ್ವಂಗೆ ಇದೆ.
ಹೀಗೆ ಸ್ವಾಮಿ ನಿಷ್ಠೆಯಿಂದ ಪನ್ನೀರ್ ಸೆಲ್ವಂ ಸಿಎಂ ಹುದ್ದೆಯನ್ನ ನಿರ್ವಹಿಸಿದ್ದಾರೆ.. ಇದೀಗ ಮತ್ತೊಮ್ಮೆ ಪನ್ನೀರ್ ಸೆಲ್ವಂ ಜಯಲಲಿತಾ ಉತ್ತರಾಧಿಕಾರಿಯಾಗುವ ಎಲ್ಲಾ ಸಾಧ್ಯೆತಗಳು ದಟ್ಟವಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.