ಶ್ರೀರಾಮನ ಏಕೈಕ ಸಹೋದರಿ ಯಾರು?

Published : Oct 18, 2016, 04:31 PM ISTUpdated : Apr 11, 2018, 12:57 PM IST
ಶ್ರೀರಾಮನ ಏಕೈಕ ಸಹೋದರಿ ಯಾರು?

ಸಾರಾಂಶ

ಆದರೆ ಇಂಥ ಪ್ರಶ್ನೆಗಳು ಇದ್ದುದರಿಂದ ಪರೀಕ್ಷೆಗೆ ಹಾಜರಾಗಿದ್ದ 941 ವಿದ್ಯಾರ್ಥಿಗಳಲ್ಲಿ ಬಹುತೇಕ ಮಂದಿಗೆ ಈ ಗುರಿಯನ್ನು ಸಾಧಿಸಲಾಗಿಲ್ಲ. ಈ ಪರೀಕ್ಷೆಯಲ್ಲಿ ಸುಮಾರು 300ಕ್ಕೂ ಅಕ ಮಂದಿ ಒಂದು ಪ್ರಶ್ನೆಗೂ ಸರಿಯಾಗಿ ಉತ್ತರಿಸಲು ಸಾಧ್ಯವಿಲ್ಲ. 200 ಮಂದಿ ಮಾತ್ರ ಎರಡು ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ.

ಡೆಹ್ರಾಡೂನ್(ಅ.18): ರಾಮ ದೇವರ ಏಕೈಕ ಸಹೋದರಿಯ ಹೆಸರು ಏನು?, ಗ್ರೀಕ್‌ನ ಅಥೆನಾ ಮತ್ತು ರೋಮನ್ ಮಿನೆರ್ವಾಗೆ ಸಮಾನವಾದ ಭಾರತೀಯ ದೇವತೆ ಯಾರು?, ‘‘ಯಾವುದೇ ವಿಷಯ ಜಡವಾಗಿದ್ದಲ್ಲಿ, ಅಂಥ ವಿಷಯದಲ್ಲಿ ನಾನು ಸ್ವತಃ ಮಾರ್ಕ್ಸ್‌ವಾದಿ ಅಲ್ಲ’’ ಎಂದು ಹೇಳಿದವರು ಯಾರು? ಈ ಪ್ರಶ್ನೆಗಳು ಯಾವುದೋ ತರಗತಿಯ ಪರೀಕ್ಷೆ ಪ್ರಶ್ನೆಗಳೆಂದು ಕೊಳ್ಳಬೇಡಿ. ಇವು ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಜೆಎಸ್‌ಸಿಎ) ಸದಸ್ಯನಾಗಲು ಬಯಸುವ ಅಭ್ಯರ್ಥಿಯ ಪ್ರವೇಶ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಿವೆ.

ಜೆಎಸ್‌ಸಿಎ ಭಾನುವಾರ ನಡೆಸಿದ ಪರೀಕ್ಷೆಯಲ್ಲಿ ಸದಸ್ಯರಾಗಲು ಬಯಸುವ ಅಭ್ಯರ್ಥಿಗಳು 45 ನಿಮಿಷಗಳಲ್ಲಿ 40 ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು. ಆದರೆ ಇಂಥ ಪ್ರಶ್ನೆಗಳು ಇದ್ದುದರಿಂದ ಪರೀಕ್ಷೆಗೆ ಹಾಜರಾಗಿದ್ದ 941 ವಿದ್ಯಾರ್ಥಿಗಳಲ್ಲಿ ಬಹುತೇಕ ಮಂದಿಗೆ ಈ ಗುರಿಯನ್ನು ಸಾಧಿಸಲಾಗಿಲ್ಲ. ಈ ಪರೀಕ್ಷೆಯಲ್ಲಿ ಸುಮಾರು 300ಕ್ಕೂ ಅಕ ಮಂದಿ ಒಂದು ಪ್ರಶ್ನೆಗೂ ಸರಿಯಾಗಿ ಉತ್ತರಿಸಲು ಸಾಧ್ಯವಿಲ್ಲ. 200 ಮಂದಿ ಮಾತ್ರ ಎರಡು ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ. ಇಡೀ ಪರೀಕ್ಷೆಯಲ್ಲಿ ಅಷ್ಟು ಜನರಲ್ಲಿ ಅತಿ ಹೆಚ್ಚು ಅಂಕ ಪಡೆದವರ ಒಟ್ಟು ಅಂಕದ ಮೊತ್ತ ಕೇವಲ 17 ಮಾತ್ರ. ಅಭ್ಯರ್ಥಿಗಳ ಒಂದೇ ಒಂದು ಅದೃಷ್ಟ ಏನೆಂದರೆ, ಈ ಪರೀಕ್ಷೆಯಲ್ಲಿ ತಪ್ಪು ಉತ್ತರಕ್ಕೆ ಮೈನಸ್ ಮಾರ್ಕ್ ಇರಲಿಲ್ಲ ಮತ್ತು ಪಾಸ್ ಮಾರ್ಕ್ ಎಷ್ಟೆಂದು ನಿಗದಿ ಪಡಿಸಿರಲಿಲ್ಲ.

‘‘ನಾವು ಶೀಘ್ರದಲ್ಲೇ ಆಡಳಿತ ಮಂಡಳಿಯ ಸಭೆ ಕರೆಯಲಿದ್ದೇವೆ ಮತ್ತು ಯಾರನ್ನು ಜೆಎಸ್‌ಸಿಎ ಸದಸ್ಯರನ್ನಾಗಿ ಸೇರ್ಪಡೆಗೊಳಿಸಬೇಕೆಂಬುದನ್ನು ನಿರ್ಣಯಿಸುತ್ತೇವೆ. ಇಂಥ ಪ್ರತಿಕ್ರಿಯೆ ಲಭ್ಯವಾಗಿರುವುದಕ್ಕೆ ನಾವು ಸಂತುಷ್ಟರಾಗಿದ್ದೇವೆ. ಯಾವುದೇ ರಾಜ್ಯ ಸಂಸ್ಥೆಯಲ್ಲಿ ಇದೇ ಮೊದಲ ಬಾರಿ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ’’ ಎಂದು ಜೆಎಸ್‌ಸಿಎ ಅಧ್ಯಕ್ಷ ಅಮಿತಾಭ್ ಚೌಧರಿ ಹೇಳಿದ್ದಾರೆ.

ಕ್ರಿಕೆಟ್‌ಯೇತರ ವ್ಯಕ್ತಿಗಳನ್ನು ಸಂಸ್ಥೆಯ ಸದಸ್ಯರನ್ನಾಗುವಂತೆ ಉತ್ತೇಜಿಸಲು ಕೈಗೊಂಡ ಕ್ರಮವಿದು. ಪರೀಕ್ಷಾರ್ಥಿಗಳಿಗೆ ಪ್ರಶ್ನಾವಳಿ ಯಾವ ರೀತಿ ಇರುತ್ತದೆ ಎಂದು ಮೊದಲೇ ನಿರ್ದೇಶಿಸಲಾಗಿತ್ತು. ಕ್ರೀಡೆಗೆ ಸಂಬಂಸಿದ್ದಲ್ಲದೆ, ಸಾಮಾನ್ಯ ಜ್ಞಾನದ ಬಗ್ಗೆಯೂ ಪ್ರಶ್ನೆಗಳಿರುತ್ತವೆ ಎಂದು ಹೇಳಲಾಗಿತ್ತು. ಆದರೆ ಅವುಗಳಲ್ಲಿ ಪುರಾಣ, ರಾಜಕೀಯ, ಇತಿಹಾಸ ಮತ್ತು ಎಡಪಂಥೀಯ ಚಿಂತನೆಗೆ ಸಂಬಂಸಿದ ಪ್ರಶ್ನೆಗಳೂ ಇರುತ್ತವೆ ಎಂಬುದನ್ನು ಅಭ್ಯರ್ಥಿಗಳು ನಿರೀಕ್ಷಿಸಿರಲಿಲ್ಲ. ಪ್ರಶ್ನೆಗಳು ಕಠಿಣವಾಗಿರಲಿಲ್ಲ, ಕ್ರಿಕೆಟ್ ಪ್ರಿಯರಾಗಿದ್ದವರು ದಿನ ನಿತ್ಯ ಪತ್ರಿಕೆಗಳನ್ನು ಓದುತ್ತಿದ್ದರೆ, ಈ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದಾಗಿತ್ತು ಎಂದು ಜೆಎಸ್‌ಸಿಎ ಕಾರ್ಯದರ್ಶಿ ರಾಜೇಶ್ ವರ್ಮಾ ಹೇಳಿದ್ದಾರೆ. ಮೇಲೆ ತಿಳಿಸಲಾದ ಮೂರು ಪ್ರಶ್ನೆಗಳಿಗೆ ಉತ್ತರ ಕ್ರಮವಾಗಿ ಶಾಂತಾ, ಸರಸ್ವತಿ, ಕಾರ್ಲ್ ಮಾರ್ಕ್ಸ್.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ