ಆರೆಸ್ಸೆಸ್ ದೇಶದ್ರೋಹಿಯೇ? ಕ್ವಿಟ್ ಇಂಡಿಯಾ ಚಳವಳಿಯನ್ನು ವಿರೋಧಿಸಿತ್ತೇ? ಸುವರ್ಣನ್ಯೂಸ್ ಕಾರ್ಯಕ್ರಮದಲ್ಲಿ ಬಿಸಿಬಿಸಿ ಚರ್ಚೆ

By Suvarna Web DeskFirst Published Aug 9, 2017, 10:05 PM IST
Highlights

ಈ ದೇಶದ ಸ್ವತಂತ್ರ ಹೋರಾಟಕ್ಕೆ ಆರ್’ಎಸ್ಎಸ್ ಸಂಘ ಪರಿವಾರದ ಕೊಡುಗೆ ಏನು? ಕ್ವಿಟ್ ಇಂಡಿಯಾ ಚಳುವಳಿಯ 75 ನೇ ವರ್ಷಾಚರಣೆ ವೇಳೆ ಈ ಪ್ರಶ್ನೆ ಮತ್ತೊಮ್ಮೆ ಎದ್ದಿದೆ. ಕೇವಲ ಪಾರ್ಲಿಮೆಂಟ್’ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕೆ ಪ್ರತಿಕ್ರಿಯೆಯಾಗಿ ಅಲ್ಲ ಉಳಿದಂತೆ ಮುಖ್ಯಮಂತ್ರಿಗಳು, ಕೆಪಿಸಿಸಿ ಕಾರ್ಯಾಧ್ಯಕ್ಷರು ಸೇರಿದಂತೆ ಅನೇಕರು ಎತ್ತಿದ ಪ್ರಶ್ನೆ ಸ್ವತಂತ್ರ ಹೋರಾಟಕ್ಕೆ ನಿಮ್ಮ ಕೊಡುಗೆಯಾದರೂ ಏನು? ಯಾಕಿಷ್ಟು ದೇಶಭಕ್ತಿಯ ಮಾತನಾಡುತ್ತೀರಿ? ಈ ದೇಶಕ್ಕೆ ಸ್ವಾತಂತ್ರ ಕೊಡಿಸಿದವರು ಕಾಂಗ್ರೆಸ್’ನವರು, ನೀವಲ್ಲ ಎನ್ನುವ ವಾದ ಕೇಳಿ ಬಂದಿದೆ.  ನಿಜವಾಗಿಯೂ ನಮ್ಮ ದೇಶದ ಸ್ವತಂತ್ರದ ಹೋರಾಟದಲ್ಲಿ ಆರ್’ಎಸ್’ಎಸ್ ಪಾತ್ರ ಏನಿತ್ತು? ಆರ್’ಎಸ್’ಎಸ್'ನವರು ಕ್ವಿಟ್ ಇಂಡಿಯಾ ಚಳುವಳಿಗೆ ವಿರೋಧಿಸಿದ್ದರು ಅನ್ನೋದೇ ನಿಜವಾಗಿದ್ದಲ್ಲಿ ಯಾಕೆ? ವಿಷಯದ ಸತ್ಯಾಸತ್ಯತೆ ಬಗ್ಗೆ ಸುವರ್ಣ ನ್ಯೂಸ್ ಯಾರು ಕೊಡಿಸಿದ್ದು ಸ್ವಾತಂತ್ರ?  ಚರ್ಚೆ ನಡೆಸಿತು. ಇದರಲ್ಲಿ ಜಿಎನ್ ನಾಗರಾಜ್ ಪ್ರಗತಿಪರ ಚಿಂತಕರು, ಮಂಥನ ವೇದಿಕೆಯಿಂದ ರಾಧಾಕೃಷ್ಣ ಹೊಳ್ಳ, ಹಿರಿಯ ಕಾಂಗ್ರೆಸ್ ಮುಖಂಡ ಉಗ್ರಪ್ಪ, ಶಫಿವುಲ್ಲಾ ಸಾಹೇಜ್ ಜೆಡಿಎಸ್ನಿಂದ, ಹಾಗೂ ತೇಜಸ್ವೀ ಸೂರ್ಯ ಭಾಗವಹಿಸಿದ್ದರು.

ಬೆಂಗಳೂರು (ಆ.09): ಈ ದೇಶದ ಸ್ವತಂತ್ರ ಹೋರಾಟಕ್ಕೆ ಸಂಘ ಪರಿವಾರದ ಕೊಡುಗೆ ಏನು? ಕ್ವಿಟ್ ಇಂಡಿಯಾ ಚಳುವಳಿಯ 75 ನೇ ವರ್ಷಾಚರಣೆ ವೇಳೆ ಈ ಪ್ರಶ್ನೆ ಮತ್ತೊಮ್ಮೆ ಎದ್ದಿದೆ. ಕೇವಲ ಪಾರ್ಲಿಮೆಂಟ್’ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕೆ ಪ್ರತಿಕ್ರಿಯೆಯಾಗಿಯಷ್ಟೇ ಅಲ್ಲ, ಮುಖ್ಯಮಂತ್ರಿಗಳು, ಕೆಪಿಸಿಸಿ ಕಾರ್ಯಾಧ್ಯಕ್ಷರು ಸೇರಿದಂತೆ ಅನೇಕರು ಎತ್ತಿದ ಪ್ರಶ್ನೆ... ಸ್ವಾತಂತ್ರ್ಯ ಹೋರಾಟಕ್ಕೆ ನಿಮ್ಮ ಕೊಡುಗೆಯಾದರೂ ಏನು? ಯಾಕಿಷ್ಟು ದೇಶಭಕ್ತಿಯ ಮಾತನಾಡುತ್ತೀರಿ? ಈ ದೇಶಕ್ಕೆ ಸ್ವಾತಂತ್ರ ಕೊಡಿಸಿದವರು ಕಾಂಗ್ರೆಸ್’ನವರು, ನೀವಲ್ಲ ಎನ್ನುವ ವಾದ ಕೇಳಿ ಬಂದಿದೆ.  ನಿಜವಾಗಿಯೂ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆರ್’ಎಸ್’ಎಸ್ ಪಾತ್ರ ಏನಿತ್ತು? ಆರ್’ಎಸ್’ಎಸ್'ನವರು ಕ್ವಿಟ್ ಇಂಡಿಯಾ ಚಳುವಳಿಯನ್ನು ವಿರೋಧಿಸಿದ್ದರು ಅನ್ನೋದೇ ನಿಜವಾಗಿದ್ದಲ್ಲಿ ಯಾಕೆ? ಈ ವಿಷಯದ ಸತ್ಯಾಸತ್ಯತೆ ಬಗ್ಗೆ ಸುವರ್ಣ ನ್ಯೂಸ್'ನಲ್ಲಿ "ಯಾರು ಕೊಡಿಸಿದ್ದು ಸ್ವಾತಂತ್ರ?" ಚರ್ಚೆ ನಡೆಯಿತು. ಇದರಲ್ಲಿ ಪ್ರಗತಿಪರ ಚಿಂತಕರಾದ ಜಿಎನ್ ನಾಗರಾಜ್, ಮಂಥನ ವೇದಿಕೆಯಿಂದ ರಾಧಾಕೃಷ್ಣ ಹೊಳ್ಳ, ಹಿರಿಯ ಕಾಂಗ್ರೆಸ್ ಮುಖಂಡ ಉಗ್ರಪ್ಪ, ಮುಸ್ಲಿಂ ಮುಖಂಡ ಶಫೀವುಲ್ಲಾ, ಹಾಗೂ ಬಿಜೆಪಿ ಯುವ ಮುಖಂಡ ತೇಜಸ್ವೀ ಸೂರ್ಯ ಭಾಗವಹಿಸಿದ್ದರು.

ಸ್ವಾತಂತ್ರ ಹೋರಾಟಕ್ಕೆ ಆರ್’ಎಸ್ ಎಸ್ ಕೊಡುಗೆ ಏನು? ನಿಜವಾಗಿಯೂ ಆರ್'ಎಸ್'ಎಸ್ ಕ್ಚಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿರಲಿಲ್ಲವಾ?

Latest Videos

ಸಾರ್ವಜನಿಕ ಜೀವನದಲ್ಲಿ ಆಗಿರುವ ದೊಡ್ಡ ದುರಂತ ಏನು ಅಂದ್ರೆ ಎಡಪಂಥೀಯ ಬುದ್ದಿಜೀವಿಗಳು ಹಾಗೂ ಅವರಿಗೆ ಆಶ್ರಯ ಕೊಟ್ಟಿರುವ ಕಾಂಗ್ರೆಸ್ ಒಂದೇ ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸತ್ಯ ಎಂಬಂತೆ ಬಿಂಬಿಸಿವೆ. ಆರ್’ಎಸ್ಎಸ್ ಪ್ರಾರಂಭಿಸಿದ ಡಾ. ಹೆಡಗೇವಾರ್ ಅವರು, ಮಹಾತ್ಮ ಗಾಂಧಿ ಕರೆಕೊಟ್ಟಿರುವ ಸತ್ಯಾಗ್ರಹದಲ್ಲಿ ಭಾಗವಹಿಸಿ, ಜಂಗಲ್ ಸತ್ಯಾಗ್ರಹದಲ್ಲಿ ಬಹಳ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಒಂದು ವರ್ಷಗಳ ಕಾಲ ಜೈಲು ವಾಸವನ್ನು ಅನುಭವಿಸಿದರು. ಆರ್'ಎಸ್'ಎಸ್  ಹಲವಾರು ಕಾರ್ಯಕರ್ತರು ಚಿಮೂರ್’ನಲ್ಲಿ ಅಸ್ಥಿಯಲ್ಲಿ, ಸೆಂಟ್ರಲ್ ಪ್ರಾವಿಸೆನ್ಸ್’ನಲ್ಲಿ ಆ ಭಾಗದಲ್ಲಿ ಹೋರಾಟ ಮಾಡಿರುವ ಹಲವಾರು ಉದಾಹರಣೆಗಳಿವೆ. ಹಿಂದೂ ಮಹಾಸಭಾ, ಶ್ಯಾಮ್ ಪ್ರಸಾದ್ ಮುಖರ್ಜಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ.ಬಂಗಾಳದಲ್ಲಿ ವಿರೋಧಿಸಲು ಕಾರಣ ಆವಾಗ ನಡಿತಿದ್ದ ದೇಶ ವಿಭಜನೆ ಆಗಬೇಕು ಎನ್ನುವ ಕೂಗು ಇತ್ತಲ್ಲ ಅದರ ವಿರುದ್ಧ ಹಿಂದೂಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದರು. ಶ್ಯಾಮ್ ಪ್ರಸಾದ್ ಮುಖರ್ಜಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಲಿಲ್ಲ ಅಂತ ದೇಶದ್ರೋಹಿ ಅಂತೀರಿ. ಅಂಬೇಡ್ಕರ್ ಕೂಡಾ ಕ್ವಿಟ್ ಇಂಡಿಯಾ ಚಳುವಳಿಯನ್ನು ವಿರೋಧಿಸಿದ್ದನ್ನ ನೀವು ಗಮನಿಸಬೇಕು. ನಮ್ಮ ಮಾಹರ್ ಹುಡುಗ್ರು, ದಲಿತ ಹುಡುಗ್ರು ಬ್ರಿಟಿಷ್ ಸೇನೆ ಸೇರ್ಕೋಬೇಕು ಅಂತ ಅಂಬೇಡ್ಕರ್ ಕೂಡಾ ಹೇಳಿದ್ರು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

click me!