ಎರಡು ದಿನಗಳ ಹಿಂದೆ ದಾಳಿಗೆ ಒಳಗಾಗಿದ್ದ ಬೆಂಗಾಲ್ ಟೈಗರ್ ಸಾವು

By Suvarna Web DeskFirst Published Sep 21, 2017, 8:06 PM IST
Highlights

ಕಳೆದ ಎರಡು ದಿನಗಳ ಹಿಂದೆ ಬೆಂಗಾಲದ ಟೈಗರ್  ಅಟ್ಯಾಕ್ ಮಾಡಿ ತೀವ್ರಗಾಯಕ್ಕೆ ಒಳಗಾಗಿದ್ದ ಬಿಳಿ ಹುಲಿ ಇಂದು ಸಾವನಪ್ಪಿದೆ.

ಬೆಂಗಳೂರು (ಸೆ.20): ಕಳೆದ ಎರಡು ದಿನಗಳ ಹಿಂದೆ ಬೆಂಗಾಲದ ಟೈಗರ್  ಅಟ್ಯಾಕ್ ಮಾಡಿ ತೀವ್ರಗಾಯಕ್ಕೆ ಒಳಗಾಗಿದ್ದ ಬಿಳಿ ಹುಲಿ ಇಂದು ಸಾವನಪ್ಪಿದೆ.

ನಗರದ ಹೊರವಲಯ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ನಲ್ಲಿ ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು,  ಇದೀಗ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ  ಬೆಂಗಾಲ್ ದ  ಬಿಳಿ ಟೈಗರ್ ಸಾವನ್ನಪ್ಪಿದೆ. ಸಫಾರಿಯಲ್ಲಿರುವ ಮೂರು ಬೆಂಗಾಲ್ ಟೈಗರ್ಸ್ ದಾರಿ ತಪ್ಪಿ ಬಂದಿದ್ದ ಮೃದು ಸ್ವಭಾವದ ಬಿಳಿ ಟೈಗರ್  ಮೇಲೆ ಅಕ್ಷರಶಃ  ರೌಡಿಗಳಂತೆ  ಅಟ್ಯಾಕ್ ಮಾಡಿ ತೀವ್ರವಾಗಿ ಗಾಯಗೊಳಿಸಿದ್ದವು, ಇನ್ನೂ ತೀವ್ರವಾಗಿ ಗಾಯಗೊಂಡಿರುವ ಬಿಳಿ ಹುಲಿ ಮೇಲೆ ಏಳೋದಕ್ಕೆ ಸಾಧ್ಯವಾಗುತ್ತಿರಲಲಿಲ್ಲ, ಬಹುಶಃ ಸ್ಪೈನಲ್ ಕಾರ್ಡ್ ಬೆನ್ನು ಹುರಿಗೆ ಬಲವಾದ ಪೆಟ್ಟು ಬಿದ್ದು, ಈ ಹುಲ್ಲಿ ಸಾವನ್ನಪ್ಪಿರು ಸಾಧ್ಯತೆ ಇದೆ.  ಬಹುತೇಕ ಎಲ್ಲೇಡೆ ಬಿಳಿ ಹುಲಿ ಮತ್ತು ಕೆಂಪು ಮತ್ತು ಕಂದು ಬಣ್ಣದ ಹುಲಿಗಳನ್ನು ಪ್ರತ್ಯೇಕವಾಗಿ ಇರಿಸಿ ನುರಿತ ಕೆಲಸಗಾರರನ್ನು ಕಾವಲಿಗಿರುಸುತ್ತಾರೆ, ಆದರೆ ಬನ್ನೇರುಘಟ್ಟ ಪಾರ್ಕ್ನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಕಾಬಿಟ್ಟಿಯಾಗಿ ವಾಚರ್ ಗಳನ್ನು ಇಟ್ಟು ಕೆಲಸ ಮಾಡಿಸುತ್ತಿದ್ದಾರೆ, ಇದರಿಂದಲೇ ಈ ಬಿಳಿ ಹುಲಿ ಸಾವನ್ನಪ್ಪಿದೆ.

click me!