
ಬೆಂಗಳೂರು(ಸೆ.20): ದ್ವಿಚಕ್ರವಾಹನ ವ್ಹೀಲಿಂಗ್ ಮಾಡಿದ್ದ ಫೋಟೊವನ್ನು ತನ್ನ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಯುವಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
ಕೋಲ್ಸ್‌ಪಾರ್ಕ್‌ನ ಸೆಂಟ್ರಲ್ ಸ್ಟ್ರೀಟ್ ನಿವಾಸಿ ಮಹಮದ್ ಜುಬೇರ್ (21) ಬಂಧಿತ. ಸೆ.13ರಂದು ಬಕ್ರಿದ್ ಹಬ್ಬದ ದಿನ ಸ್ನೇಹಿತನ ದ್ವಿಚಕ್ರ ವಾಹನ ಪಡೆದ್ದ ಜುಬೇರ್ ವೀಲ್ಹಿಂಗ್ ಮಾಡಿದ್ದ. ಈ ವೇಳೆ ತೆಗೆಸಿಕೊಂಡಿದ್ದ ಫೋಟೊವನ್ನು ತನ್ನ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದ. ಈ ಬಗ್ಗೆ ಸಾರ್ವಜನಿಕರೊಬ್ಬರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಜುಬೇರ್‌ನನ್ನು ಬಂಧಿಸಿದ್ದಾರೆ. ತಾನು ವ್ಹೀಲಿಂಗ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
'ವ್ಹೀಲಿಂಗ್ ಫ್ರೆಂಡ್ಸ್’ ಎಂದು ಫೇಸ್‌ಬುಕ್ ಗ್ರೂಪ್ ಇದೆ: ಜುಬೇರ್‌ಗೆ ಶಾಲಾ ದಿನಗಳಿಂದಲೂ ಬೈಕ್ ಕ್ರೇಜ್ ಹತ್ತಿಸಿಕೊಂಡಿದ್ದ. ಬೈಕ್ ಸಿಕ್ಕಾಗಲೆಲ್ಲಾ ವ್ಹೀಲಿಂಗ್ ಮಾಡುತ್ತಿದ್ದ. ಜುಬೇರ್ ಜೊತೆಗೆ ಕೆಲ ಯುವಕರ ಗುಂಪು ನಗರದ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ವ್ಹೀಲಿಂಗ್ ಮಾಡಿದ ಫೋಟೋಗಳನ್ನು ಫೇಸ್‌ಬುಕ್ ಖಾತೆಯಲ್ಲಿ ಹಾಕಿಕೊಳ್ಳುತ್ತಾರೆ. ಇದಕ್ಕಾಗಿಯೇ ಫೇಸ್‌ಬುಕ್‌ನಲ್ಲಿ ವ್ಹೀಲಿಂಗ್ ಫ್ರೆಂಡ್ಸ್ ಹೆಸರಿನಲ್ಲಿ ಖಾತೆಯನ್ನೂ ತೆರೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು ವ್ಹೀಲಿಂಗ್ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.