ಕಾವೇರಿ ವಿವಾದ- ಸುಪ್ರೀಂ ಹೇಳಿದ್ದೇನು?

Published : Sep 12, 2016, 09:17 AM ISTUpdated : Apr 11, 2018, 01:00 PM IST
ಕಾವೇರಿ ವಿವಾದ- ಸುಪ್ರೀಂ ಹೇಳಿದ್ದೇನು?

ಸಾರಾಂಶ

ಸುಪ್ರೀಂ ಕೋರ್ಟ್‌ ಹೇಳಿದ್ದೇನು?

1. ನ್ಯಾಯಾಲಯದ ಆದೇಶ ಪಾಲನೆ ಮಾಡದೇ ಇರುವುದಕ್ಕೆ, ಸರ್ಕಾರವು ಕಾನೂನು ಸುವ್ಯವಸ್ಥೆ ವಿಚಾರವನ್ನು ನೆಪ ಮಾಡುವ ಹಾಗಿಲ್ಲ.

2. ಪ್ರತಿಭಟನೆಗಳು ಸ್ವಯಂಪ್ರೇರಿತವಾಗಿ ನಡೆದಿರಲಿ ಅಥವಾ ಪ್ರಚೋದನೆಯಿಂದ ನಡೆದಿರಲಿ, ಅದು ನಮ್ಮ ಆದೇಶದ ಮಾರ್ಪಾಡು ಕೋರಲು ಹೇಳುವ ಕಾರಣವಲ್ಲ.

3. ಕರ್ನಾಟಕ ಉಲ್ಲೇಖಿಸಿರುವ ಕಾನೂನು ಸುವ್ಯವಸ್ಥೆ ವಿಚಾರ ಒಪ್ಪತಕ್ಕದ್ದಲ್ಲ ಮತ್ತು ಸಮರ್ಥನೀಯವಲ್ಲ. ಅರ್ಜಿಯಲ್ಲಿರುವ ಆರೋಪಗಳು ಕೋರ್ಟ್‌ ಮುಂದೆ ತರುವಂಥದ್ದಲ್ಲ.

4. ಆದೇಶದ ಉಲ್ಲಂಘನೆ ಹಾಗೂ ನ್ಯಾಯಾಲಯಕ್ಕೆ ಅಗೌರವವನ್ನು ಸಹಿಸುವುದಿಲ್ಲ. ನಾಗರಿಕರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳುವಂತಿಲ್ಲ.

5. ಸೆ.5ರ ಆದೇಶವನ್ನು ಮಾರ್ಪಾಡು ಮಾಡಲು ನಾವು ಒಪ್ಪುತ್ತೇವೆ. ಅದರಂತೆ, ಕರ್ನಾಟಕ ರಾಜ್ಯವು ತಮಿಳುನಾಡಿಗೆ ದಿನಕ್ಕೆ 12 ಸಾವಿರ ಕ್ಯುಸೆಕ್‌ ನೀರನ್ನು ಬಿಡುಗಡೆ ಮಾಡಬೇಕು.

6. ಅಷ್ಟೇ ಅಲ್ಲ, ನೀರು ಬಿಡುಗಡೆಯ ಆದೇಶವು ಸೆಪ್ಟೆಂಬರ್‌ 20ರವರೆಗೆ ಮುಂದುವರಿಯುತ್ತದೆ.

7. ನಮ್ಮ ಆದೇಶದನ್ವಯ ಕರ್ನಾಟಕವು ದಿನಕ್ಕೆ 0.86 ಟಿಎಂಸಿ ನೀರು ಬಿಡುಗಡೆ ಮಾಡಿರುವುದು ಉತ್ತಮ ಬೆಳವಣಿಗೆ. ಹಾಗಂತ, ಇಡೀ ಆದೇಶಕ್ಕೆ ತಡೆಯಾಜ್ಞೆ ತರಬೇಕೆಂಬ ವಾದವನ್ನು ನಾವು ಒಪ್ಪುವುದಿಲ್ಲ.

8. ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಾಂವಿಧಾನಿಕ ಹೊಣೆಗಾರಿಕೆಯನ್ನು ಹೊಂದಿವೆ ಎಂಬುದು ನೆನಪಿರಲಿ.

9. ಆದೇಶ ಮಾರ್ಪಾಡು ಆಗದ ಹೊರತು ನಮ್ಮ ಆದೇಶವನ್ನು ಪಾಲಿಸದೇ ಇರುವುದಕ್ಕೆ ಯಾವ ಕಾರಣಕ್ಕೂ ಅವಕಾಶವಿಲ್ಲ.

10. ಮೇಲುಸ್ತುವಾರಿ ಸಮಿತಿಯ ನಿರ್ಧಾರದ ಬಳಿಕ ಸೆಪ್ಟೆಂಬರ್‌ 20ರಂದು ಮುಂದಿನ ವಿಚಾರಣೆ ನಡೆಸಲಾಗುವುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲ್‌ನಲ್ಲಿ ಹುಡುಗಿಗೆ ಪ್ರಪೋಸ್ ಮಾಡಿ ಅಲ್ಲೇ ತಾಳಿ ಕಟ್ಟಿದ ಯುವಕ: ವೀಡಿಯೋ ಭಾರಿ ವೈರಲ್
Hate Speech Bill: ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು