
ಮುಂಬಯಿ(ಅ.16): ಪಾಕಿಸ್ಥಾನಿ ಕಲಾವಿದರು ನಟಿಸಿರುವ ಚಿತ್ರಗಳನ್ನು ಥಿಯೇಟರ್'ಗಳಲ್ಲಿ ಪ್ರದರ್ಶಿಸದಿರುವ ಭಾರತೀಯ ಸಿನೇಮಾ ಮಾಲೀಕರ ಪ್ರದರ್ಶಕರ ಸಂಘದ ನಿರ್ಧಾರವನ್ನು ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ಅನುರಾಗ್ ಕಶ್ಯಪ್ ತೀವ್ರವಾಗಿ ಖಂಡಿಸಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕ ಕರಣ್ ಜೋಹರ್ ಅವರ ಬಾಲಿವುಡ್ ಚಿತ್ರ ಯೇ ದಿಲ್ ಹೈ ಮುಷ್ಕಿಲ್' ಪ್ರದರ್ಶನಕ್ಕೆ ನಿಷೇಧ ಹೇರಲಾಗುತ್ತದೆ ಎನ್ನುವುದಕ್ಕೆ ಟ್ವೀಟರ್'ನಲ್ಲಿ ಅನುರಾಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರು ಪಾಕ್'ಗೆ ತೆರಳಿರುವ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಾಕ್ ನಟನನ್ನು ಬಳಸಿ ಚಿತ್ರ ಮಾಡಿದ್ದಕ್ಕೆ ಕರಣ್ ಜೋಹರ್ ಕ್ಷಮೆ ಯಾಚಿಸಬೇಕು ಎನ್ನುವುದನ್ನು ವಿರೋಧಿಸಿದ ಅನುರಾಗ್, ‘ಪ್ರಧಾನಿ ಮೋದಿ ಸರ್ ನೀವು ಪಾಕ್‌ಗೆ ತೆರಳಿದ್ದಕ್ಕೆ ಇಲ್ಲಿಯವರೆಗೆ ಕ್ಷಮೆ ಯಾಚಿಸಿಲ್ಲ. ಅಂದು ಡಿಸೆಂಬರ್ 25, ಅದೇ ದಿನ ಕರಣ್ ಜೋಹರ್ ಚಿತ್ರವನ್ನು ಚಿತ್ರೀಕರಿಸುತ್ತಿದ್ದರು. ಅವರೇಕೆ ಕ್ಷಮೆ ಯಾಚಿಸಬೇಕು?'ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ‘ವಿಶ್ವ ನಮ್ಮನ್ನು ನೋಡಿ ಕಲಿಯಬೇಕು. ನಾವು ಎಲ್ಲಾ ಸಮಸ್ಯೆಗಳನ್ನು ಬ್ಯಾನ್ ಮಾಡುವುದು ಮತ್ತು ಜರಿಯುವುದರ ಮೂಲಕ ನಿವಾರಿಸುತ್ತೇವೆ’ ಎಂದು ವ್ಯಂಗ್ಯವಾಡಿದ್ದಾರೆ.
ಭಾರತೀಯ ಸಿನಿಮಾ ಮಾಲೀಕರು ಮತ್ತು ಪ್ರದರ್ಶಕರ ಅಸೋಸಿಯೆಷನ್ ಮಹಾರಾಷ್ಟ್ರ, ಗುಜರಾತ್, ಗೋವಾ ಮತ್ತು ಕರ್ನಾಟಕದಲ್ಲಿ ಏ ದಿಲ್ ಹೈ ಮುಶ್ಕಿಲ್ ಚಿತ್ರಕ್ಕೆ ನಿಷೇಧ ಹೇರಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.