ಸಮೀಕ್ಷೆ ಪ್ರಕಾರ ಗೆಲ್ಲುವ ವ್ಯಕ್ತಿಗೆ ಪಕ್ಷದಿಂದ ಟಿಕೆಟ್

Published : Dec 09, 2017, 08:53 AM ISTUpdated : Apr 11, 2018, 12:56 PM IST
ಸಮೀಕ್ಷೆ ಪ್ರಕಾರ ಗೆಲ್ಲುವ ವ್ಯಕ್ತಿಗೆ ಪಕ್ಷದಿಂದ ಟಿಕೆಟ್

ಸಾರಾಂಶ

ಎಲ್ಲಿ ಜನಾಭಿಪ್ರಾಯ ಇದೆ  ಎಲ್ಲಿ ನೀನು ಅಭ್ಯರ್ಥಿ ಆಗಬಹುದು, ಕೆಲಸ ಮಾಡಬಹುದು ಎಂದು ಹೇಳುತ್ತೇನೆ. ಆದರೆ ಇದೇ ಫೈನಲ್ ಅಲ್ಲ. ಅಂತಿಮ ಸರ್ವೆ ನಂತರವೇ ಗೆಲ್ಲುವ ಕುದುರೆಗೆ ಟಿಕೆಟ್ ಕೊಡ್ತೀವಿ. ಯಾವುದು ಸರಿ ಇದೆಯೋ ಅದನ್ನು ಪಕ್ಷ ಮಾಡುತ್ತದೆ.

ಬೀದರ್(ಡಿ.9): ವಿಧಾನಸಭಾ ಚುನಾವಣೆಗೆ ಅಭ್ಯರ್ಥಿ ಆರಿಸಲು ಸಮೀಕ್ಷೆ  ನಡೆಸಲಾಗುತ್ತದೆ. ಅಭ್ಯರ್ಥಿ ಗಳ ಆಯ್ಕೆ ಬಗ್ಗೆ ನನ್ನ ತೀರ್ಮಾನ ಅಂತಿಮ ಅಲ್ಲ. ಸಮೀಕ್ಷೆಗಳ ಫಲಿತಾಂಶ ಪ್ರಕಾರವೇ ಅಭ್ಯರ್ಥಿಗಳನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ  ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ  ಒಂದು ಸರ್ವೆ ಆಗಿದ್ದು, ಇನ್ನೂ ಎರಡು ಸರ್ವೆ ಮಾಡಿಸುತ್ತೇವೆ. ಅಂತಿಮವಾಗಿ ಮತದಾರರು ಏನು ಹೇಳುತ್ತಾರೋ ಅದೇ ಅಂತಿಮ. ಉದಾಹರಣೆಗೆ ಬೀದರ್ ಜಿಲ್ಲೆಯಲ್ಲಿ ಕೆಲವರ ಹೆಸರು ಹೇಳಿದ್ದೇನೆ. ನಾಳೆ ಸರ್ವೆಯಲ್ಲಿ ವ್ಯತ್ಯಾಸ ಆದರೆ ಟಿಕೆಟ್ ಬದಲಾಗುತ್ತದೆ. ಯಡಿಯೂರಪ್ಪ ತೀರ್ಮಾನವೇ ಅಂತಿಮವಲ್ಲ ಎಂದರು.

ಗೆಲ್ಲುವ ಕುದುರೆಗೆ ಟಿಕೆಟ್: ಎಲ್ಲಿ ಜನಾಭಿಪ್ರಾಯ ಇದೆ  ಎಲ್ಲಿ ನೀನು ಅಭ್ಯರ್ಥಿ ಆಗಬಹುದು, ಕೆಲಸ ಮಾಡಬಹುದು ಎಂದು ಹೇಳುತ್ತೇನೆ. ಆದರೆ ಇದೇ ಫೈನಲ್ ಅಲ್ಲ. ಅಂತಿಮ ಸರ್ವೆ ನಂತರವೇ ಗೆಲ್ಲುವ ಕುದುರೆಗೆ ಟಿಕೆಟ್ ಕೊಡ್ತೀವಿ. ಯಾವುದು ಸರಿ ಇದೆಯೋ ಅದನ್ನು ಪಕ್ಷ ಮಾಡುತ್ತದೆ. ನಾನು ಹೇಳಿದ್ದೇ ಫೈನಲ್ ಅಲ್ಲ.

ಈಗಾಗಲೇ ಘೋಷಿತ  ಅಭ್ಯರ್ಥಿಗಳನ್ನು ಕೈಬಿಡಲೂಬಹುದು ಎಂದರು. ಇನ್ನು ಈಗಾಗಲೇ ಬಂದಿರುವ ಪ್ರಥಮ ಸರ್ವೆ ವರದಿಯಾಧರಿಸಿ ಚುನಾವಣೆಗೆ ನಿಲ್ಲೋರು ಯಾರು ಎಂಬ ಸುಳಿವು ನೀಡಿದ್ದೇನೆ.  ಮುಖಂಡರು ಕಾರ್ಯಕರ್ತರನ್ನು ಕರೆಸಿ ಮಾತನಾಡಿ ತಿಳಿಸಿದ್ದೇನೆ. ಮುಂದೆ ಅಭ್ಯರ್ಥಿ ಬದಲಾದರೆ ಆಗಲೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲ್ಲುವ ಕುದುರೆಗೆ ಟಿಕೆಟ್ ಪಕ್ಕಾ ಮಾಡ್ತೇವೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ಸೇಡಿಗಾಗಿ ದ್ವೇಷ ಭಾಷಣ ಕಾಯ್ದೆ ಜಾರಿ: ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಲೇಖನ
ವಾಕ್‌ ಸ್ವಾತಂತ್ರ್ಯಕ್ಕೆ ದ್ವೇಷ ಭಾಷಣ ವಿಧೇಯಕ ವಿರುದ್ಧವಾಗಿಲ್ಲ: ವಿ.ಗೋಪಾಲ ಗೌಡ ಲೇಖನ