ಪ್ರಧಾನಿ ಮೋದಿಗೆ ರಾಖಿ ಕಟ್ಟಲು ಆಧಾರ್‌ ಕಡ್ಡಾಯ!

By Web DeskFirst Published Aug 31, 2018, 12:45 PM IST
Highlights

ಕಳೆದ ವಾರ ನಡೆದ ರಕ್ಷಾ ಬಂಧನದಲ್ಲಿ ಮೋದಿಗೆ ರಾಖಿ ಕಟ್ಟಲು ಆಧಾರ್ ಕಡ್ಡಾಯವಾಗಿತ್ತು ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಏನಿದರ ಅಸಲೀಯತ್ತು? ಇಲ್ಲಿದೆ ವೈರಲ್ ಚೆಕ್...

ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಹಬ್ಬದಂದು ರಾಖಿ ಕಟ್ಟಲು ಬಂದಿದ್ದ ಮಹಿಳೆಯರು ಆಧಾರ್‌ ಕಾರ್ಡ್‌ ಕಡ್ಡಾಯವಾಗಿತ್ತು ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗೆ ವೈರಲ್‌ ಆಗಿರುವ ಸಂದೇಶದಲ್ಲಿ, ಬಾಲಕಿಯೊಬ್ಬಳು ಆಧಾರ್‌ ಕಾರ್ಡ್‌ರ್‍ ಹಿಡಿದು ರಾಖಿ ಕಟ್ಟುತ್ತಿರುವ ಫೋಟೋದೊಂದಿಗೆ,‘ಕಳೆದ ಭಾನುವಾರ ರಾಖಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಲು ಆಗಮಿಸಿದ್ದ ಮಹಿಳೆಯರು ತಮ್ಮ ಆಧಾರ್‌ ಕಾರ್ಡ್‌ ಅನ್ನು ತೋರಿಸಲೇಬೇಕಿತ್ತು. ಅಲ್ಲದೆ, ಆಧಾರ್‌ ತೋರಿಸಿದ ಮಹಿಳೆಯರಿಗೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ಕೈಗೆ ರಾಖಿ ಕಟ್ಟಲು ಅವಕಾಶ ನೀಡಲಾಗಿದೆ’ ಎಂಬ ಒಕ್ಕಣೆಯನ್ನು ಬರೆಯಲಾಗಿದೆ.ಸದ್ಯ ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಆದರೆ, ನಿಜಕ್ಕೂ ಪ್ರಧಾನಿಗೆ ರಾಖಿ ಕಟ್ಟಲು ಆಧಾರ್‌ಅನನು ಕಡ್ಡಾಯಗೊಳಿಸಲಾಗಿತ್ತೇ ಎಂದು ಪರಿಶೀಲಿಸದಾಗ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ಪ್ರಧಾನಿ ಕಚೇರಿಯೇ ಸ್ಪಷ್ಟನೆ ನೀಡಿದ್ದು, ‘ಪ್ರಧಾನಿ ಅವರಿಗೆ ರಾಖಿ ಕಟ್ಟುವ ಮಹಿಳೆಯರಿಗೆ ಇಂಥ ಯಾವುದೇ ಮಾನದಂಡಗಳಿರಲಿಲ್ಲ’ ಎಂದು ಹೇಳಿದೆ. ಆದರೆ, ಅಂದು ಪ್ರಧಾನಿ ಮೋದಿ ಅವರಿಗೆ ರಾಖಿ ಕಟ್ಟುವ ವೇಳೆ ಬಾಲಕಿಯೊಬ್ಬಳು, ತನ್ನ ಆಧಾರ್‌ ಅನ್ನು ಕೈಯಲ್ಲೇ ಹಿಡಿದುಕೊಂಡಿದ್ದಳು ಅಷ್ಟೇ ಎಂದು ಪಿಎಂಒ ಹೇಳಿದೆ. ಹಾಗಾಗಿ ರಾಖಿ ಕಟ್ಟಲು ಆಧಾರ್‌ ಕಡ್ಡಾಯ ಎಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಸುದ್ದಿ ಸುಳ್ಳು.

click me!