ಗೃಹ ಸಚಿವರಿಗೆ ಟಾಂಗ್ ಕೊಟ್ಟ ವಿಶ್ವನಾಥ್

Published : Jan 07, 2017, 06:09 PM ISTUpdated : Apr 11, 2018, 12:37 PM IST
ಗೃಹ ಸಚಿವರಿಗೆ ಟಾಂಗ್ ಕೊಟ್ಟ ವಿಶ್ವನಾಥ್

ಸಾರಾಂಶ

ಈ ವಿಚಾರವನ್ನು ಮೊದಲಿನಿಂದಲೂ ಹೇಳುತ್ತಾ ಬರುತ್ತಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ.

ಬೆಂಗಳೂರು(ಜ.7): ‘‘ಒನ್ ಮ್ಯಾನ್, ಒನ್ ಪೋಸ್ಟ್ ಎನ್ನುವುದು ಕಾಂಗ್ರೆಸ್ ಪಕ್ಷದ ನೀತಿ. ಹೀಗಿರುವಾಗ ಕೆಪಿಸಿಸಿ ಅಧ್ಯಕ್ಷರಿಗೇಕೆ ಎರಡೆರಡು ಹುದ್ದೆಗಳನ್ನು ನಿರ್ವಹಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಅಡಗೂರು ಎಚ್. ವಿಶ್ವನಾಥ್ ಹೇಳಿದ್ದಾರೆ.

ಡಾ.ಜಿ. ಪರಮೇಶ್ವರ್ ಅಧ್ಯಕ್ಷರಾಗಿರಲಿ ಅಥವಾ ಸಚಿವರಾಗಿ ಮುಂದವರಿಯಲಿ. ಆದರೆ ಎರಡೂ ಹುದ್ದೆಗಳಲ್ಲಿ ಮುಂದುವರಿಯುವುದು ಸರಿಯಾಗುವುದಿಲ್ಲ ಎಂದು ನಗರದಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಈ ವಿಚಾರವನ್ನು ಮೊದಲಿನಿಂದಲೂ ಹೇಳುತ್ತಾ ಬರುತ್ತಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಒಂದು ಹುದ್ದೆಯನ್ನು ನಿರ್ವಹಣೆ ಮಾಡಲಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಬಹಳಷ್ಟು ಬದಲಾವಣೆಗಳಿಗೆ ನಾಂದಿ ಹಾಡಲಿದೆ. ಅಲ್ಲಿವರೆಗೂ ಸಮಾಧಾನದಿಂದ ಇರಬೇಕು ಎಂದ ಅವರು, ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಕೊರತೆ ಇಲ್ಲ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಹಲವು ಅಭ್ಯರ್ಥಿಗಳಿದ್ದಾರೆ. ಸ್ಥಳೀಯವಾಗಿಯೂ ಗುರುತಿಸಿಕೊಂಡಿದ್ದು, ಕಣ್ಣಾಯಿಸಿ ನೋಡುವ ಮನಃಸ್ಥಿತಿ ಬೇಕು ಅಷ್ಟೇ ಎಂದು ಹೇಳಿದರು.

ರಾಮಾಯಣದ ಸೀತೆಯಂತೆ: ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ಯಾರ ವಿರುದ್ಧ ಬೇಕಾದ್ರೂ ದೂರು ನೀಡಲಿ, ಬೇಡ ಎನ್ನುವುದಿಲ್ಲ. ಆದರೆ, ಸರ್ಕಾರ ಮಾಡಿದ ತಪ್ಪುಗಳನ್ನು ತಿದ್ದುವುದಕ್ಕಾಗಿ ಪಕ್ಷದಲ್ಲಿ ಆಂತರಿಕ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲವೇ?, ಸರ್ಕಾರ ಮಾಡಿದ ತಪ್ಪುಗಳು, ಪಕ್ಷದ ಮೇಲೆ ಪರಿಣಾಮ ಬೀರುತ್ತವೆ. ಸರ್ಕಾರಕ್ಕಿಂತ ಪಕ್ಷ ಶಾಶ್ವತವಾಗಿರಬೇಕು. ಪಕ್ಷದಿಂದಲೇ ಸರ್ಕಾರ ಬಂದಿದೆ ಎನ್ನುವುದನ್ನು ಅರಿಯಬೇಕು. ಪಕ್ಷ ದುರ್ಬಲವಾಗುತ್ತಾ ಹೋದರೆ, ಪಕ್ಷ ನಂಬಿದವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು 40 ವರ್ಷದಿಂದ ಪಕ್ಷದಲ್ಲಿದ್ದಾರೆ. ‘‘ನಾನು ಮತ್ತು ಪೂಜಾರಿ ರಾಮಾಯಣದ ಸೀತೆ ಇದ್ದಂತೆ, ರಾಮನಲ್ಲದೆ (ಪಕ್ಷವಲ್ಲದೆ) ಬೇರೆ ಯಾರನ್ನೂ ನಂಬಿಲ್ಲ. ನಮ್ಮಂಥ ಹಿರಿಯರನ್ನು ಅಶೋಕವನದ ಸಶೋಕ ರೀತಿಯಲ್ಲಿಟ್ಟಿದ್ದಾರೆ’’. ಆದರೂ ಪರವಾಗಿಲ್ಲ ಎಐಸಿಸಿಗೆ ದೂರು ನೀಡಿದ್ರೆ ನೀಡಲಿ. ಜ.11ರಂದು ನೋಟು ಅಮಾನ್ಯ ಸಂಬಂಧ ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿಯೇ ಉತ್ತರಿಸುತ್ತೇನೆ ಎಂದು ಟಾಂಗ್ ನೀಡಿದರು.

ಸಿಎಂ ಸಿದ್ದರಾಮಯ್ಯ ಮೇಲೆ ಪಶ್ಚಾತಾಪ: ಸಿದ್ದರಾಮಯ್ಯರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದಿದ್ದೇ ನೀವು. ಇತ್ತೀಚಿನ ದಿನಗಳಲ್ಲಿ ಪದೇ ಪದೆ ಸಿಎಂ ವಿರುದ್ಧ ದನಿ ಎತ್ತುತ್ತಿರುವ ಹಿಂದೆ ಪಶ್ಚಾತಾಪವಿದೆಯೇ ಎಂಬ ಪ್ರಶ್ನೆಗೆ ‘‘ನನಗೆ ವೈಯಕ್ತಿಕವಾಗಿ ಯಾರ ಮೇಲೆಯೂ ಪಶ್ಚಾತಾಪಗಳಿಲ್ಲ. ನಾನು ಸಿದ್ದರಾಮಯ್ಯನವರ ವಿರುದ್ಧ ಮಾತನಾಡುತ್ತಿಲ್ಲ. ಬದಲಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡುತ್ತಿದ್ದೇನೆ. ರಾಜ್ಯದ ಜನರು ನೀಡಿರುವ ಅಧಿಕಾರದಲ್ಲಿ ರಾಜ್ಯಕ್ಕೆ ಮತ್ತು ಜನರಿಗೆ ಅನುಕೂಲವಾಗುವ ಕೆಲಸ ಮಾಡಬೇಕು’’ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

BBK 12: ಗಿಲ್ಲಿ-ರಕ್ಷಿತಾ ಗೆಲ್ಲೋದಕ್ಕೆ ಅಶ್ವಿನಿ ಗೌಡ ಕಾರಣ.. ಹಬ್ಬಿರುವ ಈ ಸುದ್ದಿಗೆ 'ಸಾಕ್ಷಿ' ಹೀಗಿದೆ ನೋಡಿ!
ಮೊದಲ ಬಾರಿಗೆ ಗಡಿ ಗ್ರಾಮಕ್ಕೆ ಸ್ಯಾಟ್‌ಲೈಟ್ ಮೂಲಕ ಬಿಎಸ್ಎನ್ಎಲ್ ನೆಟ್‌ವರ್ಕ್ ಸೌಲಭ್ಯ