
ನವದೆಹಲಿ(ಡಿ.10): ನೋಟ್ ಬಂದ್ ಬಳಿಕ ಬಹಳಷ್ಟು ಬ್ಯಾಂಕ್ ಸಿಬ್ಬಂದಿಗಳು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಇದರೊಂದಿಗೆ ಸಾಮಾನ್ಯ ಜನರಲ್ಲೂ ಆರೋಗ್ಯ ಸಮಸ್ಯೆ ಕಂಡು ಬಂದಿದೆ. ಇದಕ್ಕೆ ಕಾರಣವೇನು ಎಂದು ನೋಡುವುದಾದರೆ...
ಹೇಗೆ ಹರಡುತ್ತಿದೆ ರೋಗ?
ನೋಟ್ ಬ್ಯಾನ್ ವಿಚಾರದಿಂದ ಜನರೆಲ್ಲರೂ ತಮ್ಮಲ್ಲಿರುವ ಹಳೆ ನೋಟುಗಳನ್ನು ಜಮಾ ಮಾಡಲು ಬ್ಯಾಂಕ್'ಗೆ ದೌಡಾಯಿಸುತ್ತಿದ್ದಾರೆ. ಇದರಿಂದಾಗಿ ಬ್ಯಾಂಕ್'ನಲ್ಲಿ ಹಳೆ ನೋಟುಗಳು ತುಂಬಿಕೊಂಡಿವೆ. ಇಷ್ಟು ಪ್ರಮಾಣದ ನೋಟುಗಳನ್ನು ಎಣಿಸಲು ಎಂಜಲು ಬಳಸುತ್ತಾರೆ. ಇದರ ಪರಿಣಾಮವಾಗಿ ಕೀಟಾಣು ಹಾಗೂ ಬಾಯಿಗೆ ಸೇರಿ ಅನಾರೋಗಕ್ಕೀಡಾಗುತ್ತಿದ್ದಾರೆ. ವೈದ್ಯರು ಕೂಡಾ 'ಇತ್ತೀಚೆಗೆ ರೋಗಾಣು ಹಾಗೂ ಫಂಗಸ್ ಇನ್ಫೆಕ್ಷನ್'ನಿಂದಾಗಿ ಚಿಕಿತ್ಸೆ ಪಡೆಯಲು ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಳೆ ನೋಟುಗಳ ಮೇಲಿರುವ ಕೀಟಾಣುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಜನರು ಅನಾರೋಗಕ್ಕೀಡಾಗುವ ಸಾಧ್ಯತೆ ಇದೆ' ಎಂದಿದ್ದಾರೆ.
ಸುರಕ್ಷತೆ ಹೇಗೆ?
ರೋಗದಿಂದ ನಾವೇ ನಮ್ಮನ್ನು ರಕ್ಷಿಸಿಕೊಳ್ಳಬೇಕು. ಇದಕ್ಕೆ ಬೇರಾವ ಮಾರ್ಗವಿಲ್ಲ. ಎಂಜಲು ಬಳಸಿ ನೋಟು ಎಣಿಸುವವರು ತುಂಬಾ ಎಚ್ಚರಿಕೆ ವಹಿಸಬೇಕು, ಇಲ್ಲವಾದಲ್ಲಿ ರೋಗ ಹರಡುವ ಸಾಧ್ಯತೆ ಇದೆ. ಈ ರೋಗ ಕೇವಲ ಬ್ಯಾಂಕ್ ಸಿಬ್ಬಂದಿಗಳಲ್ಲಷ್ಟೇ ಅಲ್ಲದೆ ATM ನಿಂದ ಹಣ ಪಡೆಯುವವರಲ್ಲಿ ಪತ್ತೆಯಾಗಿದೆ. ಈ ರೋಗದಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು
1) ರೋಗವು ವೈರಸ್ ಇಲ್ಲವೇ ಫಂಗಸ್'ನಿಂದ ಹರಡುವ ಸಾಧ್ಯತೆಗಳು ಹೆಚ್ಚು ಹೀಗಾಗಿ ಬ್ಯಾಂಕ್ ಇಲ್ಲವೇ ATM ಸಾಲಿನಲ್ಲಿ ನಿಂತಾಗ ಮುಖಕ್ಕೆ ಮಾಸ್ಕ್ ಧರಿಸಿ.
2) ನೋಟುಗಳನ್ನು ಎಣಿಸುವ ಸಂದರ್ಭದಲ್ಲಿ ಅದೆಷ್ಟೇ ಕಷ್ಟವಾದರೂ ಬೆರಳನ್ನು ಬಾಯಿಗೆ ಹಾಕಬೇಡಿ.
3) ಆಹಾರ ಸೇವಿಸುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.
4) ಹೊರಗಡೆ ಸುತ್ತಾಡಿ ಮನೆಗೆ ಬಂದಾಗ ಕೈ ಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.
ಕೃಪೆ: ಲೈವ್ ಇಂಡಿಯಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.