
ಬೆಂಗಳೂರು : ಮುಂಬೈ ಮೂಲದ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್ ತನ್ನ 25ನೇ ವಾರ್ಷಿಕೋತ್ಸವ ಪ್ರಯುಕ್ತ ಪ್ರತಿಯೊಂದು ಕುಟುಂಬಕ್ಕೂ 2 ಉಚಿತ ವಿಮಾನ ಟಿಕೆಟ್ ನೀಡುತ್ತಿದೆ ಎಂಬಂತಹ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
‘ಪ್ರತಿಯೊಬ್ಬರೂ ಜೆಟ್ ಏರ್‌ವೇಸ್‌ನ 25ನೇ ವರ್ಷಾಚರಣೆಯನ್ನು ಸಂಭ್ರಮಿಸಿ. ಆದರೆ ಮೊದಲಿಗೆ ಈ ಸಂದೇಶವನ್ನು ನಿಮ್ಮ 20 ಸ್ನೇಹಿತರಿಗೆ ಫಾರ್ವರ್ಡ್ ಮಾಡಿ. ಅನಂತರ ಲಿಂಕ್ ಮೇಲೆ ಕ್ಲಿಕ್ ಮಾಡುತ್ತಾ ಹೋಗಿ. ನಂತರ ನಿಮ್ಮ ವಿಳಾಸವನ್ನು ಭರ್ತಿಮಾಡಿ. ಮುಂದಿನ 24-48 ಗಂಟೆಗಳಲ್ಲಿ ನಿಮಗೆ ನೀಡಲಾದ ಉಚಿತ ಟಿಕೆಟ್ ಬಗ್ಗೆ ಮೇಲ್ ಕಳಿಸಲಾಗುತ್ತದೆ’ ಎಂದು ಹೇಳಲಾಗಿದೆ.
ಆದರೆ ನಿಜಕ್ಕೂ ಜೆಟ್ ಏರ್‌ವೇಸ್ ಸಂಸ್ಥೆಯು ತನ್ನ 25ನೇ ವಾರ್ಷಿಕೋತ್ಸವ ಪ್ರಯುಕ್ತ ಉಚಿತ ಟಿಕೆಟ್ ನೀಡಲು ಮುಂದಾಗಿದೆಯೇ ಎಂದು ಹುಡುಕ ಹೊರಟಾಗ ಇದೂ ಕೂಡ ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ.
ಜೆಟ್ ವೇಸ್ ಸಂಸ್ಥೆಯು ಈ ರೀತಿಯ ಯಾವುದೇ ಕೊಡುಗೆಯನ್ನು ನೀಡಿಲ್ಲ. ಇಂತಹ ಸುಳ್ಳು ಸಂದೇಶಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲು ಪ್ರಾರಂಭವಾದ ಬಳಿಕ ಸ್ವತಃ ‘ಜೆಟ್ ವೇಸ್’ ಟ್ವೀಟ್ ಮಾಡಿದ್ದು, ಅದರಲ್ಲಿ ‘25ನೇ ವಾರ್ಷಿಕೋತ್ಸವ ನಿಮಿತ್ತ ವಿಮಾನಯಾನಕ್ಕೆ ಉಚಿತ ಟಿಕೆಟ್ ನೀಡಲಾಗುತ್ತಿದೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು. ಅಧಿಕೃತವಾಗಿ ಕಂಪನಿ ವತಿಯಿಂದ ಆ ರೀತಿಯ ಯಾವುದೇ ಕೊಡುಗೆಯನ್ನೂ ನೀಡಲಾಗುತ್ತಿಲ್ಲ’ ಎಂದು ಹೇಳಿದೆ. ಅಲ್ಲದೆ ಹೀಗೆ ಹರಿದಾಡುತ್ತಿರುವ ಸಂದೇಶದಲ್ಲಿನ ಲಿಂಕ್‌ನಲ್ಲಿ ‘aಜ್ಟಿಡಿays’ಎಂಬುದನ್ನು ತಪ್ಪಾಗಿ ಬರೆಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.