
ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಈ ನಡುವೆ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಎರಡು ಕೋಟಿ ಯುವ ಜನರಿಗೆ ಉಚಿತ ಲ್ಯಾಪ್‌ಟಾಪ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪೂರ್ತಿ ಸಂದೇಶ ಹೀಗಿದೆ-‘ ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಬೆನ್ನಲ್ಲೇ ಮೇಕ್ ಇನ್ ಇಂಡಿಯಾ ಯೋಜನೆಯಡಿ 2 ಕೋಟಿ ಯುವ ಜನರಿಗೆ ಉಚಿತ ಲ್ಯಾಪ್‌ಟಾಪ್ ನೀಡುವುದಾಗಿ ಘೋಷಿಸಿದ್ದಾರೆ.
ಈಗಾಗಲೇ 30 ಲಕ್ಷ ಜನರು ಅರ್ಜಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿದೆ. ಫೇಸ್‌ಬುಕ್ ಟ್ವೀಟರ್, ವಾಟ್ಸ್‌ಆ್ಯಪ್‌ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಜೊತೆಗೆ ಅರ್ಜಿ ಹಾಕಲು ಈ ಲಿಂಕ್ ಒತ್ತಿ ಎಂದು ಕೂಡ ಹೇಳಲಾಗಿದೆ.
ಆದರೆ ನಿಜಕ್ಕೂ ಮೋದಿ ಇಂಥದ್ದೊಂದು ಯೋಜನೆ ಘೋಷಿಸಿದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಮೇಲ್ನೋಟಕ್ಕೇ ತಿಳಿದುಬರುತ್ತದೆ. ಅಲ್ಲದೆ ಈ ಸಂದೇಶದಲ್ಲಿ ನೀಡಲಾಗಿರುವ ವೆಬ್‌ಸೈಟ್ ಲಿಂಕ್, ಮೇಕ್ ಇನ್ ಇನ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ವಿಳಾಸ ಅಲ್ಲ.
ಈ ಲಿಂಕ್ ಒತ್ತಿದ್ದಾಗ ಹೆಸರು, ವಿಳಾಸ, ರಾಜ್ಯ ಮತ್ತಿತರ ಮಾಹಿತಿ ಕೇಳುತ್ತದೆ. ಇದನ್ನು ಭರ್ತಿ ಮಾಡಿದಾಗ 2 ಪ್ರಶ್ನೆಗೆ ಉತ್ತರಿಸುವಂತೆ ಕೇಳುತ್ತದೆ. ಅನಂತರ ಅರ್ಜಿ ಪೂರ್ಣಗೊಳ್ಳಲು ಈ ಸಂದೇಶವನ್ನು 10 ಜನರಿಗೆ ಕಳುಹಿಸುವುದು ಕಡ್ಡಾಯ. ಅಲ್ಲಿಗೆ ಇದು ನಕಲಿ ವೆಬ್‌ಸೈಟ್ ಎಂಬುದು ಸ್ಪಷ್ಟ. ಅಲ್ಲದೆ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಸೂಚನೆಗಳಲ್ಲಿ ವ್ಯಾಕರಣ ದೋಷಗಳಿವೆ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.