
ಬೆಂಗಳೂರು (ಮೇ 18) : ಕರ್ನಾಟಕದಲ್ಲಿ ‘ಲಿಂಗಾಯತ ಕ್ಯಾಥೋಲಿಕ್ ಚರ್ಚ್’ ತಲೆ ಎತ್ತಿದೆ ಎಂಬಂತಹ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶದಲ್ಲಿ ‘ಮಿಷನರಿಗಳು ಕರ್ನಾಟಕದಲ್ಲಿ ಲಿಂಗಾಯತ ಕ್ಯಾಥೋಲಿಕ್ ಚರ್ಚ್ ಸ್ಥಾಪಿಸಿದ್ದಾರೆ. ಮಿಷನರಿಗಳು ಹಣದ ಆಮಿಷ ಒಡ್ಡಿ ಅಮಾಯಕ ಹಿಂದುಗಳನ್ನು ಮೂರ್ಖರನ್ನಾ ಗಿಸಿದ್ದಾರೆ’ ಎಂದು ಹೇಳಲಾಗಿದೆ.
‘ಲಿಂಗಾಯತ ಕ್ಯಾಥೋಲಿಕ್ ಚರ್ಚ್’ ಎಂದು ಬರೆಯಲಾಗಿರುವ ಚಿತ್ರದ ಕೆಳಗೆ ‘ಇಎಸ್‌ಟಿಡಿ: ಏ. 16, 2018 ಬೆಂಗಳೂರು, ಕರ್ನಾಟಕ’ ಎಂದು ಬರೆಯಲಾಗಿದೆ. ‘5 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಸೋನಿಯಾ ಗಾಂಧಿ ರಾಜ್ಯದಲ್ಲಿ ಕ್ರೈಸ್ತ ಧರ್ಮ ಬೆಳೆಸಲು ವ್ಯಾಟಿಕನ್ ಸಿಟಿ ಮಿಷನರಿಗಳೊಂದಿಗೆ ಕೈಜೋಡಿಸಿದ್ದಾರೆ.
ಅದೇ ಕಾರಣಕ್ಕಾಗಿ ಕರ್ನಾಟಕದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಪ್ರಸ್ತಾಪ ಮಾಡಲಾಗಿತ್ತು. ಈಗ ಯಾರು ಬೇಕಾದರೂ ಅರ್ಥೈಸಿ ಕೊಳ್ಳಬಹುದು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಏಕೆ ಅಧಿಕಾರಕ್ಕೆ ಬರಬೇಕು ಎಂದು’ ಎಂಬ ಒಕ್ಕಣೆಯನ್ನೂ ಬರೆದು ಕೆಲವರು ಪೋಸ್ಟ್ ಮಾಡಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ.
ವಾಸ್ತವವಾಗಿ ಈ ಚರ್ಚ್‌ನ ಹೆಸರು, ‘ಅವರ್ ಲೇಡಿ ಡೊಲೋರಸ್ ಚರ್ಚ್’. ಇದು ಇರುವುದು, ಮಹಾರಾಷ್ಟ್ರದ ಥಾಣೆಯಲ್ಲಿ. ಅದರ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.