
ರಾಷ್ಟ್ರೀಯ ಜನತಾ ದಳ ಸಂಸ್ಥಾಪಕ ಲಾಲೂ ಪ್ರಸಾದ್ ಯಾದವ್ ಪುತ್ರ, ತೇಜ್ ಪ್ರತಾಪ್ ಸಿಂಗ್‌ಗೆ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ನರೇಂದ್ರ ಮೋದಿ-ಟ್ರೂ ಇಂಡಿಯನ್’ ಎಂಬ ಹೆಸರಿನ ಫೇಸ್‌ಬುಕ್ ಪೇಜ್ ತೇಜ್‌ಪ್ರತಾಪ್ ಅವರು ಕಾಲೇಜು ಘಟಿಕೋತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವಂತೆ ಭಾಸವಾಗುವಂತಹ ಫೋಟೋವನ್ನು ಪೋಸ್ಟ್ ಮಾಡಿ, ‘ಕೇವಲ 10ನೇ ತರಗತಿಯನ್ನೂ ಪಾಸ್ ಮಾಡಿರದ ತೇಜ್ ಪ್ರತಾಪ್ ಸಿಂಗ್ ಅವರಿಗೆ ಬಿಹಾರದ ತಕ್ಷಶಿಲಾ ವಿಶ್ವವಿದ್ಯಾಲಯ ಡಾಕ್ಟರೇಟ್ ಗೌರವ ನೀಡಿದೆ. ಇದು ಭಾರತೀಯರೆಲ್ಲರೂ ಸಂತಸ ಪಡುವ ವಿಚಾರ. ಇಂತಹ ಘಟನೆಗಳು ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ’ ಎಂದು ವ್ಯಂಗ್ಯವಾಗಿ ಹೇಳಲಾಗಿದೆ. ಸದ್ಯ ಈ ಪೋಸ್ಟ್ 2 ಲಕ್ಷ ಬಾರಿ ಶೇರ್ ಆಗಿದೆ. ಇದೇ ಫೋಟೋ, ಇದೇ ಒಕ್ಕಣೆಯೊಂದಿಗೆ ಕಳೆದ ಬಾರಿಯೂ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿತ್ತು.
ಆದರೆ ತಕ್ಷಶಿಲಾ ವಿಶ್ವವಿದ್ಯಾಲಯ ತೇಜ್ ಪ್ರತಾಪ್ ಅವರಿಗೆ ಡಾಕ್ಟರೇಟ್ ಗೌರವ ನೀಡಿದ್ದು ನಿಜವೇ ಎಂದು ಪರಿಶೀಲಿಸಿದಾಗ, ಇದೊಂದು ಸುಳ್ಳುಸುದ್ದಿ ಎಂಬುದು ಪತ್ತೆಯಾಗಿದೆ. ಏಕೆಂದರೆ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋದ ಅಸಲಿ ಕತೆಯೇ ಬೇರೆ. ವಾಸ್ತವವಾಗಿ 2017ರಲ್ಲಿ ತೇಜ್ ಪ್ರತಾಪ್ ಸಿಂಗ್ ಐಜಿಐಎಂಎಸ್‌ಗೆ ಕಾರ್ಯಕ್ರವೊಂದಕ್ಕೆ ಭೇಟಿ ನೀಡಿದ್ದರು. ಆ ಕಾರ್ಯಕ್ರಮದ ಫೋಟೋಗಳನ್ನು ಸ್ವತಃ ತೇಜ್ ಪ್ರತಾಪ್ ತಮ್ಮ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿ, ಐಜಿಐಎಂಎಸ್‌ನಲ್ಲಿ ಡಿಗ್ರಿ ಸರ್ಟಿಫೀಕೇಟ್ ಮತ್ತು ಚಿನ್ನದ ಪದಕಗಳನ್ನು ವಿತರಿಸಿದ್ದಾಗಿ ಬರೆದುಕೊಂಡಿದ್ದರು. ಅದೇ ಫೋಟೋವನ್ನು ಬಳಸಿಕೊಂಡು ತಕ್ಷಶಿಲಾ ವಿಶ್ವವಿದ್ಯಾಲಯ ಡಾಕ್ಟರೇಟ್ ಗೌರವ ನೀಡಿದೆ ಎಂದು ಸುಳ್ಳುಸುದ್ದಿ ಹಬ್ಬಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ