ವೈರಲ್ ಚೆಕ್| ಅಜರ್‌ನನ್ನು ಉಗ್ರ ಎಂದು ಘೋಷಿಸದಿರಲು ಭಾರತದ ವಿಪಕ್ಷಗಳೇ ಕಾರಣ?

By Web DeskFirst Published Mar 21, 2019, 10:54 AM IST
Highlights

ಭಾರತದ ವಿಪಕ್ಷಗಳೇ ಮಸೂದ್‌ ಅಜರ್‌ನನ್ನು ಉಗ್ರ ಎಂದು ಪರಿಗಣಿಸಿಲ್ಲದಿರುವಾಗ ನಾವು ಜಾಗತಿಕ ಉಗ್ರ ಎಂದು ಘೋಷಿಸಲು ಹೇಗೆ ಸಾಧ್ಯ ಎಂದು ವಿಶ್ವಸಂಸ್ಥೆಯಲ್ಲಿ ಚೀನಾ ಹೇಳಿದೆ. ಹೀಗೊಂದು ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಏನು? ಇಲ್ಲಿದೆ ವಿವರ

ನವದೆಹಲಿ[ಮಾ.21]: ಭಾರತದ ವಿಪಕ್ಷಗಳೇ ಮಸೂದ್‌ ಅಜರ್‌ನನ್ನು ಉಗ್ರ ಎಂದು ಪರಿಗಣಿಸಿಲ್ಲದಿರುವಾಗ ನಾವು ಜಾಗತಿಕ ಉಗ್ರ ಎಂದು ಘೋಷಿಸಲು ಹೇಗೆ ಸಾಧ್ಯ ಎಂದು ವಿಶ್ವಸಂಸ್ಥೆಯಲ್ಲಿ ಚೀನಾ ಹೇಳಿದೆ ಎಂಬ ಸಂದೇಶ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಚೀನಾ ಅಧ್ಯಕ್ಷ ಕ್ಸಿ-ಜಿಪಿಂಗ್‌, ಮಸೂದ್‌ ಅಜರ್‌ ಮತ್ತು ವಿರೋಧ ಪಕ್ಷದ ನಾಯಕ ಕಾಮೆಂಟ್‌ನ ಈ ಮೂರು ಫೋಟೋಗಳನ್ನು ಸಂಕಲಿಸಿದ ಪೋಸ್ಟ್‌ ವೈರಲ್‌ ಆಗುತ್ತಿದೆ. ಈ ಪೋಸ್ಟ್‌ಗೆ ಫೇಸ್‌ಬುಕ್‌ನಲ್ಲಿ ಬಾರೀ ಕಾಮೆಂಟ್‌ಗಳು ವ್ಯಕ್ತವಾಗಿವೆ.

ಆದರೆ ಬೂಮ್‌ ಲೈವ್‌ ಸುದ್ದಿ ಸಂಸ್ಥೆ ಈ ಸುದ್ದಿಯ ನೈಜತೆಯನ್ನು ಬಯಲಿಗೆಳೆದಿದೆ. ಬೂಮ್‌, ಮಾಚ್‌ರ್‍ 14ರಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿರುವ ಹೇಳಿಕೆಯನ್ನು ಪಡೆದಿದ್ದು, ಅದರಲ್ಲಿ ಈ ಬಗ್ಗೆ ಎಲ್ಲೂ ಉಲ್ಲೇಖ ಇಲ್ಲ ಹಾಗೂ ಎಲ್ಲೂ ಭಾರತದ ವಿಪಕ್ಷಗಳ ಬಗ್ಗೆಯೂ ಹೇಳಿಕೆ ಇಲ್ಲ ಎಂದು ತಿಳಿದುಬಂದಿದೆ.

click me!