[ವೈರಲ್ ಚೆಕ್] ಬಾಳೆಹಣ್ಣಿನೊಳಗೆ 2000ರು.ಗಳ ಗರಿಗರಿ ನೋಟುಗಳು!

By Suvarna Web DeskFirst Published Nov 9, 2017, 4:41 PM IST
Highlights

ಬಾಳೆ ಹಣ್ಣಿನೊಳಗೆ 2000, 500 ರು. ಗಳ ಗರಿಗರಿ ನೋಟುಗಳು! ಹೌದು. ಇಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

ಬಾಳೆ ಹಣ್ಣಿನೊಳಗೆ 2000, 500 ರು. ಗಳ ಗರಿಗರಿ ನೋಟುಗಳು! ಹೌದು. ಇಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

ವಿಡಿಯೋದಲ್ಲಿ ಬಾಳೆಹಣ್ಣಿನ ಗೊಂಚಲಿದೆ. ಆ ಗೊಂಚಲಿನಿಂದ ಒಂದೊಂದೇ ಬಾಳೆಹಣ್ಣನ್ನು ಕಿತ್ತು ಬಿಡಿಸಿದರೆ, ಅದರೊಳಗೆ ಪೇಪರ್‌ನಲ್ಲಿ ಸುತ್ತಿಟ್ಟಿರುವ 2000 ಮತ್ತು 500ರು.ಗಳ ನೋಟುಗಳಿವೆ. ಅಷ್ಟೇ ಅಲ್ಲ ಬಾಳೆಹಣ್ಣಿನೊಳಗೆ ನೋಟುಗಳನ್ನಿಟ್ಟು ಮಹಾರಾಷ್ಟ್ರದಿಂದ ಮುಂಬರುವ ಗುಜರಾತ್  ಚುನಾವಣೆಗಾಗಿ ಸಾಗಿಸಲಾಗುತ್ತಿದೆ ಎಂಬಂತಹ ಅಡಿಬರಹದಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ.

Latest Videos

ಹಾಗಾದರೆ ನಿಜವಾಗಿಯೂ ಬಾಳೆಹಣ್ಣಿನೊಳಗೆ ನೋಟುಗಳನ್ನಿಟ್ಟು ಗುಜರಾತ್ ಚುನಾವಣೆಗೆ ಹಣ ಸಾಗಿಸಲಾಗುತ್ತಿದೆಯಾ ಎಂದು ಪೊಲೀಸರು ತನಿಖೆ ನಡೆಸಿದಾಗ ಬಾಳೆಹಣ್ಣಿ ನೊಳಗಿನ ನೋಟುಗಳ ರಹಸ್ಯ ಬಯಲಾಗಿತ್ತು.

ಗುಜರಾತ್ ಚುನಾವಣೆಯ ಹಿನ್ನೆಲೆ ಈ ರೀತಿಯಾಗಿ ನೋಟುಗಳನ್ನು ಸಾಗಿಸಲಾಗುತ್ತಿದೆ ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋ ಈಗಿನದ್ದಲ್ಲ. ಬದಲಾಗಿ ಈ ವಿಡಿಯೋ ವನ್ನು 2017ರ ಮಾರ್ಚ್‌ನಲ್ಲಿಯೇ ಪೋಸ್ಟ್ ಮಾಡಲಾಗಿದ್ದು, ಈಗಾಗಲೇ 28 ಲಕ್ಷ ಜನರು ಇದನ್ನು ನೋಡಿದ್ದಾರೆ.

ಹೀಗಾಗಿ ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬುದು ಸುಳ್ಳು . ಅಲ್ಲದೆ ಬಾಳೆಹಣ್ಣಿನೊಳಗಿ ರುವ 2000, 500ರು.ಗಳ ನೋಟುಗಳು ನಕಲಿ ನೋಟುಗಳಾಗಿವೆ. ಅಲ್ಲದೆ. ಬಾಳೆಹಣ್ಣುಗಳ ಒಳಗೆ ನೋಟುಗಳನ್ನು ಸುತ್ತಿಟ್ಟಿದ್ದ ಪೇಪರ್ ನಲ್ಲಿ ದಕ್ಷಿಣ ಭಾರತದ ಅಕ್ಷರಗಳಿವೆ ಹೀಗಾಗಿ ಇದು ದಕ್ಷಿಣ ಬಾರತದಿಂದ ಬಂದ ವಿಡಿಯೋವಾಗಿದೆ ಎಂಬುದು ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ.

ಹೀಗಾಗಿ ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಬಾಳೆಹಣ್ಣಿನೊಳಗೆ ಹಣ ಸಾಗಿಸಲಾಗುತ್ತಿದೆ ಎಂಬುದು ಸುಳ್ಳು ಎಂದಾಯಿತು.

click me!