ನಿಮ್ಮ ಮೊಬೈಲ್ ನಲ್ಲಿ ಈ ನಂಬರ್ ಇದೆಯಾ..? ಚೆಕ್ ಮಾಡಿಕೊಳ್ಳಿ

By Web DeskFirst Published Aug 6, 2018, 9:32 AM IST
Highlights

ಇದೀಗ ಎಲ್ಲರ ಮೊಬೈಲ್ ಫೋನ್ ನಲ್ಲಿ ಡೇಂಜರಸ್ ನಂಬರ್ ಒಂದು ಸೇರಿಕೊಂಡಿದೆ ಎಂದು ಸುದ್ದಿಯಾಗಿದೆ. ಇದು ನಿಮ್ಮ ಕಾಂಟ್ಯಾಕ್ಟ್ ನಿಲ್ಸಟ್ ನಲ್ಲಿ ಕಾಣಿಸಿಕೊಂಡಿದೆಯಾ..? ಇಲ್ಲಿದೆ ಈ ಬಗ್ಗೆ ಸತ್ಯಾಸತ್ಯತೆ

ನವದೆಹಲಿ :  ನಿಮ್ಮ ಮೊಬೈಲ್ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ‘ಯುಐಡಿಎಐ’ ಎಂಬ ಹೆಸರಿದ್ದರೆ ನಿಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂದರ್ಥ ಎಂದು ಹೇಳಲಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಸಂದೇಶದಲ್ಲಿ, ‘ಸ್ನೇಹಿತರೇ, ಕೂಡಲೆ ನಿಮ್ಮ ಮೊಬೈಲ್ ಕಾಂಟ್ಯಾಕ್ಟ್ ಲಿಸ್ಟ್ ಚೆಕ್ ಮಾಡಿ. ಹಾಗೆಯೇ ‘ಯುಐಡಿಎಐ’ಎಂದು ಸೇವ್ ಆಗಿರುವ ನಂಬರ್ ಡಿಲೀಟ್ ಮಾಡಿ. ಇತ್ತೀಚಿನ ಟೀವಿ ಚಾನೆಲ್‌ವೊಂದರ ವರದಿ ಪ್ರಕಾರ ಇದು ಹ್ಯಾಕ್ ನಂಬರ್’ ಎಂದು ಹೇಳಲಾಗಿದೆ. 

ಸದ್ಯ ಈ ಸಂದೇಶ ಸೋಷಿಯಲ್  ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ ‘ಯುಐಡಿಎಐ’ಎಂದು ಸೇವ್ ಆಗಿರುವ ನಂಬರ್‌ನಿಂದ ಮೊಬೈಲ್ ಹ್ಯಾಕ್ ಆಗುತ್ತಾ ಎಂದರೆ ಉತ್ತರ ‘ಇಲ್ಲ’. ಈ ಬಗ್ಗೆ ಊಹಾಪೋಹಗಳು ಹರಿದಾಡಲು ಪ್ರಾರಂಭವಾಗು ತ್ತಿದ್ದಂತೇ, ಗೂಗಲ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ, ಭಾರತದಲ್ಲಿ ಆ್ಯಂಡ್ರಾಯ್ಡ್ ಫೋನ್ ಗಳಲ್ಲಿ 2014 ರಿಂದಲೇ ಯುಐಡಿಎಐ ಸಂಖ್ಯೆಯನ್ನು ಸ್ವಯಂಚಾಲಿತವಾಗಿ ಅಳವಡಿಸಲಾಗಿದೆ. ಇಂದಿಗೂ ಕೂಡ ಅದು ಮುಂದುವರೆದಿದೆ. ಈ ನಂಬರ್ ಅನ್ನು ಬೇಕಾದರೆ ಇಟ್ಟುಕೊಳ್ಳಬಹುದು, ಇಲ್ಲವೇ ಡಿಲೀಟ್ ಮಾಡಬಹುದು. 

ಅಲ್ಲದೆ ಸೈಬರ್ ಸೆಕ್ಯುರಿಟಿ ತಜ್ಞರು ಬೂಮ್‌ಗೆ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ‘ಯುಐಡಿಎಐ’ ಎಂದು ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಸೇವ್ ಆಗಿದ್ದರೆ, ನಿಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂದರ್ಥವೆಂದು ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದುದು. ಕೆಲವು ಸಾರ್ವಜನಿಕ ಸೇವೆಯ ನಂಬರ್‌ಗಳನ್ನು ಟೆಲಿಕಾಂ ಆಪರೇಟರ್ಸ್‌ಗಳು, ಮೊಬೈಲ್ ತಯಾರಿಕರು ಅಥವಾ ಆಪರೇಟಿಂಗ್ ಸಿಸ್ಟ್ ಮ್ ಡೆವಲಪರ್ಸ್‌ ಸ್ವಯಂಚಾಲಿತವಾಗಿ ಅಳವಡಿಸಿರುತ್ತಾರೆ ಎಂದು ಹೇಳಿದ್ದಾರೆ. ಹಾಗಾಗಿ ‘ಯುಐಡಿಎಐ’ ಎಂಬ ನಂಬರ್ ಮೊಬೈಲ್‌ಗಳಲ್ಲಿ ಸೇವ್ ಆಗಿದ್ದರೆ ನಿಮ್ಮ ಮೊಬೈಲ್ ಹ್ಯಾಕ್ ಆಗಿದೆಎೆಂದು ಹರಿದಾಡುತ್ತಿರುವ ಸಂದೇಶ ಸುಳ್ಳು.

click me!