ಭೀಕರ ಅಪಘಾತದಲ್ಲಿ ಜನಪ್ರಿಯ ಸಂಗೀತಗಾರನ 2 ವರ್ಷದ ಪುತ್ರಿ ಸಾವು!

Published : Sep 25, 2018, 01:10 PM ISTUpdated : Sep 25, 2018, 01:16 PM IST
ಭೀಕರ ಅಪಘಾತದಲ್ಲಿ ಜನಪ್ರಿಯ ಸಂಗೀತಗಾರನ 2 ವರ್ಷದ ಪುತ್ರಿ ಸಾವು!

ಸಾರಾಂಶ

ಭೀಕರ ರಸ್ತೆ ಅಪಘಾತದಲ್ಲಿ ಗಾಯಕನ ಪುತ್ರಿ ಸಾವು! ಕೇರಳದ ಪಲ್ಲಿಪುರಂ ಬಳಿ ಮರಕ್ಕೆ ಡಿಕ್ಕಿ ಹೊಡೆದ ಕಾರು! ಕೇರಳದ ಜನಪ್ರಿಯ ವೈಲಿನ್ ವಾದಕ ಬಾಲಾ ಭಾಸ್ಕರ್!ಅಪಘಾತದಲ್ಲಿ ಭಾಸ್ಕರ್ ಪುತ್ರಿ ತೇಜಸ್ವಿನಿ ದುರ್ಮರಣ! ಅಪಘಾತದಲ್ಲಿ ಭಾಸ್ಕರ್, ಪತ್ನಿ ಲಕ್ಷ್ಮೀಗೆ ಗಂಭೀರ ಗಾಯ   

ತಿರುವನಂತಪುರಂ(ಸೆ.25): ಕೇರಳದ ಜನಪ್ರಿಯ ವೈಲಿನ್ ವಾದಕ ಮತ್ತು ಗಾಯಕ ಬಾಲಾ ಬಾಸ್ಕರ್ ಪುತ್ರಿ ಅಪಘಾತದಲ್ಲಿ ನಿಧನ ಹೊಂದಿದ್ದಾರೆ.  ಅಪಘಾತದಲ್ಲಿ ಬಾಲಾ ಭಾಸ್ಕರ್ ಮತ್ತು ಪತ್ನಿ ಲಕ್ಷ್ಮೀ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ತ್ರಿಸ್ಸೂರಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಬಾಲಾ ಭಾಸ್ಕರ್ ಕುಟುಂಬ, ಮರಳಿ ತಿರುವನಂತಪುರಂ ಗೆ ಬರುವಾಗ ಪಲ್ಲಿಪುರಂ ಬಳಿ ಕಾರು ಅಪಘಾತಕ್ಕೀಡಾಗಿದೆ.

ಭಾಸ್ಕರ್ ಅವರ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರಿಗೂ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆ ಸಾಗಿಸುವ ಮಾರ್ಗದಲ್ಲಿ ಭಾಸ್ಕರ್ ಅವರ ಎರಡು ವರ್ಷದ ಪುತ್ರಿ ತೇಜಸ್ವಿನಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ತಮ್ಮ 12ನೇ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದಲ್ಲಿ ಕಾಲೂರಿಸಿದ ಬಾಲಾ ಭಾಸ್ಕರ್, ಮಲಯಾಳಂ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ