
ಆನೇಕಲ್(ಸೆ.16): ಒತ್ತುವರಿ ತೆರವು ವಿಚಾರವಾಗಿ ತಾಲೂಕು ಕಛೇರಿಯಲ್ಲಿ ತಹಶೀಲ್ದಾರ್ ಹಾಗು ಜಿಲ್ಲಾಪಂಚಯತ್ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಆನೇಕಲ್ ನಲ್ಲಿ ನಡೆದಿದೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ.ಮುನಿರಾಜು ಹಾಗೂ ಆನೇಕಲ್ ತಹಶೀಲ್ದಾರ್ ಆಶಾ ಪರ್ವಿನ್ ನಡುವೆ ಒತ್ತುವರಿ ತೆರವು ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ. ಸರ್ಜಾಪುರ ಗ್ರಾಮದ ಸರ್ವೇ ನಂಬರ್ 74 ರಲ್ಲಿ 1.4 ಎಕರೆ ಸರ್ಕಾರಿ ಜಾಗವನ್ನು ಒಟ್ಟು 10 ಮಂದಿ ಒತ್ತುವರಿ ಮಾಡಿಕೊಂಡಿದ್ದಾರೆ. ಅದರಲ್ಲಿ ಜಿಪಂ ಅಧ್ಯಕ್ಷರು 1.5 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದು 2 ಬಾರಿಯ ಸರ್ವೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ತಹಶೀಲ್ದಾರ್ ನೋಟಿಸ್ ನೀಡಿದ್ದರು.
ಈ ವಿಚಾರವಾಗಿ ತಾಲೂಕು ಕಚೇರಿಗೆ ಬೆಂಬಲಿಗರೊಂದಿಗೆ ಆಗಮಿಸಿದ ಜಿಪಂ ಅಧ್ಯಕ್ಷ ಮುನಿರಾಜು ತಹಸೀಲ್ದಾರ್ ಆಶಾ ಪರ್ವಿನ್ ರೊಂದಿಗೆ ಮಾತಿನ ಚಕಮಕಿ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಸರ್ಕಾರಿ ಜಾಗವನ್ನು ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ಅದನ್ನು ತೆರವುಗೊಳಿಸುವುದು ನಮ್ಮ ಕರ್ತವ್ಯ. ಜಿಲ್ಲಾ ಪಂಚಯಿತ್ ಅಧ್ಯಕ್ಷರ ಈ ರೀತಿ ವರ್ತಿಸಿದರೆ ಹೇಗೆ. ಇದಲ್ಲದೆ ನಮ್ಮ ಅಧಿಕಾರಿಗಳೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾ ಪಂಚಯಾತ್ ಅಧ್ಯಕ್ಷ ಸಿ.ಮುನಿರಾಜು ಸಹ ಮಾತನಾಡಿ, ಕೆಲವರ ಚಿತಾವಣೆಯಿಂದ ತಹಶೀಲ್ದಾರ್ ನಮಗೆ ಕಿರುಕುಳ ನೀಡುತ್ತಿದ್ದಾರೆ. ನಮ್ಮ ತಾತನ ಕಾಲದಿಂದ ಬಂದಿರುವ ಆಸ್ತಿಯನ್ನು ಇದೀಗ ಒತ್ತುವರಿ ಎಂದು ಅರೋಪಿಸುತ್ತಿದ್ದು ಇದರ ಹಿಂದೆ ರಾಜಕೀಯ ಕೈವಾಡವಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.