ಕೋರ್ಟ್ ಮೊರೆ ಹೋದ ವಿಜಿ ಪತ್ನಿ ನಾಗರತ್ನ

Published : Nov 01, 2018, 08:11 AM IST
ಕೋರ್ಟ್ ಮೊರೆ ಹೋದ ವಿಜಿ ಪತ್ನಿ ನಾಗರತ್ನ

ಸಾರಾಂಶ

ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ಮೇಲಿನ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಸೆಷನ್ಸ್‌ ಕೋರ್ಟ್‌ ಮೊರೆ ಹೋಗಿದ್ದಾರೆ. 

ಬೆಂಗಳೂರು: ಚಿತ್ರ ನಟ ದುನಿಯಾ ವಿಜಯ್‌ ಅವರ ಎರಡನೇ ಪತ್ನಿ ಕೀರ್ತಿಗೌಡ ಮೇಲಿನ ಹಲ್ಲೆ ಪ್ರಕರಣದಲ್ಲಿ ಹೊಸದಾಗಿ ಸೇರಿಸಲಾಗಿರುವ ಸಾಕ್ಷ್ಯ ನಾಶ, ಮನೆಯ ಅತಿಕ್ರಮ ಪ್ರವೇಶ ಮತ್ತು ದರೋಡೆ ಆರೋಪಗಳಿಗೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ವಿಜಯ್‌ ಮೊದಲನೆ ಪತ್ನಿ ನಾಗರತ್ನ ನಗರದ ಸೆಷನ್ಸ್‌ ಕೋರ್ಟ್‌ ಮೊರೆ ಹೋಗಿದ್ದಾರೆ. 

ನಾಗರತ್ನ ಅವರ ಅರ್ಜಿ ಬುಧವಾರ 60ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ಮುಂದೆ ವಿಚಾರಣೆಗೆ ಬಂದಿತ್ತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿದ ನ್ಯಾಯಾಲಯ, ವಿಚಾರಣೆಯನ್ನು ನ.5ಕ್ಕೆ ಮುಂದೂಡಿತು.

ಇದೇ ವೇಳೆ ನಾಗರತ್ನ ಅವರ ನಿರೀಕ್ಷಣಾ ಜಾಮೀನು ಅರ್ಜಿ ಸಂಬಂಧ ತಮ್ಮ ವಾದ ಮಂಡಿಸಲು ಅವಕಾಶÜ ಕಲ್ಪಿಸಬೇಕು ಎಂದು ಕೋರಿ ಕೀರ್ತಿಗೌಡ ಪರ ವಕೀಲರು ಸಹ ಮಧ್ಯಂತರ ಅರ್ಜಿಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಕೀರ್ತಿ ಗೌಡ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಈಗಾಗಲೇ ನಾಗರತ್ನ ಅವರು ಅಧೀನ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. 

ಆದರೆ, ಇತ್ತೀಚೆಗೆ ಕೀರ್ತಿ ಗೌಡ ಮೇಲಿನ ಹಲ್ಲೆಯ ದೃಶ್ಯಗಳನ್ನು ಬಿಡುಗಡೆಯಾದ ಹಿನ್ನೆಲೆಯಲ್ಲಿ ಗಿರಿನಗರ ಠಾಣಾ ಪೊಲೀಸರು, ನಾಗರತ್ನ ಅವರ ವಿರುದ್ಧ ಹೆಚ್ಚುವರಿಯಾಗಿ ದರೋಡೆ, ಸಾಕ್ಷ್ಯ ನಾಶ ಯತ್ನ ಮತ್ತು ಮನೆಯ ಅತಿಕ್ರಮ ಪ್ರವೇಶ ಪ್ರಕರಣಗಳನ್ನು ಸೇರಿಸಿದ್ದಾರೆ. ಈ ಪ್ರಕರಣಗಳ ಸಂಬಂಧ ನಾಗರತ್ನ ಅವರು ಮತ್ತೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಡ್ಡ ಬಂದ ನಾಯಿ ಜೀವ ಉಳಿಸಲು ಹೋಗಿ ಸಚಿವರ ಕಾರು ಅಪಘಾತ, ಹೆದ್ದಾರಿಯಲ್ಲಿ ಘಟನೆ
ಹೆಂಡತಿಯ ಪರ್ಮಿಷನ್ ಇಲ್ಲದೆ ಎಣ್ಣೆ ಹೊಡೆದರೆ ಗಂಡನಿಗೆ ಜೈಲು? ವೈರಲ್ ಆಗ್ತಿರೋ ಈ ಸುದ್ದಿಯ ಅಸಲಿಯತ್ತೇನು?