ಲಂಡನ್'ನಲ್ಲಿ ಉದ್ಯಮಿ ವಿಜಯ್ ಮಲ್ಯ ಬಂಧನ; ಅರ್ಧಗಂಟೆಯಲ್ಲೇ ಜಾಮೀನು ಪಡೆದು ಹೊರಬಂದ ಮದ್ಯದೊರೆ

Published : Oct 03, 2017, 06:14 PM ISTUpdated : Apr 11, 2018, 01:12 PM IST
ಲಂಡನ್'ನಲ್ಲಿ ಉದ್ಯಮಿ ವಿಜಯ್ ಮಲ್ಯ ಬಂಧನ; ಅರ್ಧಗಂಟೆಯಲ್ಲೇ ಜಾಮೀನು ಪಡೆದು ಹೊರಬಂದ ಮದ್ಯದೊರೆ

ಸಾರಾಂಶ

9 ಸಾವಿರ ಕೋಟಿ ಸಾಲಮಾಡಿ  ಲಂಡನ್'ನಲ್ಲಿ ತಲೆ ಮರೆಸಿಕೊಂಡಿದ್ದ  ಉದ್ಯಮಿ ವಿಜಯ್ ಮಲ್ಯರವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಬಂಧನವಾದ ಅರ್ಧ ಗಂಟೆಯಲ್ಲೇ ಮಲ್ಯಗೆ ಲಂಡನ್​​'ನ  ವೆಸ್ಟ್​​ಮಿನಿಸ್ಟರ್ ಕೋರ್ಟ್​ನಿಂದ ಜಾಮೀನು ಸಿಕ್ಕಿದೆ.

ನವದೆಹಲಿ (ಅ.03): 9 ಸಾವಿರ ಕೋಟಿ ಸಾಲಮಾಡಿ  ಲಂಡನ್'ನಲ್ಲಿ ತಲೆ ಮರೆಸಿಕೊಂಡಿದ್ದ  ಉದ್ಯಮಿ ವಿಜಯ್ ಮಲ್ಯರವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಬಂಧನವಾದ ಅರ್ಧ ಗಂಟೆಯಲ್ಲೇ ಮಲ್ಯಗೆ ಲಂಡನ್​​'ನ  ವೆಸ್ಟ್​​ಮಿನಿಸ್ಟರ್ ಕೋರ್ಟ್​ನಿಂದ ಜಾಮೀನು ಸಿಕ್ಕಿದೆ.

ಲಂಡನ್​ ಪೊಲೀಸರು ಮಲ್ಯರನ್ನು ಬಂಧಿಸಿ  ಕೋರ್ಟ್​ಗೆ ಹಾಜರುಪಡಿಸಿದ್ದರು. ಬಂಧನವಾದ ಅರ್ಧ ಗಂಟೆಯಲ್ಲೇ ಮಲ್ಯಗೆ ಜಾಮೀನು ಸಿಕ್ಕಿ ಹೊರ ಬಂದಿದ್ದಾರೆ. 9 ಸಾವಿರ ಕೋಟಿ ಬ್ಯಾಂಕಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ ಇವರ ಮೇಲೆ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಪ್ರಕರಣ ದಾಖಲಿಸಿತ್ತು.

6 ತಿಂಗಳಲ್ಲಿ 2ನೇ ಬಾರಿ ಮಲ್ಯರನ್ನು ಲಂಡನ್​ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್​ 19ರಂದು ಬಂಧಿಸಲಾಗಿತ್ತು. ಸುಪ್ರೀಂಕೋರ್ಟ್​ ಸೇರಿ ಹಲವು ಕೋರ್ಟ್​ಗಳಲ್ಲಿ ಇವರ ಮೇಲೆ ಪ್ರಕರಣ ದಾಖಲಾಗಿತ್ತು.  ಹಲವು ಬಾರಿ ಸಮನ್ಸ್​ ನೀಡಿದ್ದರೂ ಭಾರತಕ್ಕೆ ಬಾರದ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ