
ದಾವಣಗೆರೆ(ಡಿ.20): ರಾಜ್ಯದ ವಿಶ್ವವಿದ್ಯಾಲಯದ ಕುಲಪತಿಗಳು ಗುಂಡು ಹಾಕಿದ್ದರೂ ಸರ್ಕಾರವೇ ಪಾವತಿಸಬೇಕಾ? ಇಂಥದೊಂದು ಪ್ರಶ್ನೆ ಉದ್ಭವಿಸಲು ಇಲ್ಲೊಂದು ವಿವಿಯ ವೈಸ್ ಛಾನ್ಸಲರ್, ವಿವಿಧ ಬಾರ್ ಅಂಡ್ ರೆಸ್ಟೋರೆಂಟ್'ಗಳಲ್ಲಿ ಕಂಠಪೂರ್ತಿ ಕುಡಿದು ಸರ್ಕಾರದ ಹಣವನ್ನು ಕ್ಲೈಮ್ ಮಾಡಿದ್ದಾರೆ. ಹಾಗಾದ್ರೆ ಆ ಯೂನಿವರ್ಸಿಟಿ ಯಾವುದು? ಗುಂಡು ಹಾಕಿ ಬಿಲ್ ಕೊಟ್ಟಿರುವ ವೈಸ್ ಛಾನ್ಸಲರ್ ಯಾರು? ಇಲ್ಲಿದೆ ಡಿಟೇಲ್ಸ್.
ದಾವಣಗೆರೆ ವಿಶ್ವವಿದ್ಯಾಲಯ ಈಗ ಮತ್ತೊಮ್ಮೆ ಸುದ್ದಿಯಾಗಿದೆ. ಈ ಸುದ್ದಿಯ ರೂವಾರಿ ಇಲ್ಲಿನ ವೈಸ್ ಛಾನ್ಸಲರ್ ಬಿ.ಬಿ.ಕಲಿವಾಳ್. 2013ರಲ್ಲಿ ವೈಸ್ ಛಾನ್ಸಲರ್ ಆಗಿ ನೇಮಕವಾಗಿದ್ದ ಕಲಿವಾಳ್ ಅವರ ನೇಮಕವೇ ವಿವಾದಕ್ಕೀಡಾಗಿತ್ತು. ಕುಲಪತಿಯಾಗಿ 3 ವರ್ಷಗಳನ್ನು ಪೂರೈಸಿರುವ ಕಲಿವಾಳ್ ಅವ್ರೀಗ ಇನ್ನೊಂದು ವಿವಾದಕ್ಕೆ ಸಿಲುಕಿದ್ದಾರೆ. ಅದೇನೆಂದರೆ ಕುಲಪತಿಗಳ ಆತಿಥ್ಯ ವೆಚ್ಚಕ್ಕೆ ನೀಡಿದ್ದ ಅನುದಾನವನ್ನು ಮದ್ಯಪಾನಕ್ಕೆ ಬಳಸಿಕೊಂಡಿದ್ದಾರೆ.
ಕುಲಪತಿಗಳ ಆತಿಥ್ಯ ವೆಚ್ಚಕ್ಕೆ 56,442 ರೂ.ಪಾವತಿ: ಇದರಲ್ಲಿ ಮದ್ಯ, ಮಾಂಸಹಾರಕ್ಕೆ 20,624 ರೂ.ಪಾವತಿ
ವಿಶ್ವವಿದ್ಯಾಲಯಗಳ ಅಧಿನಿಯಮದ ಪ್ರಕಾರ ಕುಲಪತಿಗಳ ಆತಿಥ್ಯ ವೆಚ್ಚಕ್ಕೆ ಒದಗಿಸಿರುವ ಅನುದಾನವನ್ನು ಮದ್ಯಪಾನಕ್ಕೆ ಬಳಸ್ಕೋಳ್ಳೋದಿಕ್ಕೆ ಅವಕಾಶಗಳಿಲ್ಲ. ಆದರೂ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳು, ಆತಿಥ್ಯ ವೆಚ್ಚಕ್ಕೆ ನೀಡಿದ 56,442 ರೂಪಾಯಿಯಲ್ಲಿ , 20,624 ರೂಪಾಯಿಯನ್ನು ಮದ್ಯಪಾನ ಮತ್ತು ಮಾಂಸಹಾರಕ್ಕೆ ಪಾವತಿಸಿದ್ದಾರೆ.
ದಾವಣಗೆರೆಯ ಕೆಎಫ್ಸಿ ಯಮ್ ರೆಸ್ಟೋರೆಂಟ್ 541 ರೂ
ದಾವಣಗೆರೆಯ ಮಲ್ಟಿ ಕ್ಯುಸಿನ್ ರೆಸ್ಟೋರೆಂಟ್- 1,962 ರೂ.
ದಾವಣಗೆರೆಯ 4 ಸೀಸನ್ ಫ್ಯಾಮಿಲಿ ರೆಸ್ಟೋರೆಂಟ್ ಬಾರ್ 740 ರೂ.
ರಾಯಚೂರಿನ ಪ್ರಿಯಾ ಬಾರ್ ಅಂಡ್ ರೆಸ್ಟೋರೆಂಟ್ 2,381 ರೂ.
ಬೆಂಗಳೂರಿನ ಕಾವೇರಿ ಹೋಟೆಲ್ 15,000 ರೂ.
ಆದರೆ ಬೆಂಗಳೂರಿನ ಕಾವೇರಿ ಹೋಟೆಲ್‌ಗೆ 15,000 ರೂಪಾಯಿ ಪಾವತಿ ಮಾಡಿರುವುದರ ಬಗ್ಗೆ ಲೆಕ್ಕ ಪರಿಶೋಧಕರು ಆಕ್ಷೇಪಣೆ ಎತ್ತಿದ್ದಾರೆ. ಮೂಲ ವೋಚರ್ ಪಡೆದುಕೊಳ್ಳದೇ ಕೇವಲ ರಸೀದಿ ಆಧರಿಸಿ ಕಾವೇರಿ ಹೋಟೆಲ್'ಗೆ ಹಣ ಪಾವತಿ ಮಾಡಿರೋದಿಕ್ಕೆ ಸ್ಪಷ್ಟೀಕರಣ ಕೇಳಿದ್ದಾರೆ.
ರಾಜ್ಯಪಾಲರಿಗೆ ದೂರು ಸಲ್ಲಿಕೆ
ಇನ್ನೂ ಬಿ.ಬಿ.ಕಲಿವಾಳ್ ಅವರ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಹಲವು ಅಕ್ರಮಗಳ ಕುರಿತು ಯುವ ಭಾರತ್ ಗ್ರೀನ್ ಬ್ರಿಗೇಡ್ ರಾಜ್ಯಪಾಲರಿಗೆ ಲೆಕ್ಕ ಪರಿಶೋಧನೆ ವರದಿ ಸಮೇತ ದೂರು ಸಲ್ಲಿಸಿದೆ. ಈ ದೂರು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ವಿಚಾರಣೆ ನಡೆಸಬೇಕು ಅಂತ ಗೌರ್ನರ್ ಕಚೇರಿಯಿಂದ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬಂದಿದೆ. ಆದರೆ ಈ ಪತ್ರ ಆಧರಿಸಿ ಉನ್ನತ ಶಿಕ್ಷಣ ಇಲಾಖೆ ಇದುವರೆಗೂ ಯಾವ್ದೇ ಕ್ರಮ ಕೈಗೊಂಡಿಲ್ಲ. ಇದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪ್ರತಿಕ್ರಿಯೆ ಕೇಳಿದ್ದಕ್ಕೆ ಹಲ್ಲು ಕಡಿದ ವಿಸಿ
ಮದ್ಯ ಮಾಂಸಕ್ಕೆ ಅತಿಥಿ ವೆಚ್ಚ ಭರಿಸಿದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಗೆ ಈ ಅಕ್ರಮದ ಬಗ್ಗೆ ಸುವರ್ಣ ನ್ಯೂಸ್ ಪ್ರಶ್ನಿಸಿದ್ದಕ್ಕೆ ಕೆಂಡಾಮಂಡಲರಾಗಿದ್ದಾರೆ.
ವಿವಿ ಅಧಿನಿಯಮದಲ್ಲಿ ಮಾಂಸ ಮದ್ಯ ಕೊಡಿಸಹುದೇ ಎಂಬ ಪ್ರಶ್ನೆಗೆ ನೀವೆ ಎಲ್ಲಾ ಹೇಳಿದ್ದರೇ ನಾನೇನು ಹೇಳುವುದು ಎಂದರು. ಅಲ್ಲದೆ ವರದಿಗೆ ತೆರಳಿದ ವರದಿಗಾರನ ಮೇಲೆ ಹಲ್ಲು ಮಸೆದಿದ್ದಾರೆ.
ಈಗಾಗಲೇ ಆ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ ಮತ್ತೇ ನಾನು ಕೊಡುವುದಿಲ್ಲವೆಂದು ಕ್ಯಾಮರಕ್ಕೆ ಅಡ್ಡಿ ಪಡಿಸಿ ಉದ್ಧಟತನ ಮೆರೆದಿದ್ದಾರೆ.
ವಿದೇಶಗಳಿಂದ ವಿಶ್ವವಿದ್ಯಾನಿಲಯ ಕೆಲಸಗಳಿಗೆ ಅತಿಥಿಗಳು ಬರುತ್ತಾರೆ ಅವರಿಗೆ ಮಾಂಸ ಮದ್ಯ ತಿನ್ನಬೇಡಿ ಎಂದು ಹೇಳಲಿಕ್ಕೆ ಆಗುತ್ತದೇಯಾ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಎರಡು ಗಂಟೆ ಛೇಂಬರ್ ಬಳಿ ಕಾಯ್ದು ಕುಳಿತರು ಪ್ರತಿಕ್ರಿಯೆ ನೀಡದ ವಿಸಿ ಕೊನೆಗೆ ನಾಳೆ ಬಾ ಅಮೇಲೆ ಕೊಡುತ್ತೇನೆ ಎಂದು ಸುವರ್ಣ ನ್ಯೂಸ್ ವರದಿಗಾರನಿಗೆ ಸಬೂಬು ಹೇಳಿ ತಪ್ಪಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.