96ಕ್ಕೆ ಕಾಲಿಟ್ಟ ಅಚ್ಯುತಾನಂದನ್: ರಾಜಕೀಯ ನಂದನವನದ ಹಿರಿಯ ನೇತಾರ!

By Web DeskFirst Published Oct 20, 2019, 9:17 PM IST
Highlights

96ನೇ ವಸಂತಕ್ಕೆ ಕಾಲಿಟ್ಟ ಹಿರಿಯ ಸಿಪಿಎಂ ನೇತಾರ ವಿಎಸ್ ಅಚ್ಯುತಾನಂದನ್| ಭಾರತದ ಅತ್ಯಂತ ಹಿರಿಯ ಸಕ್ರೀಯ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅಚ್ಯುತಾನಂದನ್| 2006-11ರವರೆಗೆ ಕೇರಳ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅಚ್ಯುತಾನಂದನ್|ಕೇರಳದ ಮಲ್ಲಂಪುಜಾ ಕ್ಷೇತ್ರದಿಂದ ಏಳು ಬಾರಿ ಶಾಸಕರಾಗಿರುವ ಅಚ್ಯುತಾನಂದನ್| ಕೇರಳದ ಆಡಳಿತ ಸುಧಾರಣಾ ಆಯೋಗದ ಸದಸ್ಯ| ಹಿರಿಯ ಮಾರ್ಕ್ಸ್‌ವಾದಿಗೆ ಜನ್ಮದಿನದ ಶುಭ ಕೋರಿದ ರಾಜಕೀಯ ನೇತಾರರು|

ತಿರುವನಂತಪುರಂ(ಅ.20): ಕೇರಳ ಮಾಜಿ ಸಿಎಂ, ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯ ನೇತಾರ ವಿಎಸ್ ಅಚ್ಯುತಾನಂದನ್ 96ನೇ ವಸಂತಕ್ಕೆ ಕಾಲಿರಿಸಿದ್ದಾರೆ.

ಈ ಮೂಲಕ ಭಾರತದ ರಾಜಕಾರಣದ ಮೊಗಸಾಲೆಯಲ್ಲಿ ಸಕ್ರೀಯರಾಗಿರುವ ಅತ್ಯಂತ ಹಿರಿಯ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಅಚ್ಯುತಾನಂದನ್ ಪಾತ್ರರಾಗಿದ್ದಾರೆ.

ಕೇರಳದ ಮಲ್ಲಂಪುಜಾ ಕ್ಷೇತ್ರದಿಂದ ಏಳು ಬಾರಿ ಶಾಸಕರಾಗಿರುವ ಅಚ್ಯುತಾನಂದನ್, 2006-11ರ ವರೆಗೆ ಕೇರಳದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕೇರಳದ ಆಡಳಿತ ಸುಧಾರಣಾ ಆಯೋಗದ ಸದಸ್ಯರಾಗಿರುವ ಅಚ್ಯುತಾನಂದನ್, ಈ ಇಳಿ ವಯಸ್ಸಿನಲ್ಲೂ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. 

1985ರಿಂದ 2009ರವೆಗೆ ಸಿಪಿಎಂ ಪಾಲಿಟ್‌ ಬ್ಯುರೋ ಸದಸ್ಯರಾಗಿದ್ದ ಅಚ್ಯುತಾನಂದನ್, ಭಾರತದಲ್ಲಿ ಮಾರ್ಕ್ಸ್‌ವಾದಿ ಸಿದ್ಧಾಂತ ಪ್ರಚರುಪಡಿಸುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ.

ಇನ್ನು ಅಚ್ಯುತಾನಂದನ್ ಜನ್ಮದಿನದ ಹಿನ್ನೆಲೆಯಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಬದಿಗಿರಿಸಿ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನೇತಾರರು ಹಿರಿಯ ರಾಜಕಾರಣಿಗೆ ಶುಭಾಶಯ ಕೋರಿದ್ದಾರೆ.

click me!