ಭಾರತೀಯ ಸೇನೆಗೆ ಹೋಗುತ್ತಾ ಹಾಸನದ ಹಾಲು..?

By Web DeskFirst Published Aug 5, 2018, 9:25 AM IST
Highlights

ಕೋಲಾರ-ಚಿಕ್ಕಬಳ್ಳಾಪುರ  ಹಾಲು ಉತ್ಪಾದಕ ಸಹಕಾರ ಸಂಘಗಳ ಒಕ್ಕೂಟದಿಂದ (ಕೋಚಿಮುಲ್) ಭಾರತೀಯ ಸೇನೆಗೆ ಸರಬರಾಜು ಮಾಡಲಾಗುತ್ತಿರುವ  ಹಾಲಿನ ಪ್ರಮಾಣವನ್ನು ಕಡಿತಗೊಳಿಸದೆ ಮುಂದುವರಿಸಬೇಕು ವೀರಪ್ಪ ಮೋಯ್ಲಿ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದೆ. 

ಬೆಂಗಳೂರು: ಕೋಲಾರ-ಚಿಕ್ಕಬಳ್ಳಾಪುರ  ಹಾಲು ಉತ್ಪಾದಕ ಸಹಕಾರ ಸಂಘಗಳ ಒಕ್ಕೂಟದಿಂದ (ಕೋಚಿಮುಲ್) ಭಾರತೀಯ ಸೇನೆಗೆ ಸರಬರಾಜು ಮಾಡಲಾಗುತ್ತಿರುವ  ಹಾಲಿನ ಪ್ರಮಾಣವನ್ನು ಕಡಿತಗೊಳಿಸದೆ ಮುಂದುವರಿಸಬೇಕು ಎಂದು ಸಂಸದ ಎಂ. ವೀರಪ್ಪ ಮೊಯ್ಲಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದೆ. 

ಕೃಷಿ ಸಚಿವ ಶಿವಶಂಕರೆಡ್ಡಿ, ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಸೇರಿದಂತೆ ಜಿಲ್ಲೆಯ ವಿವಿಧ ನಾಯಕರು ಹಾಗೂ ರೈತರ ಮುಖಂಡರೊಂದಿಗೆ  ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಮೊಯ್ಲಿ ಅವರು ಮನವಿ ಸಲ್ಲಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಮೊಯ್ಲಿ, ಹಲವು ವರ್ಷಗಳಿಂದ ಕೋಚಿಮುಲ್ ನಿಂದ ಸೇನೆಗೆ ನಿರ್ದಿಷ್ಟ ಪ್ರಮಾಣದ ಹಾಲು ಸರಬರಾಜು ಮಾಡಲು ನಿಗದಿಪಡಿಸಲಾಗಿತ್ತು. 

ಈಗ ಅದರಲ್ಲಿ ಒಂದಷ್ಟು ಪ್ರಮಾಣವನ್ನು ಕಡಿತಗೊಳಿಸಿ ಹಾಸನ ಒಕ್ಕೂಟದಿಂದ (ಹಮುಲ್) ಸರಬರಾಜು ಮಾಡುವ ಪ್ರಯತ್ನ ಗಳು ನಡೆದಿದೆ. ಇದರಿಂದ ವಿವಾದ ಸೃಷ್ಟಿಯಾ ಗಿದ್ದು, ಹಾಲಿನ ಪ್ರಮಾಣದಲ್ಲಿ ಕಡಿತಗೊಳಿಸ  ದಂತೆ ಮುಂದುವರೆಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಹೇಳಿದರು. 

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಸಚಿವ ಎಚ್.ಡಿ.ರೇವಣ್ಣ ಅವರು ಕೆಎಂಎಫ್  ಅಧ್ಯಕ್ಷರಾಗಿದ್ದಾಗಲೇ ಕೋಚಿಮುಲ್‌ನಿಂದ ಸೇನೆಗೆ ಹಾಲು ಸರಬರಾಜು ಮಾಡುವ ನಿರ್ಧಾರ ಆಗಿತ್ತು. ಈಗ ಅವರು ಹಮುಲ್ ಅಧ್ಯಕ್ಷರಾಗಿರುವುದರಿಂದ ಸಾಮಾನ್ಯವಾಗಿ ಅವರ ಜಿಲ್ಲೆಯ ಒಕ್ಕೂಟಕ್ಕೆ ಹೆಚ್ಚು ಸಹಕಾರ ಆಗಬೇಕು ಎಂಬ ಕಾರಣಕ್ಕೆ ನಮ್ಮ ಒಕ್ಕೂಟದಿಂದ ಸರಬರಾಜಾಗುವ ಹಾಲು ಕಡಿತಕ್ಕೆ ಮುಂದಾಗಿರಬಹುದು ಎಂದರು.

click me!