
ಬೆಂಗಳೂರು : ತನ್ನ ಕಾರಿಗೆ ಜಾಗ ಬಿಡಲಿಲ್ಲ ಎಂಬ ಕಾರಣಕ್ಕೆ ಖ್ಯಾತ ಗಾಯಕಿ ಹಾಗೂ ನಟಿಯೂ ಆಗಿರುವ ವಸುಂಧರಾ ದಾಸ್ ಅವರ ಕಾರು ಅಡ್ಡಗಟ್ಟಿನಿಂದಿಸಿದ್ದ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಕಾಡುಗೋಡಿ ನಿವಾಸಿ ಮುನಾವರ್ ಪಾಷಾ (30) ಬಂಧಿತ. ವಸುಂಧರಾ ದಾಸ್ ನೀಡಿದ ದೂರಿನ ಮೇರೆಗೆ ಮಲ್ಲೇಶ್ವರಂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅ.29ರಂದು ಸಂಜೆ 4.30ರ ಸುಮಾರಿಗೆ ವಸುಂಧರಾ ದಾಸ್ ತಮ್ಮ ಕಾರಿನಲ್ಲಿ ಬಂದಿದ್ದು, ಭಾಷ್ಯಂ ಸರ್ಕಲ್ ಸಿಗ್ನಲ್‌ನಲ್ಲಿ ನಿಂತಿದ್ದರು. ಈ ವೇಳೆ ಕಾರಿನ ಪಕ್ಕದಲ್ಲಿ ಮುನಾವರ್ ಪಾಷಾನ ಕಾರು ಬಂದು ನಿಂತಿದೆ.
ಸಿಗ್ನಲ್ ಬಿಟ್ಟಾಗ ಇಬ್ಬರ ಕಾರು ಪರಸ್ಪರ ವಿರುದ್ಧ ದಿಕ್ಕಿನ ಕಡೆಗೆ ಹೊರಟಿವೆ. ಆಗ ತನ್ನ ಕಾರಿಗೆ ಬಲಕ್ಕೆ ತಿರುಗಲು ಅವಕಾಶ ನೀಡಿಲ್ಲ ಎಂದು ಪಾಷಾ ಹಿಂಬಾಲಿಸಿಕೊಂಡು ಬಂದು, ಪದೇಪದೇ ಹಾರ್ನ್ ಮಾಡಿ ತೊಂದರೆ ನೀಡಿದ್ದಾನೆ.
ನಂತರ ಇನ್ನೊಂದು ಸಿಗ್ನಲ್‌ನಲ್ಲಿ ಗಾಯಕಿಯ ಕಾರು ನಿಂತಾಗ ಪಾಷಾ ಕೆಳಗಿಳಿದು ಬಂದು ಗಾಯಕಿಯನ್ನು ಕೆಳಗೆ ಇಳಿಯುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿನ ಬಂಪರ್‌ಗೆ ಕಾಲಿನಿಂದ ಒದ್ದು ಕೂಗಾಡಿದ್ದಾನೆ. ನಂತರ ಮತ್ತೆ ಹಿಂಬಾಲಿಸಿಕೊಂಡು ಬಂದು ತೊಂದರೆ ನೀಡಿದ್ದಾನೆ. ಈ ಬಗ್ಗೆ ವಸುಂಧರಾ ದಾಸ್ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.