ರಾಹುಲ್ ಗಾಂಧಿ ಇನ್ನೂ ಡೈಪರ್‌ನಿಂದ ಹೊರಬಂದಿಲ್ಲ; ಬಿಜೆಪಿ ಸಚಿವರ ಲೇವಡಿ

Published : Oct 10, 2017, 08:02 PM ISTUpdated : Apr 11, 2018, 12:44 PM IST
ರಾಹುಲ್ ಗಾಂಧಿ ಇನ್ನೂ ಡೈಪರ್‌ನಿಂದ ಹೊರಬಂದಿಲ್ಲ; ಬಿಜೆಪಿ ಸಚಿವರ ಲೇವಡಿ

ಸಾರಾಂಶ

ರಾಹುಲ್ ಗಾಂಧಿ ಇನ್ನೂ ಡೈಪರ್‌ನಿಂದ ಹೊರಬಂದಿಲ್ಲ ಎಂದು ಉತ್ತರ ಪ್ರದೇಶದ ಬಿಜೆಪಿ ವಕ್ತಾರ, ಆರೋಗ್ಯ ಸಚಿವ ಸಿದ್ದಾರ್ಥನಾಥ್ ವ್ಯಂಗ್ಯವಾಡಿದ್ದಾರೆ.

ಬೆಂಗಳೂರು (ಅ.10): ರಾಹುಲ್ ಗಾಂಧಿ ಇನ್ನೂ ಡೈಪರ್‌ನಿಂದ ಹೊರಬಂದಿಲ್ಲ ಎಂದು ಉತ್ತರ ಪ್ರದೇಶದ ಬಿಜೆಪಿ ವಕ್ತಾರ, ಆರೋಗ್ಯ ಸಚಿವ ಸಿದ್ದಾರ್ಥನಾಥ್ ವ್ಯಂಗ್ಯವಾಡಿದ್ದಾರೆ.

'ಯೆ ಬಾಲಕ್ ಬಡಾ ಹೀ ನಹಿ ಹೋ ರಹಾ ಹೈ (ಈ ಹುಡುಗ ದೊಡ್ಡವನೇ ಆಗುತ್ತಿಲ್ಲ). ಈತ ಇನ್ನೂ ಡೈಪರ್‌ನಿಂದ ಹೊರಗಡೆಯೇ ಬಂದಿಲ್ಲ' ಎಂದು ರಾಹುಲ್ ಗಾಂಧಿ ಟ್ವೀಟಿಗೆ ಪ್ರತಿಕ್ರಿಯೆ ನೀಡುವ ಮೂಲಕ ಟಾಂಗ್ ನೀಡಿದ್ದಾರೆ. 'ಬೆಳವಣಿಗೆ ಮತ್ತು ಲಾಭಗಳನ್ನು ಖಾತರಿಪಡಿಸುವ 'ದಾಮಾದ್ ಮಾದರಿ' ಬಗ್ಗೆ ಕಾಂಗ್ರೆಸ್ ವಿವರಿಸಿದರೆ ಚೆನ್ನಾಗಿರುತ್ತದೆ. ನ್ಯಾಷನಲ್ ಹೆರಾಲ್ಡ್ ಮಾದರಿ ವಿವರಿಸಬೇಕು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಲೆಳೆದಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಅವರ ಪುತ್ರ ಜಯ್ ಶಾ ವಿರುದ್ಧ  ವೆಬ್ ಪೋರ್ಟಲ್ ವಾಹಿನಿಯೊಂದು ಭ್ರಷ್ಟಾಚಾರ ಆರೋಪ ವರದಿ  ಮಾಡಿತ್ತು.  ಅದನ್ನು ಉಲ್ಲೇಖಿಸಿ ಉತ್ತರ ಪ್ರದೇಶದ ಆರೋಗ್ಯ ಸಚಿವ ಸಿದ್ದಾರ್ಥನಾಥ್ ರಾಹೂಲ್ ಗಾಂಧಿಯನ್ನು ವ್ಯಂಗ್ಯವಾಡಿದ್ದಾರೆ.  ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಜನರನ್ನು ದಾರಿತಪ್ಪಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿರುವ ಸಿದ್ದಾರ್ಥನಾಥ್,  ಟ್ವೀಟಿಗೆ ಪ್ರತಿಕ್ರಿಯೆ ನೀಡುವ ಮೂಲಕ ಟಾಂಗ್ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು 5 ಸಾವಿರ ಕೋಟಿ ರೂಪಾಯಿಯ ಹೆರಾಲ್ಡ್ ಹಗರಣಕ್ಕೆ ಗುರಿ ಮಾಡುವ ಧಾಟಿಯಲ್ಲಿ ಸಚಿವರು ಮಾತನಾಡಿದ್ದಾರೆ. ಜಯ್ ಶಾ ಪರ ವಕಾಲತ್ತು ವಹಿಸಲು ನೀವೇಕೆ ಲಖನೌದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದೀರಿ ಎಂದು ಕೇಳಿದಾಗ, ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಮತ್ತು ಯುಪಿಸಿಸಿ ಮುಖ್ಯಸ್ಥ ರಾಜ್ ಬಬ್ಬರ್ ಕೂಡಾ ಲಖನೌದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿಲ್ಲವೇ ಎಂದು ಪ್ರಶ್ನಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ಯಾನ್ಸರ್ ಹೋರಾಟದಲ್ಲಿರುವಾಗಲೇ ಕೆಲಸದಿಂದ ತೆಗೆದ ಕಂಪನಿ, ಗೇಟಿನ ಮುಂದೆ ಉಪವಾಸ ಹೋರಾಟ
ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!