ಧೈರ್ಯ ಇದ್ದರೆ ಬೀಫ್‌ ರಫ್ತು ನಿಲ್ಲಿಸಿ: ಖಾದರ್‌

By Suvarna Web DeskFirst Published Jun 2, 2017, 11:27 AM IST
Highlights

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಗೋ ಮಾರುಕಟ್ಟೆ ನಿಯಂತ್ರಣ ನಿಯಮಾವಳಿ ತಲೆ-ಬುಡ ಇಲ್ಲದ್ದು, ಇದು ಕೇಂದ್ರ ಸರ್ಕಾರ ಓಟಿಗಾಗಿ ಮಾಡುತ್ತಿರುವ ಸರ್ಕಸ್‌: ಸಚಿವ ಖಾದರ್


ಮಂಗಳೂರು: ಕೇಂದ್ರ ಸರ್ಕಾರಕ್ಕೆ ಧೈರ್ಯ ಇದ್ದರೆ ವಿದೇಶಗಳಿಗೆ ಗೋ ಮಾಂಸ ರಫ್ತಾಗುವುದನ್ನು ನಿಲ್ಲಿಸಲಿ ಅದನ್ನು ಬಿಟ್ಟು ಜನರನ್ನು ಮೂರ್ಖರನ್ನಾಗಿಸುವ ನಿಮಯ ಜಾರಿ ಮಾಡುವುದು ಸರಿಯಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಗೋ ಮಾರುಕಟ್ಟೆನಿಯಂತ್ರಣ ನಿಯಮಾವಳಿ ತಲೆ-ಬುಡ ಇಲ್ಲದ್ದು, ಇದು ಕೇಂದ್ರ ಸರ್ಕಾರ ಓಟಿಗಾಗಿ ಮಾಡುತ್ತಿರುವ ಸರ್ಕಸ್‌. ವಿದೇಶಕ್ಕೆ ಗೋ ಮಾಂಸ ರಫ್ತು ಮಾಡುವ ಕುರಿತು ಚಕಾರವೆತ್ತದೆ ಏಕಾಏಕಿ ನಿಯಮ ರೂಪಿಸಿ ಗೊಂದಲ ಸೃಷ್ಟಿಸುವ ಜೊತೆಗೆ ಜನ ಕಚ್ಚಾಡುವುದನ್ನು ನೋಡಿ ಆನಂದಿಸುವ ಕ್ರಮ ಇದು ಎಂದು ಟೀಕಿಸಿದರು.

click me!