
ನವದೆಹಲಿ(ಮಾ.25): ಅಧಿಕೃತವಾಗಿ ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ನೆಲಸಿರುವ 271 ಭಾರತೀಯರನ್ನು ಗಡಿಪಾರು ಮಾಡುವುದಾಗಿ ಭಾರತ ಸರ್ಕಾರಕ್ಕೆ ಅಮೆರಿಕಾ ತಿಳಿಸಿದೆ.
ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ಬಗ್ಗೆ ಸಂಸತ್ತಿನ ಮೇಲ್ಮನೆಯಲ್ಲಿ ಮಾಹಿತಿ ತಿಳಿಸಿದ್ದು, ಗಡಿಪಾರು ಮಾಡುವ ಮುನ್ನ ಅವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಅಮೆರಿಕಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 271 ಭಾರತೀಯರನ್ನು ಗಡಿಪಾರು ಮಾಡುವುದಾಗಿ ಅಮೆರಿಕಾ ಸರ್ಕಾರ ತಿಳಿಸಿದ್ದು, ನಾವು ಕೂಡ ಅಲ್ಲಿನ ವಿದೇಶಾಂಗ ಇಲಾಖೆಗೆ ಗಡಿಪಾರು ಆಗುವವರ ಹೆಚ್ಚಿನ ವಿವರ ನೀಡುವಂತೆ ಮನವಿ ಮಾಡಿದ್ದೇವೆ'. ಅಧಿಕೃತ ಮಾಹಿತಿ ಇಲ್ಲದೆ ನಾವು ಅವರನ್ನು ಹೇಗೆ ಅಕ್ರಮವಾಗಿ ನೆಲಸಿದ್ದಾರೆ ಎಂದು ನಂಬುವುದು ಎಂದು ವಿದೇಶಾಂಗ ಇಲಾಖೆಯ ವಕ್ತಾರರಾದ ಗೋಪಾಲ್ ಬಾಗ್ಲಯ್ ತಿಳಿಸಿದ್ದಾರೆ.
ವಾಷಿಂಗ್ಟನ್'ನ ಪೇವ್ ರೀಸರ್ಚ್ ಸೆಂಟರ್ ವರದಿಯ ಪ್ರಕಾರ 2009 ರಿಂದ 2014ರ ವರೆಗೆ ಅಮೆರಿಕಾದಲ್ಲಿ 130,000 ಮಂದಿ ಭಾರತೀಯರು ಅಕ್ರಮವಾಗಿ ನೆಲೆಸಿದ್ದಾರೆ.ಅಲ್ಲದೆ 2015ರಲ್ಲಿ 12,885 ಮಂದಿ ಭಾರತೀಯ ನಾಗರಿಕರು ತಮ್ಮ ವೀಸಾ ಅವಧಿ ಮುಗಿದಿದ್ದರೂ ಅಲ್ಲಿಯೇ ನೆಲಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ದಿನದಿಂದ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ವಲಸಿಗರಿಂದಲೇ ತಮ್ಮ ದೇಶದಲ್ಲಿ ಹಲವು ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂದು ಅವರು ತಿಳಿಸಿ, 7 ಮುಸ್ಲಿಂ ದೇಶ ವಲಸಿಗರನ್ನು ನಿಷೇಧಿಸಿದ್ದರು. ಸ್ಥಳೀಯ ಕೋರ್ಟ್ ಈ ನಿಷೇಧವನ್ನು ರದ್ದುಗೊಳಿಸಿತ್ತು. ಇತ್ತೀಚಿನ ಒಂದು ತಿಂಗಳಲ್ಲಿ ಅಮೆರಿಕಾದ ಇಬ್ಬರು ಭಾರತೀಯರ ಹತ್ಯೆಯಾಗಿದ್ದನ್ನು ಸ್ಮರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.