ಸೆಕ್ಸ್‌ಗಾಗಿ ವಿಮಾನವನ್ನು ಆಟೋ ಪೈಲಟ್ ಮೋಡ್‌ಗಿಟ್ಟ ಪೈಲಟ್!

By Web Desk  |  First Published May 22, 2019, 12:43 PM IST

ವಿಮಾನದಲ್ಲಿ ಉದ್ಯಮಿಯ 'ಚೆಲ್ಲಾಟ'| ವಿಮಾನ ಹಾರಾಟ ಕಲಿಸಿಕೊಡುತ್ತೇನೆಂದು 15ರ ಬಾಲೆಯನ್ನು ಲೈಂಗಿಕವಾಗಿ ಬಳಸಿಕೊಂಡ| ಅಪ್ರಾಪ್ತೆಯೊಂದಿಗೆ ಸೆಕ್ಸ್ ಮಾಡಿದ ಶ್ರೀಮಂತನೀಗ ಜೈಲುಪಾಲು!


ನ್ಯೂಜೆರ್ಸಿ[ಮೇ.22]: 15 ವರ್ಷದ ಬಾಲಕಿಯೊಂದಿಗೆ ಸೆಕ್ಸ್ ನಡೆಸುವ ಸಲುವಾಗಿ ವಿಮಾನವನ್ನು ಆಟೋ ಪೈಲಟ್ ಮೋಡ್‌ಗೆ ಹಾಕಿದ ಕೋಟ್ಯಾಧಿಪತಿ ಉದ್ಯಮಿ ಈಗ ಜೈಲು ಪಾಲಾಗಿದ್ದಾರೆ.

ನ್ಯೂ ಜೆರ್ಸಿಯ 53 ವರ್ಷದ ಕೋಟ್ಯಾಧಿಪತಿ ಸ್ಟೀಫನ್ ಬ್ರಾಡ್ಲಿ ಮೆಲ್ 2018ರ ಡಿಸೆಂಬರ್ ನಲ್ಲಿ ತನ್ನ ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ವಿಮಾನವನ್ನು ಆಟೋ ಪೈಲಟ್ ಮೋಡ್‌ಗೆ ಹಾಕಿ 15 ವರ್ಷದ ಬಾಲಕಿಯೊಂದಿಗೆ ಸೆಕ್ಸ್ ನಡೆಸಿದ್ದ. 2018ರ ಡಿಸೆಂಬರ್ ನಲ್ಲಿ ನಡೆದಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ತೀರ್ಪು ನೀಡಿರುವ ನ್ಯಾಯಾಲಯ ಪ್ಲೇನ್‌ನಲ್ಲಿ ಅಶ್ಲೀಲ ಕೃತ್ಯದಲ್ಲಿ ತೊಡಗಿಸಿಕೊಂಡ ಉದ್ಯಮಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

Tap to resize

Latest Videos

ಮೂರು ಮಕ್ಕಳ ತಂದೆ ಮೆಲ್ ಶ್ರೀಮಂತ ಉದ್ಯಮಿ. ಪ್ರಯಾಣಕ್ಕಾಗಿ ಖಾಸಗಿ ವಿಮಾನ ಇಟ್ಟುಕೊಂಡಿದ್ದ ಈತನ ಬಳಿ ಸಂತ್ರಸ್ತ ಬಾಲಕಿಯ ತಾಯಿ ವಿಮಾನ ಹಾರಾಟ ನಡೆಸುವ ತರಬೇತಿ ನೀಡಲು ಮನವಿ ಮಾಡಿಕೊಂಡಿದ್ದರು. ಬಾಲಕಿಯ ತಾಯಿಯ ಮನವಿಗೆ ಸೈ ಎಂದಿದ್ದ ಉದ್ಯಮಿ ಮಾತ್ರ ಪರಿಸ್ಥಿತಿಯ ಲಾಭ ಪಡೆದು ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.

ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವೇಳೆ ಮೆಲ್ ಪರ ವಕೀಲರು 'ಅವರೊಬ್ಬ ಉತ್ತಮ ಗುಣ ನಡತೆಯುಳ್ಳ ವ್ಯಕ್ತಿ. ಆದರೆ ಆತನಿಗೆ ಖಿನ್ನತೆ ಸಮಸ್ಯೆ ಇದೆ. ಹೀಗಾಗಿ ಹೆಲಿಕಾಪ್ಟರ್ ನಲ್ಲಿ ತನ್ನ ಸ್ಥಾನ ಬಿಟ್ಟು ಕದಲುತ್ತಾನೆ' ಎಂದು ವಾದಿಸಿದ್ದರು. ಈಗಾಗಲೇ ಆಟೋ ಪೈಲಟ್ ಮೋಡ್[ಪೈಲಟ್ ಇಲ್ಲದೇ ವಿಮಾನ ಚಲಾಯಿಸುವುದು. ತುರ್ತು ಸಂದರ್ಭದಲ್ಲಷ್ಟೇ ಈ ವ್ಯವಸ್ಥೆ ಬಳಸಿಕೊಳ್ಳಲಾಗುತ್ತದೆ]ನಲ್ಲಿ ಪ್ಲೇನ್ ಚಲಾಯಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮಾತ್ರ ಉದ್ಯಮಿಗೆ ಶಿಕ್ಷೆ ವಿಧಿಸಲಾಗಿದ್ದು, ಅಪ್ರಾಪ್ತ ಬಾಲಕಿಯೊಂದಿಗೆ ಸೆಕ್ಸ್ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ, ಹಾಗೂ ಶಿಕ್ಷೆ ಪ್ರಮಾಣ ಘೋಷಣೆಯಾಗುವುದು ಬಾಕಿ ಇದೆ.

ತನ್ನದೇ ಚಾರಿಟಿ ಸಂಸ್ಥೆ ಹೊಂದಿದ್ದ ಮೆಲ್, ಏರ್ ಲೈಫ್ ಲೈನ್ ವ್ಯವಸ್ಥೆ ಆರಂಭಿಸಿದ್ದ. ಈ ಮೂಲಕ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದ ಮಕ್ಕಳಿಗೆ ಸಹಾಯ ಮಾಡುತ್ತಿದ್ದ ಎನ್ನಲಾಗಿದೆ.

click me!