2 ಇ-ಕಾಮರ್ಸ್ ಕಂಪನಿಗಳಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ

By Suvarna Web DeskFirst Published Feb 21, 2017, 9:52 AM IST
Highlights

ಬೀರ್ ಬಾಟಲಿ ಮೇಲೆ ಗಣೇಶನ ಚಿತ್ರ ಹಾಗೂ ಓಂ ಚಿಹ್ನೆಯಿರುವ ಶೂ’ಅನ್ನು ಮಾರಾಟಕ್ಕಿಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ ಎಂದು yeswevibe.com ಹಾಗೂ lostcoast.com ಕಂಪನಿಗಳ ವಿರುದ್ಧ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್’ನ ನರೇಶ್ ಕಾಡ್ಯನ್ ದೂರು ನೀಡಿದ್ದಾರೆ.

ಬೀರ್ ಬಾಟಲಿ ಮೇಲೆ ಗಣೇಶ | ಶೂ ಮೇಲೆ ಓಂ; ಚಿಹ್ನೆ !

ನವದೆಹಲಿ (ಫೆ.21):  ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಉತ್ಪನ್ನಗಳನ್ನು ಮಾರಾಟಕ್ಕಿಡುವ ಮೂಲಕ ಅಮೆರಿಕಾ ಮೂಲದ ಎರಡು ಆನ್’ಲೈನ್ ಕಂಪನಿಗಳು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿವೆ.

ಬೀರ್ ಬಾಟಲಿ ಮೇಲೆ ಗಣೇಶನ ಚಿತ್ರ ಹಾಗೂ ಓಂ ಚಿಹ್ನೆಯಿರುವ ಶೂ’ಅನ್ನು ಮಾರಾಟಕ್ಕಿಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ ಎಂದು yeswevibe.com ಹಾಗೂ lostcoast.com ಕಂಪನಿಗಳ ವಿರುದ್ಧ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್’ನ ನರೇಶ್ ಕಾಡ್ಯನ್ ದೂರು ನೀಡಿದ್ದಾರೆ.

ಕಾಡ್ಯನ್ ಈ ಕುರಿತು ವಿದೇಶಾಂಗ ವ್ಯವಹಾರ ಇಲಾಖೆಗೆ ಕೂಡಾ ಪತ್ರ ಬರೆದಿದ್ದು ಆ ಉತ್ಪನ್ನಗಳ ಮಾರಾಟವನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಕೋರಿದ್ದಾರೆ.

ಹಿಂದೂ ದೇವರುಗಳ ಚಿತ್ರವನ್ನು ಮಾರಾಟ್ಟಕ್ಕಿಡುವ ಮೂಲಕ  ಕಳೆದ ವರ್ಷ ಜೂನ್’ನಲ್ಲಿ ಆನ್’ಲೈನ್ ದೈತ್ಯ ಅಮೆಝಾನ್ ವಿವಾದವನ್ನು ಸೃಷ್ಟಿಸಿತ್ತು.

click me!