
ಕ್ಯಾನ್‌ಬೆರಾ(ಜು.28): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆದೇಶಿಸಿದರೆ ಮುಂದಿನ ವಾರವೇ ಚೀನಾ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿ ಪೆಸಿಫಿಕ್ ಸಾಗರದಲ್ಲಿ ನಿಯೋಜನೆಗೊಂಡಿರುವ ಅಮೆರಿಕ ನೌಕಾಪಡೆಯ ಕಮಾಂಡರ್ ಅಡ್ಮಿರಲ್ ಸ್ಕಾಟ್ ಸ್ವಿಫ್ಟ್ ಘೋಷಿಸಿದ್ದಾರೆ.
ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಭದ್ರತಾ ಸಮ್ಮೇಳನದ ಸಂದರ್ಭದಲ್ಲಿ ಸಭಿಕರೊಬ್ಬರು, ಒಂದು ವೇಳೆ ಟ್ರಂಪ್ ಆದೇಶಿಸಿದರೆ ಮುಂದಿನ ವಾರ ಚೀನಾದ ಮೇಲೆ ಅಣ್ವಸ್ತ್ರ ದಾಳಿ ಮಾಡುತ್ತೀರಾ ಎಂದು ಊಹಾತ್ಮಕ ಪ್ರಶ್ನೆ ಕೇಳಿದರು. ಅದಕ್ಕೆ ಹೌದು ಎಂದು ಸ್ವಿಫ್ಟ್ ಉತ್ತರ ನೀಡಿದರು. ಅಲ್ಲದೆ, ಮಿಲಿಟರಿ ಮೇಲೆ ನಾಗರಿಕ ಸರ್ಕಾರದ ನಿಯಂತ್ರಣಕ್ಕೆ ಬೆಂಬಲ ಸೂಚಿಸಿದರು.
ಆಸ್ಟ್ರೇಲಿಯಾ ಕರಾವಳಿಯಲ್ಲಿ ಅಮೆರಿಕ ಹಾಗೂ ಆಸ್ಟ್ರೇಲಿಯಾದ ನೌಕಾಪಡೆಗಳು ಸಮರಾಭ್ಯಾಸ ನಡೆಸುತ್ತಿವೆ. 36ಯುದ್ಧ ನೌಕೆಗಳು, 220 ವಿಮಾನಗಳು, 33 ಸಾವಿರ ಯೋಧರು ಭಾಗವಹಿಸಿದ್ದಾರೆ. ಈ ಕಾರ್ಯಾಚರಣೆ ಮೇಲೆ ನಿಗಾ ಇಡಲು ತನ್ನ ನೌಕೆಯೊಂದನ್ನು ಚೀನಾ ರವಾನಿಸಿದೆ. ಇಂತಹ ಸಂದರ್ಭದಲ್ಲೇ ಸ್ವಿಫ್ಟ್ ಅವರು ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.