ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಅಥ್ಲೀಟ್’ಗಳಿಂದ ಏರ್’ಪೋರ್ಟ್’ನಲ್ಲೇ ಪ್ರತಿಭಟನೆ

By Suvarna Web DeskFirst Published Aug 1, 2017, 1:14 PM IST
Highlights

23ನೇ ಸಮ್ಮರ್ ಡೆಫಲಂಪಿಕ್ಸ್’ ನಲ್ಲಿ ( ಕಿವುಡರಿಗಾಗಿರುವ ಒಲಂಪಿಕ್ಸ್) ದೇಶಕ್ಲೆ 4 ಪದಕಗಳನ್ನು ಗೆದ್ದು ತಂದರೂ, ಯಾರೋಬ್ಬರೂ ಕೇಳಿ ನೋಡುವವರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕ್ರೀಡಾಪಟುಗಳು ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿರುವ ಘಟನೆ ಇಂದು ನಡೆದಿದೆ.

ನವದೆಹಲಿ: 23ನೇ ಸಮ್ಮರ್ ಡೆಫಲಂಪಿಕ್ಸ್’ ನಲ್ಲಿ ( ಕಿವುಡರಿಗಾಗಿರುವ ಒಲಂಪಿಕ್ಸ್) ದೇಶಕ್ಲೆ 4 ಪದಕಗಳನ್ನು ಗೆದ್ದು ತಂದರೂ, ಯಾರೋಬ್ಬರೂ ಕೇಳಿ ನೋಡುವವರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕ್ರೀಡಾಪಟುಗಳು ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿರುವ ಘಟನೆ ಇಂದು ನಡೆದಿದೆ.

ಟರ್ಕಿಯ ಸ್ಯಾಮ್ಸನ್’ನಲ್ಲಿ ನಡೆದ 23ನೇ ಡೆಫಲಂಪಿಕ್ಸ್’ನಲ್ಲಿ ಭಾಗವಹಿಸಿ 46 ಕ್ರೀಡಾಪಟುಗಳು ಇಂದು ಬೆಳಗ್ಗೆ ಇಂದಿರಾ ಗಾಂದಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ದೇಶವನ್ನು ಪ್ರತಿನಿಧಿಸಿ 1 ಚಿನ್ನ ಸೇರಿದಂತೆ 4 ಪದಕಗಳನ್ನು ಇವರು ಪಡೆದಿದ್ದರೂ, ಸರ್ಕಾರದ ವತಿಯಿಂದ  ಯಾರೂ ಅವರನ್ನು ಸ್ವಾಗತಿಸಲು ಬಂದಿಲ್ಲ. ಆದುದರಿಂದ ವಿಮಾನ ನಿಲ್ದಾಣ ಬಿಟ್ಟು ಹೊರಹೋಗಲು ಅವರು ನಿರಾಕರಿಸಿರುವುದಾಗಿ ಏಎನ್ಐ ವರದಿ ಮಾಡಿದೆ.

ಈ ಕುರಿತು ಕ್ರೀಡಾಳುಗಳು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರನ್ನು ಮಾತನಾಡಿದರೂ, ಅವರು ಕೂಡಾ ಮನವಿಗೆ ಕಿವಿಗೊಡಲಿಲ್ಲವೆಂದು ಹೇಳಲಾಗಿದೆ.

ಕ್ರೀಡಾಕೂಟದಲ್ಲಿ 8 ವಿಭಾಗಗಳಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳು, ಕುಸ್ತಿಯಲ್ಲಿ ಚಿನ್ನ ಹಾಗೂ ಕಂಚು,  ಟೆನ್ನಿಸ್’ನಲ್ಲಿ ಕಂಚು ಹಾಗೂ ಗಾಲ್ಫ್’ನಲ್ಲಿ ಬೆಳ್ಳಿಯನ್ನು ಗೆದ್ದಿದ್ದಾರೆ.

ನಾವು ಪದಕಗಳನ್ನು ಗೆದ್ದಿರುವುದು ದೇಶಕ್ಕೆ ಹೆಮ್ಮೆಯ ವಿಷಯ. ಆದರೆ ನಮ್ಮನ್ನು ಸ್ವಾಗತಿಸಲು ಸಚಿವರಾಗಲಿ ಯಾರೇ ಅಧಿಕಾರಿಗಳಾಗಲಿ ಬಂದಿಲ್ಲ, ಎಂದು ಕ್ರೀಡಾಳುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಆ.1 ಕ್ಕೆ ತಾಯ್ನಾಡಿಗೆ ಮರಳುವುದಾಗಿ ಕ್ರೀಡಾ ಸಚಿವರಿಗೆ ಹೇಳಿದ್ದೆವು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಂಪರ್ಕಿಸಲು ಯತ್ನಿಸಿದರೆ, ಅವರು ಲಭ್ಯರಿಲ್ಲ ಎಂದು ಪ್ರತಿಕ್ರಿಯೆ ಸಿಗುತ್ತಿದೆ ಎಂದು ಅವರು ಹೇಳಿದ್ದಾರೆ.

click me!