
ಲಕ್ನೋ (ಜು.03): 45 ಮಂದಿಯ ದಲಿತರ ಗುಂಪೊಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್;ಗೆ 150 ಕೆಜಿಯ ಸೋಪನ್ನು ಉಡುಗೊರೆಯಾಗಿ ನೀಡಲು ಮುಂದಾಗಿರುವ ಮಜವಾದ ಘಟನೆ ನಡೆದಿದೆ. ಅವರನ್ನು ಪೊಲೀಸರು ಬಂಧಿಸಿ ಇಡೀ ರಾತ್ರಿ ಗೆಸ್ಟ್’ಹೌಸ್’ನಲ್ಲಿ ಇಡಲಾಗಿತ್ತು ಎನ್ನಲಾಗಿದೆ.
ಬುದ್ಧನ ಆಕೃತಿಯನ್ನು ಕೆತ್ತಿರುವ ಒಂದು ದೊಡ್ಡ ಸೋಪ್ ಬಾರ್’ನನ್ನು ಯೋಗಿ ಆದಿತ್ಯನಾಥ್’ಗೆ ಉಡುಗೊರೆಯಾಗಿ ನೀಡಲು ದಲಿತರು ಮುಂದಾಗಿದ್ದರು. ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇಲ್ಲಿನ ಖುಷಿ ನಗರ ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ ನಡೆದ ಘಟನೆಗೆ ಪ್ರತಿಯಾಗಿ ಮುಯ್ಯಿಗೆ ಮುಯ್ಯಿ ಎಂದು ತೀರಿಸಲು ಈ ರೀತಿ ಮಾಡಿದ್ದರು. ಯೋಗಿ ಆದಿತ್ಯನಾಥರನ್ನು ಭೇಟಿ ಮಾಡುವ ಮುನ್ನ ನಿಮ್ಮನ್ನು ಸ್ವಚ್ಚಗೊಳಿಸಿಕೊಳ್ಳಿ ಎಂದು ಜಿಲ್ಲಾಡಳಿತವು 100 ದಲಿತ ಕುಟುಂಬಗಳಿಗೆ ಸೋಪುಗಳನ್ನು ನೀಡಿತ್ತು.
ಗುಜರಾತಿನ ದಲಿತ ಕಾರ್ಯಕರ್ತರು ಆದಿತ್ಯನಾಥ್’ಗೆ ಸೋಪನ್ನು ನೀಡಿ ನಿಮ್ಮ ಕಲುಷಿತ ಮೈಂಡ್’ಸೆಟ್ ಅನ್ನು ಸ್ವಚ್ಚಗೊಳಿಸಿಕೊಳ್ಳಿ ಎಂದು ಹೇಳಲು ಪ್ಲಾನ್ ಮಾಡಿದ್ದರು. ಲಕ್ನೋಗೆ ಬರಲು ಸಾಮರಮತಿ ಎಕ್ಸ್’ಪ್ರೆಸ್’ನಲ್ಲಿ ಹೊರಟಿದ್ದಾಗ ಅಧಿಕಾರಿಗಳು ಅವರನ್ನು ತಡೆದು ರೈಲಿನಿಂದ ಕೆಳಗಿಳಿಯಲು ಒತ್ತಾಯಿಸಿ ಗೆಸ್ಟ್’ಹೌಸ್’ಗೆ ಕರೆದುಕೊಂಡು ಹೋಗಿದ್ದಾರೆ.
ಬಂಧಿತರಲ್ಲಿ ಮಾಜಿ ಐಪಿಎಸ್ ಅಧಿಕಾರಿ ಎಸ್.ಆರ್ ಧಾರಾಪುರಿ, ಲಕ್ನೋ ಯುನಿವರ್ಸಿಟಿ ನಿವೃತ್ತ ಪ್ರೊ. ರಾಮ್’ಕುಮಾರ್, ರಮೇಶ್ ದೀಕ್ಷಿತ್ ಮತ್ತಿತರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.