ಪೆಟ್ರೋಲ್ ಬಂಕ್'ನಲ್ಲಿ ರಿಮೋಟ್ ಕಂಟ್ರೋಲ್ಡ್ ಚಿಪ್ ಹಾಕಿ ವಂಚನೆ

Published : May 01, 2017, 08:03 AM ISTUpdated : Apr 11, 2018, 12:58 PM IST
ಪೆಟ್ರೋಲ್ ಬಂಕ್'ನಲ್ಲಿ ರಿಮೋಟ್ ಕಂಟ್ರೋಲ್ಡ್ ಚಿಪ್ ಹಾಕಿ ವಂಚನೆ

ಸಾರಾಂಶ

ಈ ಚಿಪ್‌ ಬೆಲೆ 3000 ರೂ. ಆಗಿದೆ. ರಿಮೋಟ್ ಕಂಟ್ರೋಲ್‌'ಗೆ ಲಿಂಕ್ ಇರುವ ವೈರ್‌'ಗೆ ಈ ಚಿಪ್ ಅಟ್ಯಾಚ್ ಆಗಿರುತ್ತದೆ. ಈ ಮೂಲಕ ಗ್ರಾಹಕರಿಗೆ ಪೆಟ್ರೋಲ್ ಹಾಕುವಾಗ ಮೋಸ ಮಾಡುತ್ತಾರೆ ಎನ್ನಲಾಗ್ತಿದೆ.

ನವದೆಹಲಿ(ಮೇ 01): ಪೆಟ್ರೋಲ್ ಬಂಕ್‌'ಗಳಲ್ಲಿ ಪೆಟ್ರೋಲ್ ಹಾಕುವ ಮಶೀನ್‌'ನಲ್ಲಿ ರಿಮೋಟ್ ಕಟ್ರೋಲ್ಡ್ ಎಲೆಕ್ಟ್ರಾನಿಕ್ಸ್ ಚಿಪ್‌ ಬಳಸಿ ಜನರಿಗೆ ಮೋಸ ಮಾಡಲಾಗುತ್ತಿರುವ ಪ್ರಕರಣ ಉತ್ತರಪ್ರದೇಶದಲ್ಲಿ ಬಯಲಿಗೆ ಬಂದಿದೆ. ಜನರ ಕಣ್ಮುಂದೆಯೇ ಅವರಿಗೆ ಗೊತ್ತಾಗದಂತೆ ಪಂಪ್‌'ನವರು ಪೆಟ್ರೋಲ್ ಕದಿಯುತ್ತಿದ್ದಾರೆ.

ಉತ್ತರ ಪ್ರದೇಶದ 7 ಪೆಟ್ರೋಲ್ ಪಂಪ್‌'ಗಳ ಮೇಲೆ ಎಸ್‌'ಟಿಎಫ್ ಪಡೆ ಕಾರ್ಯಾಚರಣೆ ನಡೆಸಿದಾಗ ಪೆಟ್ರೋಲ್ ಹಾಕುವ ಮಶೀನ್‌'ನಲ್ಲಿ ಚಿಪ್ ಬಳಸಿದ್ದು ಕಂಡು ಬಂದಿದೆ. ಸವಾರರು 1 ಲೀಟರ್ ಪೆಟ್ರೋಲ್ ಕೇಳಿದ್ರೆ ಈ ಚಿಪ್‌ ಸಹಾಯದಿಂದ ವಾಹನಕ್ಕೆ 940ರಿಂದ 950 ಎಂಎಲ್ ಮಾತ್ರ ಬೀಳುತ್ತದೆ. ಇದರಿಂದ 50ರಿಂದ 60 ಮಿ.ಲೀಟರ್ ಪೆಟ್ರೋಲ್ ಪಂಪ್‌'ನವರಲ್ಲೇ ಉಳಿಯುತ್ತದೆ.

ಇನ್ನು, ಈ ಚಿಪ್‌ ಬೆಲೆ 3000 ರೂ. ಆಗಿದೆ. ರಿಮೋಟ್ ಕಂಟ್ರೋಲ್‌'ಗೆ ಲಿಂಕ್ ಇರುವ ವೈರ್‌'ಗೆ ಈ ಚಿಪ್ ಅಟ್ಯಾಚ್ ಆಗಿರುತ್ತದೆ. ಈ ಮೂಲಕ ಗ್ರಾಹಕರಿಗೆ ಪೆಟ್ರೋಲ್ ಹಾಕುವಾಗ ಮೋಸ ಮಾಡುತ್ತಾರೆ ಎನ್ನಲಾಗ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನ್ನನ್ನು ಯಾರೂ ಅಲುಗಾಡಿಸಲು ಆಗೋದಿಲ್ಲ : ಸಿಎಂ ಖಡಕ್‌ ನುಡಿ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!