ಸ್ವಚ್ಛ ಭಾರತ ಅಭಿಯಾನ ಪ್ರಚಾರದ ತಂತ್ರ ಎಂದ ಬಿಜೆಪಿ ಸಂಸದೆ

By Web DeskFirst Published Oct 3, 2018, 9:41 PM IST
Highlights

ಸಮಾಜದಲ್ಲಿ ಶೋಷಣೆಗೆ ಒಳಗಾಗಿರುವ  ಬಡ ದಲಿತ ಹಾಗೂ ಮುಸ್ಲಿಂ ಸಮುದಾಯದವರಿಗೆ ಉದ್ಯೋಗ, ಭದ್ರತೆ ಹಾಗೂ ಸಾಮಾಜಿಕ ಗೌರವ ಅಗತ್ಯವಿದೆ. ಇವರಿಗೆ ಕೆಳ ಹುದ್ದೆಗಳು ಮಾತ್ರವಲ್ಲ ಪ್ರತಿಯೊಂದು ಸ್ಥಾನಮಾನದಲ್ಲೂ ಸಮಾನ ಅವಕಾಶ ಕಲ್ಪಿಸಬೇಕಿದೆ - ಉತ್ತರ ಪ್ರದೇಶ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫುಲೆ  

ಲಖನೌ[ಅ.03]: ಗಾಂಧಿ ಜಯಂತಿಯಂದು ಸರ್ಕಾರ ಹಮ್ಮಿಕೊಳ್ಳುವ  ಸ್ವಚ್ಛತಾ ಅಭಿಯಾನ ಕೇವಲ ಪ್ರಚಾರದ ತಂತ್ರ ಎಂದು ಉತ್ತರ ಪ್ರದೇಶದ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫುಲೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಾನು ಬೇರೆ ರಾಜಕಾರಣಿಗಳ ತರ ಕೈನಲ್ಲಿ ಪೊರಕೆ ಹಿಡಿದು ಮಾಧ್ಯಮಗಳಿಗೆ ಪೋಸು ನೀಡುವುದಿಲ್ಲ ಎಂದು ಗಾಂಧಿ ಜಯಂತಿಯಂದು ಹಮ್ಮಿಕೊಂಡಿದ್ದ  ಕಾರ್ಯಕ್ರಮದಲ್ಲಿ ಪೊರಕೆ ಹಿಡಿಯಲು ನಿರಾಕರಿಸಿದರು. ಹಾಗೆಯೇ ನಾನೊಬ್ಬಳು ಈ ಸ್ಥಳದಲ್ಲಿ ಪೊರಕೆ ಹಿಡಿದು  ಕಸ ಗುಡಿಸಿದರೆ ಸಂಪೂರ್ಣ ಸ್ವಚ್ಛವಾಗಿಬಿಡುವುದೆ ಎಂದು ಜೊತೆಯಲ್ಲಿದ್ದವರನ್ನು ಪ್ರಶ್ನಿಸಿದರು.  

ಸಮಾಜದಲ್ಲಿ ಶೋಷಣೆಗೆ ಒಳಗಾಗಿರುವ  ಬಡ ದಲಿತ ಹಾಗೂ ಮುಸ್ಲಿಂ ಸಮುದಾಯದವರಿಗೆ ಉದ್ಯೋಗ, ಭದ್ರತೆ ಹಾಗೂ ಸಾಮಾಜಿಕ ಗೌರವ ಅಗತ್ಯವಿದೆ.
ಇವರಿಗೆ ಕೆಳ ಹುದ್ದೆಗಳು ಮಾತ್ರವಲ್ಲ ಪ್ರತಿಯೊಂದು ಸ್ಥಾನಮಾನದಲ್ಲೂ ಸಮಾನ ಅವಕಾಶ ಕಲ್ಪಿಸಬೇಕಿದೆ ಎಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಇಡೀ ಜಿಲ್ಲೆಯನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದರು. 

click me!