ಕರ್ನಾಟಕ ಸರ್ಕಾರದ ವಿರುದ್ಧ ಜೇಟ್ಲಿ ಗರಂ

By Web DeskFirst Published Nov 28, 2018, 7:21 AM IST
Highlights

ಕರ್ನಾಟಕ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಇದೀಗ ವಿತ್ತ ಸಚಿವ ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದ್ದಾರೆ. 

ಜೈಪುರ: ರೈತರ ಸಾಲ ಮನ್ನಾ ವಿಷಯದಲ್ಲಿ ಕರ್ನಾಟಕ ಸರ್ಕಾರ ರೈತರನ್ನು ವಂಚಿಸಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆ ಬೆನ್ನಲ್ಲೇ , ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕೂಡಾ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಇದೇ ರೀತಿಯ ವಾಗ್ದಾಳಿ ನಡೆಸಿದ್ದಾರೆ.

ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ರೈತರ ಸಾಲಮನ್ನಾ ಮಾಡುವು ದಾಗಿ ಘೋಷಿಸಿದ ರಾಹುಲ್ ಗಾಂಧಿ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ವಿತ್ತ ಸಚಿವ ಜೇಟ್ಲಿ ಅವರು, ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಕಾಂಗ್ರೆಸ್‌ಗೆ ಗೊತ್ತು. 

ಇದೇ ಕಾರಣಕ್ಕೆ ಇಂಥ ಘೋಷಣೆ ಮಾಡುತ್ತಿದ್ದಾರೆ ಎಂದು ರಾಹುಲ್ ಬಗ್ಗೆ ವ್ಯಂಗ್ಯವಾಡಿದರು. ‘ಕರ್ನಾಟಕ ಮತ್ತು ಪಂಜಾಬ್ ವಿಧಾನಸಭೆ ಚುನಾವಣೆಗಳಲ್ಲಿ ಯೂ ಕಾಂಗ್ರೆಸ್ ಇದೇ ರೀತಿ ಭರವಸೆ ನೀಡಿತ್ತು. ಆದರೆ, ಪಂಜಾಬ್‌ನಲ್ಲಿ ರೈತರ ಸಾಲಮನ್ನಾ ಸಾಧ್ಯವಾಗಿಲ್ಲ, ಕರ್ನಾಟಕದಲ್ಲಿ ಸಾಲ ಮನ್ನಾದ ಔಪಚಾರಿಕತೆ ಪೂರೈಸಲಾ ಗಿದೆ’ ಎಂದು ವ್ಯಂಗ್ಯವಾಡಿದರು. 

ಕರ್ನಾಟಕ ಸರ್ಕಾರ, ಸಹಕಾರಿ ಸಂಘಗಳಲ್ಲಿ ರೈತರು ಪಡೆದಿದ್ದ 2 ಲಕ್ಷ ರು.ವರೆಗಿನ ಸಾಲ ಮನ್ನಾ ಮಾಡಿದ್ದನ್ನು ಅವರು ಈ ರೀತಿ ಪರೋಕ್ಷವಾಗಿ ಪ್ರಸ್ತಾಪಿಸಿದರು. ಇದೇ ವೇಳೆ ವಿಷಯದ ಬಗ್ಗೆ ಯಾವುದೇ ಅರಿವಿಲ್ಲದವರು, ಇಂಥ ಕೀಳು ಜನಪ್ರಿಯತೆ ತಂತ್ರಕ್ಕೆ ಮುಂದಾಗುತ್ತಾರೆ. ದೇಶ  ಮುನ್ನಡೆಸಲು ದೂರದೃಷ್ಟಿ ಇರಬೇಕೇ ಹೊರತು ಘೋಷಣೆ ಅಲ್ಲ. 

ಸಣ್ಣ ಪ್ರಮಾಣದ ಸಾಲ ಮನ್ನಾ ಕೂಡಾ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಉಂಟು ಮಾಡಿದೆ ಎಂದು ಪರೋಕ್ಷವಾಗಿ ವಿವಿಧ ಯೋಜನೆಗಳಿಗೆ ಹಣದ ಕೊರತೆ ಎದುರಿಸುತ್ತಿದೆ ಟೀಕೆಗೆ ಗುರಿಯಾಗಿರುವ ಕರ್ನಾಟಕ ಸರ್ಕಾರದ ವಿರುದ್ಧ ಕೇಳಿಬಂದಿರುವ ಆಪಾದನೆಯನ್ನೂ ಪರೋಕ್ಷವಾಗಿ ಪ್ರಸ್ತಾಪಿಸಿದರು.

click me!