ಕಾಲಹರಣ ಸಮೀಕ್ಷೆ: ನಿಮ್ಮಿಂದ ಮೋದಿ ಸರ್ಕಾರಕ್ಕೇನು ನಿರೀಕ್ಷೆ?

Published : Jul 14, 2019, 03:51 PM IST
ಕಾಲಹರಣ ಸಮೀಕ್ಷೆ: ನಿಮ್ಮಿಂದ ಮೋದಿ ಸರ್ಕಾರಕ್ಕೇನು ನಿರೀಕ್ಷೆ?

ಸಾರಾಂಶ

ಮೋದಿ ಸರ್ಕಾರದಿಂದ ದೇಶಾದ್ಯಂತ ಕಾಲಹರಣ ಸಮೀಕ್ಷೆ| ಸಮಯ ಬಳಕೆ ಸಮೀಕ್ಷೆ ನಡೆಸಲು ಮುಂದಾದ ರಾಷ್ಟ್ರೀಯ ಸ್ಯಾಂಪಲ್ ಸರ್ವೇ ಕಚೇರಿ| ಪಾವತಿ ಮತ್ತು ಪಾವತಿ ರಹಿತ ಚಟುವಟಿಕೆಯಡಿ ಸಮೀಕ್ಷೆ ನಡೆಸಲು ನಿರ್ಧಾರ| 

ನವದೆಹಲಿ(ಜು.14): ಹಲವು ಪ್ರಥಮಗಳನ್ನು ಸ್ಥಾಪಿಸುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ್ದು ಎತ್ತಿದ ಕೈ. ನೂತನ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸುಭದ್ರ ಸಮಾಜ ನಿರ್ಮಾಣಕ್ಕೆ ಮೋದಿ ಸರ್ಕಾರ ಸದಾ ಸಿದ್ಧ.

ಅದರಂತೆ ದೇಶದಲ್ಲಿ ಇದೇ ಮೊದಲ ಬಾರಿಗೆ ನಾಗರಿಕರು ಹೇಗೆ ಕಾಲಹರಣ ಮಾಡುತ್ತಾರೆ ಎಂಬುದನ್ನು ತಿಳಿಯುವ ಸಮಯ ಬಳಕೆ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಸಮಯ ಬಳಕೆ ಸಮೀಕ್ಷೆಗೆ ಮುಂದಾಗಿರುವ ರಾಷ್ಟ್ರೀಯ ಸ್ಯಾಂಪಲ್ ಸರ್ವೇ ಕಚೇರಿ, 2019ರ ಜನವರಿಯಿಂದಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮುಖ್ಯ ಸಾಂಖ್ಯಿಕ ಅಧಿಕಾರಿ ಪ್ರವೀಣ್ ಶ್ರೀವಾತ್ಸವ್, ಮುಂದಿನ ಡಿಸೆಂಬರ್ ವರೆಗೂ ಒಟ್ಟು ನಾಲ್ಕು ಹಂತಗಳಲ್ಲಿ ಸಮೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸ್ವಯಂಸೇವಾ ಕಾರ್ಯಗಳು, ಮನೆಗೆಲಸ ಮತ್ತು ಮನೆಗೆಲಸದ ಸೇವೆಗಳಂತಹ ವೇತನ ರಹಿತ ಕೆಲಸಗಳಲ್ಲಿ ಜನತೆ ಎಷ್ಟು ಸಮಯ ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಯುವ ಮೊದಲ ಸಮೀಕ್ಷೆ ಇದಾಗಲಿದೆ. 

ಸಾಂಖ್ಯಿಕ ಸಚಿವಾಲಯ ಸಚಿವಾಲಯ ಕೈಗೊಂಡಿರುವ ಸಮೀಕ್ಷೆಯನ್ನು ಎರಡು ವಿಭಾಗಗಳಲ್ಲಿ- ಪಾವತಿ ಮತ್ತು ಪಾವತಿ ರಹಿತ ಚಟುವಟಿಕೆ- ಎಂಬ ವರ್ಗೀಕರಣದ ಅಡಿಯಲ್ಲಿ ನಡೆಸಲಾಗುತ್ತಿದೆ. 

ದೇಶಾದ್ಯಂತ ಕಾಲಹರಣದ ಸಮೀಕ್ಷೆ ನಡೆಯುತ್ತಿರುವುದು ಇದೇ ಮೊದಲು. ಜನತೆ ಹೇಗೆ ಸಮಯ ಕಳೆಯುತ್ತಾರೆ ಎಂಬುದನ್ನು ಈ ಸಮೀಕ್ಷೆ ವಿಶ್ಲೇಷಣೆ ನಡೆಸಲಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೆಲುವಿನ ವಿಶ್ವಾಸದಲ್ಲಿ ಬೆಟ್ , ಚುನಾವಣೆ ಫಲಿತಾಂಶ ಉಲ್ಟಾ ಬೆನ್ನಲ್ಲೇ ಮೀಸೆ ಬೋಳಿಸಿದ ಮುಖಂಡ
ಚಿಕ್ಕಮಗಳೂರು: ಹೈಟೆಕ್ ಕಾರ್‌ನಲ್ಲಿ ಗೋ ಕಳ್ಳತನ; ಸಿನಿಮೀಯ ಶೈಲಿಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಚೇಸಿಂಗ್!