
ಕೊಲಂಬೋ[ಡಿ.19]: ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮಹಿಂದಾ ರಾಜಪಕ್ಸೆ ಅವರು ಇದೀಗ ಸಂಸತ್ತಿನ ವಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ. 2015ರಿಂದಲೂ ವಿಪಕ್ಷ ನಾಯಕನಾಗಿದ್ದ ತಮಿಳ್ ಪಕ್ಷದ ಹಿರಿಯ ನಾಯಕ ಆರ್.ಸಂಪತನ್(73) ಅವರನ್ನು ಹಿಂದೆ ಸರಿಸಿ ರಾಜಪಕ್ಸೆ ಅವರು ಮುಖ್ಯ ವಿಪಕ್ಷ ನಾಯಕರಾಗಿದ್ದಾರೆ.
ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಂದ ಪದಚ್ಯುತಗೊಂಡು 51 ದಿನಗಳ ರಾಜಕೀಯ ಬಿಕ್ಕಟ್ಟಿನ ಬಳಿಕ ರನಿಲ್ ವಿಕ್ರಂ ಸಿಂಘೆ ಅವರು ಮತ್ತೆ ಪ್ರಧಾನಿಯಾಗಿ ಮರು ನೇಮಕವಾದ ಬೆನ್ನಲ್ಲೇ, ಸ್ಪೀಕರ್ ಕರು ಜಯಸೂರ್ಯ ಅವರು ರಾಜಪಕ್ಸೆ ಅವರನ್ನು ವಿಪಕ್ಷ ನಾಯಕನನ್ನಾಗಿ ಘೋಷಿಸಿದ್ದಾರೆ.
ಆದರೆ, ವಿಪಕ್ಷ ನಾಯಕನಾಗಿ ರಾಜಪಕ್ಸೆ ಆಯ್ಕೆಯನ್ನು ತಮಿಳ್ ನ್ಯಾಷನಲ್ ಅಲಯನ್ಸ್(ಟಿಎನ್‌ಎ), ಶ್ರೀಲಂಕಾ ಮುಸ್ಲಿಂ ಕಾಂಗ್ರೆಸ್ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ. ಅಲ್ಲದೆ, ಇತ್ತೀಚೆಗೆ ಪಕ್ಷಾಂತರ ಮಾಡಿ ರಾಜಪಕ್ಸೆ ಅವರ ಸದಸ್ಯತ್ವವನ್ನೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ