ಕಾಶ್ಮೀರ ‘ಸಮಸ್ಯೆ’ ಕುರಿತು ಟರ್ಕಿ ಸಲಹೆ ಇದು!

By Web DeskFirst Published Sep 14, 2018, 7:11 PM IST
Highlights

ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆ ಶಾಂತಿಯುತವಾಗಿ ಬಗೆಹರಿಸಲಿ! ಟರ್ಕಿ ವಿದೇಶಾಂಗ ಸಚಿವ ಮೆವ್‌ಲುತ್‌ ಕಾವುಸೋಗ್‌ಲು ಆಗ್ರಹ! ಪಾಕಿಸ್ತಾನದ ಪ್ರವಾಸದಲ್ಲಿರುವ ಟರ್ಕಿ ವಿದೇಶಾಂಗ ಸಚಿವ! ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಪಾಕಿಸ್ತಾನದ ಪ್ರಯತ್ನಗಳಿಗೆ ಟರ್ಕಿ ಬೆಂಬಲ

ಇಸ್ಲಾಮಾಬಾದ್(ಸೆ.14): ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆ ಶಾಂತಿಯುತ ರೀತಿಯಲ್ಲಿ ಇತ್ಯರ್ಥ ಪಡಿಸಬೇಕು  ಮತ್ತು ಈ ನಿಟ್ಟಿನಲ್ಲಿ ಪಾಕಿಸ್ತಾನದ ಪ್ರಯತ್ನಗಳನ್ನು ಟರ್ಕಿ ಬೆಂಬಲಿಸುತ್ತದೆ ಎಂದು ಟರ್ಕಿ ವಿದೇಶ ಸಚಿವ ಮೆವ್‌ಲುತ್‌ ಕಾವುಸೋಗ್‌ಲು ಹೇಳಿದ್ದಾರೆ. 

ಟರ್ಕಿ ವಿದೇಶ ಸಚಿವ ಮೆವ್‌ಲುತ್‌ ಪಾಕ್‌ ವಿದೇಶ ಸಚಿವ ಶಾ ಮೆಹಮೂದ್‌ ಖುರೇಶಿ ಜೊತೆಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ವೇಳೆ ಟರ್ಕಿಯ ನಿಲುವು ಮತ್ತು ಭರವಸೆಯನ್ನು ಮೆವ್‌ಲುತ್‌ ಪುನರುಚ್ಚರಿಸಿದರು. 

ಈ ಮಾತುಕತೆಯ ವೇಳೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಆರ್ಥಿಕ ಬಾಂಧವ್ಯ ಮತ್ತು ವ್ಯೂಹಾತ್ಮಕ ಸಹಕಾರವನ್ನು ಹೆಚ್ಚಿಸಲು ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿದೆ.  

ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಟರ್ಕಿ ವಿದೇಶ ಸಚಿವ ಕಾವುಸೋಗ್‌ಲು ಮತ್ತು ಪಾಕ್‌ ವಿದೇಶ ಸಚಿವ ಖುರೇಶಿ, ಕಾಶ್ಮೀರ ಪ್ರಶ್ನೆಯನ್ನು ಶಾಂತಿಯುತವಾಗಿ ಬಗೆಹರಿಸಲು ವಿಶ್ವಸಂಸ್ಥೆ ಪ್ರಯತ್ನಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

click me!