
ಜಿನೇವಾ: ಗೌರಿ ಲಂಕೇಶ್ ಹತ್ಯೆಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿ ಅಧ್ಯಕ್ಷ ಝಯೇದ್ ರಾದ್ ಅಲ್ ಹುಸೇನ್ ಸೋಮವಾರ ಖಂಡಿಸಿದ್ದಾರೆ.
‘ಗೌರಿ ಲಂಕೇಶ್ ಅವರು ಭಾರತದಲ್ಲಿ ನಡೆಯುತ್ತಿದ್ದ ಜನಾಂಗೀಯ ದ್ವೇಷ ಹಾಗೂ ಮತೀಯವಾದದ ವಿರುದ್ಧ ಹೋರಾಡುತ್ತಿದ್ದರು. ಅಂಥವರ ಹತ್ಯೆ ಖಂಡನಾರ್ಹ. ಮೂಲಭೂತ ಮಾನವ ಹಕ್ಕುಗಳ ಪರ ಮಾತನಾಡುವವರನ್ನು ಬೆದರಿಸಲಾಗುತ್ತಿದೆ’ ಎಂದಿದ್ದಾರೆ.
ಅಲ್ಲದೆ, ಗೌರಿ ಹತ್ಯೆಯ ಹಿನ್ನೆಲೆಯಲ್ಲಿ ವಿವಿಧ ನಗರಗಳಲ್ಲಿ ನಡೆದ ಪ್ರತಿಭಟನೆಗಳನ್ನು ಉಲ್ಲೇಖಿಸಿರುವ ಅವರು, ‘ದೇಶದ 12 ನಗರಗಳಲ್ಲಿ ನಡೆದ ವಾಕ್ ಸ್ವಾತಂತ್ರ್ಯ ಪರ ಪ್ರತಿಭಟನೆಗಳನ್ನು ಕಂಡು ನನಗೆ ನೋವಾಗುತ್ತಿದೆ’ ಎಂದೂ ಹೇಳಿದ್ದಾರೆ. ತಥಾಕಥಿತ ಗೋರಕ್ಷಕರಿಂದ ನಡೆಯುವ ಹಲ್ಲೆಗಳನ್ನೂ ಹುಸೇನ್ ಖಂಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.