ಮೋದಿ ಪಕ್ಷಕ್ಕೆ ಮತ್ತೊಂದು ಶಾಕ್: ಎಲೆಕ್ಷನ್ ನಿಲ್ಲಲ್ಲ ಎಂದ ಮತ್ತೋರ್ವ ನಾಯಕಿ!

By Web DeskFirst Published Dec 4, 2018, 8:25 PM IST
Highlights

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಘೋಷಿಸಿದ್ದಾರೆ. ಈ ಕುರಿತು ಮಾತನಾಡಿರುವ ಉಮಾ ಭಾರತಿ ಅಯೋಧ್ಯೆ ರಾಮಮಂದಿರ ಹಾಗೂ ಗಾಂಗಾ ಶುದ್ದೀಕರಣ ಯೋಜನೆಯಲ್ಲಿ ತಾವು ತೊಡಗಿಕೊಳ್ಳಲು ಬಯಸಿರುವುದಾಗಿ ಉಮಾ ಭಾರತಿ ತಿಳಿಸಿದ್ದಾರೆ.

ನವದೆಹಲಿ(ಡಿ.04): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಘೋಷಿಸಿದ್ದಾರೆ. 

ಈ ಕುರಿತು ಮಾತನಾಡಿರುವ ಉಮಾ ಭಾರತಿ ಅಯೋಧ್ಯೆ ರಾಮಮಂದಿರ ಹಾಗೂ ಗಾಂಗಾ ಶುದ್ದೀಕರಣ ಯೋಜನೆಯಲ್ಲಿ ತಾವು ತೊಡಗಿಕೊಳ್ಳಲು ಬಯಸಿರುವುದಾಗಿ ಉಮಾ ಭಾರತಿ ತಿಳಿಸಿದ್ದಾರೆ.

ತಾವು ಈಗಾಗಲೇ ಬಿಜೆಪಿಯಿಂದ ಅನುಮತಿ ಪಡೆದುಕೊಂಡಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಹಾಗೂ ಗಂಗಾ ಶುದ್ದೀಕರಣದ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗುವುದಾಗಿ ಉಮಾ ಭಾರತಿ ಸ್ಪಷ್ಟಪಡಿಸಿದ್ದಾರೆ.

Union Minister Uma Bharti: When I had a talk with Amit ji (BJP President Amit Shah) in 2016, then also he said I should not resign. So, party will take the decision on this. But I will only work for Ganga ji & Ram for 1.5 years. pic.twitter.com/tS3m01yWt9

— ANI (@ANI)

ಉಮಾ ಭಾರತಿ ಅವರ ಈ ನಿರ್ಧಾರದಿಂದ ಕಮಲ ಪಾಳಯದ ಇಬ್ಬರು ಪ್ರಭಾವಿ ಮಹಿಳಾ ನಾಯಕಿಯರು ಚುನಾವಣಾ ಕಣದಿಂದ ಹಿಂದೆ ಸರಿದಂತಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಈ ಹಿಂದೆಯೇ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಘೋಷಿಸಿದ್ದಾರೆ.

click me!