ಆಧಾರ್ ದೃಢೀಕರಣಕ್ಕೆ ಪ್ರಾಧಿಕಾರದಿಂದ ಹೊಸ ತಂತ್ರ

By Suvarna Web DeskFirst Published Jan 15, 2018, 10:14 PM IST
Highlights

ಆಧಾರ್ ದೃಢೀಕರಣ ಮಾಡುವಾಗ ಬಯೋಮೆಟ್ರಿಕ್ ಸಮಸ್ಯೆ ಎದುರಿಸುವವರಿಗೆ ಮುಖ ಚಹರೆಯ ದೃಢೀಕರಣ ತಂತ್ರಜ್ಞಾನವನ್ನು ಬಳಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ನಿರ್ಧರಿಸಿದೆ.

ನವದೆಹಲಿ: ಆಧಾರ್ ದೃಢೀಕರಣ ಮಾಡುವಾಗ ಬಯೋಮೆಟ್ರಿಕ್ ಸಮಸ್ಯೆ ಎದುರಿಸುವವರಿಗೆ ಮುಖ ಚಹರೆಯ ದೃಢೀಕರಣ ತಂತ್ರಜ್ಞಾನವನ್ನು ಬಳಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ನಿರ್ಧರಿಸಿದೆ.

ಬೆರಳಚ್ಚು, ಕಣ್ಪೊರೆ ಮೂಲಕ ಯಾರಿಗೆ ಆಧಾರ್ ದೃಢೀಕರಣ ಸಾಧ್ಯವಾಗುವುದಿಲ್ಲವೋ ಅಂಥವರಿಗೆ ಆಧಾರ್ ಪ್ರಾಧಿಕಾರವು ಹೊಸ ಸೌಲಭ್ಯವನ್ನು ಜುಲೈ 1ರಿಂದ ಪರಿಚಯಿಸಲಿದೆ.

ಆದರೆ ಈ ಸೌಲಭ್ಯ ಪಡೆಯಲು ಅರ್ಜಿದಾರರು, ಬೆರಳಚ್ಚು, ಓಟಿಪಿ ಅಥವಾ ಕಣ್ಪೊರೆಯ ಪೈಕಿ ಯಾವುದಾದರೂ ಒಂದು ದೃಢಿಕರಣವನ್ನು ಕಡ್ಡಾಯವಾಗಿ ನೀಡಲೇಬೇಕು.  

ಕಾಯಿಲೆ, ಕಠಿಣ ಪರಿಶ್ರಮ ಮುಂತಾದ ಬೇರೆ ಬೇರೆ ಕಾರಣಗಳಿಂದ ಕೆಲವರ ಬೆರಳಚ್ಚು ದಾಖಲಾಗುವುದಿಲ್ಲ. ಅಂಥವರಿಗೆ ಈ ಸೌಲಭ್ಯವು ಆಧಾರ್ ಪಡೆಯಲು ಅನುಕೂಲ ಮಾಡಿಕೊಡುತ್ತದೆ ಎಂದು ಪ್ರಾಧಿಕಾರ ಹೇಳಿದೆ.

ಆದರೆ ಇದನ್ನು ಅವಶ್ಯವಿದ್ದಾಗ ಮಾತ್ರ ಬಳಸಲಾಗುವುದೆಂದು ಹೇಳಲಾಗಿದೆ.

click me!