ಸೆ.29ರಂದು ಸರ್ಜಿಕಲ್‌ ದಾಳಿ ದಿನವನ್ನಾಗಿ ಆಚರಿಸಲು ಸೂಚನೆ

By Web DeskFirst Published Sep 21, 2018, 9:26 AM IST
Highlights

2016ರ ಸೆಪ್ಟಂಬರ್, 29. ಭಾರತೀಯರು ಎದೆಯುಬ್ಬಿಸಿ ಸಂತಸಪಡುವ ದಿನ. ಪಾಕಿಸ್ತಾನದೊಳಗೆ ನುಗ್ಗಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಮಹತ್ವದ ಘಳಿಗೆ. ಈ ದಿನವನ್ನು ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆಗಳು ನಡೆದಿವೆ.
 

ನವದೆಹಲಿ, [ಸೆ.21]: 2016ರ ಸೆಪ್ಟಂಬರ್, 29. ಭಾರತೀಯರು ಎದೆಯುಬ್ಬಿಸಿ ಸಂತಸಪಡುವ ದಿನ. ಪಾಕಿಸ್ತಾನದೊಳಗೆ ನುಗ್ಗಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಮಹತ್ವದ ಘಳಿಗೆ. 

2016 ಸೆಪ್ಟೆಂಬರ್ 29ರಂದು ಭಾರತೀಯ ಸೇನೆ, ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದೊಳಗೆ ನುಗ್ಗಿ ಭಯೋತ್ಪಾದಕರನ್ನು ಹತ್ಯೆಗೈದು ಪರಾಕ್ರಮ ಮೆರೆದಿದ್ದ ಸೈನಿಕರ ಶೌರ್ಯ-ಸಾಹಸವನ್ನು ಶಾಶ್ವತವಾಗಿರಸಲು ಸೆ.29ರಂದು ಸರ್ಜಿಕಲ್ ಸ್ಟ್ರೈಕ್ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ.

ಮುಂಬರುವ ಸೆ.29ರ ದಿನವನ್ನು ಸರ್ಜಿಕಲ್‌ ದಾಳಿಯ ದಿನವನ್ನಾಗಿ ಆಚರಿಸುವಂತೆ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸೂಚಿಸಿದೆ.

 ಎಲ್ಲ ವಿವಿಗಳ ಎನ್‌ಸಿಸಿ ಘಟಕಗಳು ಸೆ.29ರಂದು ವಿಶೇಷ ಪರೇಡ್‌ ಆಯೋಜಿಸಬೇಕು. ಅಂದು ಎನ್‌ಸಿಸಿ ಕಮಾಂಡರ್‌, ದೇಶದ ಗಡಿಗಳ ರಕ್ಷಣೆ ವಿಧಾನಗಳ ಬಗ್ಗೆ ತಿಳಿಸಿಕೊಡಬೇಕು. ಇಂಥ ಕಾರ್ಯಕ್ರಮಗಳಿಗೆ ನಿವೃತ್ತ ಯೋಧರ ಕರೆಸಿಕೊಂಡು, ದೇಶಕ್ಕಾಗಿ ಸೇನೆಯ ತ್ಯಾಗ-ಬಲಿದಾನವನ್ನು ವಿದ್ಯಾರ್ಥಿಗಳಲ್ಲಿ ಮನವರಿಕೆ ಮಾಡಿಕೊಡಬೇಕು,’ ಎಂದು ಎಲ್ಲ ವಿವಿಗಳ ಕುಲಪತಿಗಳಿಗಳಿಗೆ ಯುಜಿಸಿ ಸೂಚಿಸಿದೆ. 

ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ಪಾಕ್‌ ಉಗ್ರರ ದಾಳಿಗೆ ಪ್ರತಿಯಾಗಿ, ಭಾರತೀಯ ಯೋಧರು ಪಾಕ್‌ ನೆಲದೊಳಗೆ ರಹಸ್ಯವಾಗಿ ನುಗ್ಗಿ, ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ್ದರು. ಈ ದಾಳಿಯ ವೇಳೆ ಹಲವು ಉಗ್ರರ ಬಲಿಯಾಗಿದ್ದರು.

click me!