ಇನ್ಮುಂದೆ ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ!

By Web DeskFirst Published Sep 19, 2018, 1:46 PM IST
Highlights

ಕೇಂದ್ರ ಸರ್ಕಾರದ ನಹುನಿರೀಕ್ಷಿತ ತ್ರಿವಳಿ ತಲಾಕ್​ ಮಸೂದೆಗೆ ಕೊನೆಗೂ ಅನುಮೋದನೆ ದೊರೆತಿದೆ. 

ನವದೆಹಲಿ, (ಸೆ.19): ಕೇಂದ್ರ ಸರ್ಕಾರ ಬಹುನಿರೀಕ್ಷಿತ ತ್ರಿವಳಿ ತಲಾಕ್​ ಮಸೂದೆಗೆ ಕೊನೆಗೂ ಅನುಮೋದನೆ ದೊರೆತಿದೆ. 

ತ್ರಿವಳಿ ತಲಾಕ್​ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು [ಬುಧವಾರ] ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತ್ರಿವಳಿ ತಲಾಕ್​​ ನಿಷೇಧ ಸುಗ್ರೀವಾಜ್ಞೆಗೆ ಗ್ರೀನ್ ಸಿಗ್ನಲ್ ನೀಡಿದೆ. 

ತ್ರಿವಳಿ ತಲಾಕ್​​ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ದೊರೆತಿತ್ತು, ಆದರೆ, ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿರಲಿಲ್ಲ. ಇದೀಗ ರಾಜ್ಯಸಭೆಯೂ ಸಹ ಒಪ್ಪಿಗೆ ಸೂಚಿಸಿದ್ದು, ಈ ಮೂಲಕ ಇನ್ಮುಂದೆ ತ್ರಿವಳಿ ತಲಾಕ್​​ ಶಿಕ್ಷಾರ್ಹ ಅಪರಾಧವಾಗಲಿದೆ.

ಆಗಸ್ಟ್​ನಲ್ಲಿ ಕೇಂದ್ರ ಸರ್ಕಾರ ತ್ರಿವಳಿ ತಲಾಕ್​ ಮಸೂದೆಗೆ 3 ತಿದ್ದುಪಡಿಗಳನ್ನು ತಂದಿತ್ತು. ಪ್ರಸ್ತಾವಿತ ತಿದ್ದುಪಡಿ ಪ್ರಕಾರ, ತ್ರಿವಳಿ ತಲಾಕ್ ಜಾಮೀನು ರಹಿತ ಅಪರಾಧವಾಗಿಯೇ ಮುಂದುವರಿಯಲಿದೆ. ಆದರೆ, ಪತ್ನಿಯ ಅಭಿಪ್ರಾಯ ಪಡೆದು ನ್ಯಾಯಾಧೀಶರು ಜಾಮೀನು ನೀಡಬಹುದು. ಮಕ್ಕಳನ್ನು ತನ್ನ ವಶಕ್ಕೆ ನೀಡುವಂತೆ ತಾಯಿ ಅರ್ಜಿ ಹಾಕಬಹುದು. 

click me!