ಮರೆಯಲಾಗದ ಗಿಫ್ಟ್ ಕೊಟ್ಟ ಪ್ರವಾಸಿಗ!, ಕುಣಿದು ಕುಪ್ಪಳಿಸಿದ ಉಗಾಂಡಾ ಮಹಿಳೆ

Published : Jun 23, 2019, 04:40 PM IST
ಮರೆಯಲಾಗದ ಗಿಫ್ಟ್ ಕೊಟ್ಟ ಪ್ರವಾಸಿಗ!, ಕುಣಿದು ಕುಪ್ಪಳಿಸಿದ ಉಗಾಂಡಾ ಮಹಿಳೆ

ಸಾರಾಂಶ

ಉಗಾಂಡಾ ಮಹಿಳೆಗೆ ಸಿಕ್ತು ಒಂದು ಜೊತೆ ಶೂ| ಶೂ ಕಂಡು ಕುಣಿದು ಕುಪ್ಪಳಿಸಿದ ಮಹಿಳೆ| ಮೊದಲ ಬಾರಿ ಶೂ ಧರಿಸಿದ ಮಹಿಳೆಗೆ ಅದೇ ಅತ್ಯಮೂಲ್ಯ ಗಿಫ್ಟ್| ಮಹಿಳೆಯ ಖುಷಿಯಲ್ಲಿ ಪಾಲ್ಗೊಂಡ ದಾರಿಹೋಕರು

ಕಂಪಾಲಾ[ಜೂ.23]: ಉಗಾಂಡಾದ ಮಹಿಳೆಯೊಬ್ಬಳ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಮೊದಲ ಬಾರಿ ಈ ಮಹಿಳೆಗೆ ಶೂ ಧರಿಸಿದ ಆಕೆ, ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾಳೆ. ಸದ್ಯ ಈ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ. ಹೌದು ಫ್ಯಾಷನ್ ಗಾಗಿ ಒಂದಾದ ಬಳಿಕ ಮತ್ತೊಂದರಂತೆ ಚಪ್ಪಲಿ ಖರೀದಿಸಿ ಮನೆಯ ಮೂಲೆಯಲ್ಲಿ ಗುಡ್ಡೆ ಬಿದ್ದರೂ, ಹೊಸ ಚಪ್ಪಲಿ ಬೇಕು ಎಂದು ಹಠ ಹಿಡಿಯುವ ಪ್ರತಿಯೊಬ್ಬರೂ ಈ ವಿಡಿಯೋ ನೋಡಲೇಬೇಕು.

ಈ ವಿಡಿಯೋವನ್ನು ಜೂನ್ 15 ರಂದು ರೆಕಾರ್ಡ್ ಮಾಡಲಾಗಿದೆ. ಗೌರಾ ಗ್ರಿಯರ್ ಬ್ರಿವಂಡಿ ಹೆಸರಿನ ಪರ್ಯಟಕನೊಬ್ಬ ಉಗಾಂಡಾದ ನ್ಯಾಷನಲ್ ಪಾರ್ಕ್ ಗೆ ತೆರಳಿದಾಗ ಮಹಿಳೆಯೊಬ್ಬಳು ಸುಡು ಬಿಸಿಲಿದ್ದರೂ ಬರಿಗಾಲಿನಲ್ಲಿ ನಡೆಯುತ್ತಿರುವುದನ್ನು ನೋಡುತ್ತಾರೆ. ಬಳಿಕ ಆಕೆಯ ಬಳಿ ಶೂ ಖರೀದಿಸಲು ಹಣವಿಲ್ಲವೆಂದು ತಿಳಿದ ಆ ಪರ್ಯಟಕ, ತಾನೇ ಒಂದು ಜೊತೆ ಶೂ ಖರೀದಿಸಿ ಆಕೆಗೆ ಗಿಫ್ಟ್ ಆಗಿ ನೀಡುತ್ತಾನೆ. 

ಪರ್ಯಟಕ ನೀಡಿದ ಗಿಫ್ಟ್ ನೋಡಿ ಅಚ್ಚರಿಯಿಂದಲೇ ಅದನ್ನು ಬಿಡಿಸುವ ಆ ಮಹಿಳೆ, ತನಗೊಂದು ಜೊತೆ ಶೂ ಸಿಕ್ಕಿದೆ ಎಂದು ತಿಳಿದಾಗ ಖುಷಿ ತಡೆಯಲಾರದೆ ಕುಣಿದು ಕುಪ್ಪಳಿಸುತ್ತಾಳೆ. ಕೂಡಲೇ ಅದನ್ನು ಧರಿಸಿ ಗಿಫ್ಟ್ ಕೊಟ್ಟ ಆ ಪರ್ಯಟಕನಿಗೆ ಧನ್ಯವಾದ ಎನ್ನುತ್ತಾಳೆ. ಗಿಫ್ಟ್ ಪಡೆದ ಮಹಿಳೆಗೆ ಆ ಒಂದು ಜೊತೆ ಶೂ ಅತ್ಯಮೂಲ್ಯವಾಗಿದ್ದವು.

ಮಹಿಳೆಯ ಖುಷಿಯಲ್ಲಿ ಪಾಲ್ಗೊಂಡ ದಾರಿಹೋಕರು

ರಸ್ತೆಯ್ಲಲಿ ನಡೆದಾಡುತ್ತಿದ್ದ ಸಾರ್ವಜನಿಕರೂ ಮಹಿಳೆಯ ಖುಷಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಪರ್ಯಟಕ ಗ್ರಿಯರ್ 'ಮಹಿಳೆ ಇದಕ್ಕೂ ಮೊದಲು ಒಂದು ಬಾರಿಯೂ ಶೂ ಧರಿಸಿರಲಿಲ್ಲ. ಹೀಗಿರುವಾಗ ಆಕೆಗೊಂದು ಜೊತೆ ಶೂ ಗಿಫ್ಟ್ ಕೊಡುವ ಎಂಬ ಯೋಚನೆ ಬಂtu. ಆದರೆ ಅದನ್ನು ಸ್ವೀಕರಿಸಿದ ಬಳಿಕ ಆಕೆ ವ್ಯಕ್ತಪಡಿಸಿದ ಅ ಖುಷಿ ನನ್ನ ಕಣ್ಣುಗಳನ್ನು ತೇವಗೊಳಿಸಿದೆ' ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ 9.67 ಲಕ್ಷ ಟನ್‌ ತೊಗರಿ ಖರೀದಿಗೆ ಕೇಂದ್ರ ಅಸ್ತು
ಉತ್ತರ ಕರ್ನಾಟಕಕ್ಕೆ ಕೊಟ್ಟ ಭರವಸೆ ಈಡೇರಿಕೆ ಬಗ್ಗೆ ಶ್ವೇತಪತ್ರ ಹೊರಡಿಸಿ: ಆರ್‌.ಅಶೋಕ್‌