ಶಿರೂರು ಶ್ರೀ ಸಾವು : ಹೊಸ ಬೇಟೆಗೆಇಳಿದ ಪೊಲೀಸರು

By Web DeskFirst Published Aug 2, 2018, 8:40 AM IST
Highlights

ಶಿರೂರು ಶ್ರೀ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ಆಯಾಮದಲ್ಲಿ ತನಿಖೆಯನ್ನು ಆರಂಭಿಸಿದ್ದಾರೆ. ಪೊಲೀಸರು ಎಲ್ಲಾ ಕೀಟನಾಶಕ ಅಂಗಡಿಗಳಿಗೆ ಭೇಟಿ ನೀಡಿ ವಿಚಾರಣೆ ಕೈಗೊಂಡಿದ್ದಾರೆ. 

ಉಡುಪಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥರ ಮೃತದೇಹದಲ್ಲಿ ಸಂಶಯಾಸ್ಪದ ವಿಷಕಾರಿ ಅಂಶಗಳು ಪತ್ತೆಯಾಗಿವೆ ಎಂಬ ಕೆಎಂಸಿ ವೈದ್ಯರ ಆಧರಿಸಿ ಈಗ ಪೊಲೀಸರು ತನಿಖೆ ನಡೆಸುತ್ತಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಪೊಲೀಸರ ತಂಡವೊಂದು ರಸಗೊಬ್ಬರ - ಕೀಟನಾಶಕಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಭೇಟಿ ನೀಡಿದೆ. ಈ ಕೀಟನಾಶಕ-ರಸಗೊಬ್ಬರ ಅಂಗಡಿಗಳಲ್ಲಿ ಮಾರಾಟ ಮಾಡಲಾಗುವ ಕೀಟನಾಶಕಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.  

ಚಿನ್ನಾಭರಣ ಸೋದೆ ಮಠಕ್ಕೆ ಹಸ್ತಾಂತರ: ಶಿರೂರು ಶ್ರೀಗಳ ನಿಧನದ ನಂತರ ಪೊಲೀಸರು ತನಿಖೆಗಾಗಿ ತಮ್ಮ ಸುಪರ್ದಿಕ್ಕೆ ತೆಗೆದುಕೊಂಡಿದ್ದ ಶ್ರೀಗಳ ಚಿನ್ನಾಭರಣ, ಹಳೆಯ ಅಮೂಲ್ಯ ವಸ್ತುಗಳು ಮುಂತಾದವುಗಳನ್ನು ಬುಧವಾರ ಶಿರೂರಿನ ದ್ವಂದ್ವ ಮಠವಾದ ಸೋದೆ ಮಠಕ್ಕೆ ಹಸ್ತಾಂತರಿಸಿದ್ದಾರೆ. 

ಉಸ್ತುವಾರಿ ಸಮಿತಿ ನೇಮಕ: ಇದೇವೇಳೆ ಸೋದೆ ಮಠದ ಪರವಾಗಿ ಶಿರೂರು ಮಠದ ಉಸ್ತುವಾರಿಯನ್ನು ನೋಡಿಕೊಳ್ಳಲು ೫ ಮಂದಿಯ ಸಮಿತಿಯೊಂದನ್ನು ನೇಮಿಸಲಾಗಿದೆ. ರಹಸ್ಯ ಆರಾಧನೆ: ಶ್ರೀಪಾದರ ಆರಾಧನೆಯನ್ನು ಶ್ರೀಗಳ ಪೂರ್ವಾಶ್ರಮದ ಸಂಬಂಧಿಕರು ಮೂಲ್ಕಿ ಸಮೀಪದ ಶಿಮಂತೂರು ಆದಿಜನಾರ್ದನ ದೇವಸ್ಥಾನದಲ್ಲಿ ಮಂಗಳವಾರ ರಹಸ್ಯವಾಗಿ ನೆರವೇರಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

click me!